ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರಾ ಪಂತ್?: ಕಾರಣ ಈ 3 ಅಂಶಗಳು!

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಅತ್ಯುತ್ತಮ ವಿಕೆಟ್ ಕೀಪರ್- ಬ್ಯಾಟರ್ ಯಾರು ಎಂಬ ಪ್ರಶ್ನೆಗೆ ಉತ್ತರ ಬಹಳ ಸುಲಭ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಂಬುದನ್ನು ಎಲ್ಲಾ ಕ್ರಿಕೆಟ್ ಪ್ರೇಮಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಎಂಎಸ್ ಧೋನಿಯ ದಾಖಲೆಗಳು ಪುರಾವೆ ಒದಗಿಸುತ್ತದೆ. ತಾಳ್ಮೆ, ವಿಶೀಷ್ಠ ಶೈಲಿ, ಚಾಕಚಕ್ಯತೆ, ವೇಗ ಇವೆಲ್ಲವೂ ಎಲ್ಲರಿಗಿಂತ ಧೋನಿಯನ್ನು ಅಗ್ರಸ್ಥಾನದಲ್ಲಿರಿಸುತ್ತದೆ.
ಆದರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಎರಡು ವರ್ಷಗಳಾಗುತ್ತಾ ಬಂದಿದೆ. ಈ ಅವಧಿಯಲ್ಲಿ ವಿಕೆಟ್ ಕೀಪಿಂಗ್‌ನಲ್ಲಿ ಭಾರತಕ್ಕೆ ಭರವಸೆ ಮೂಡಿಸಿರುವ ಆಟಗಾರ ಬೇರೆ ಯಾರೂ ಅಲ್ಲ ಅದು ರಿಷಭ್ ಪಂತ್. 24ರ ಹರೆಯದ ದೆಹಲಿ ಮೂಲದ ರಿಷಭ್ ಪಂತ್ ಧೋನಿ ನಿವೃತ್ತಿಯ ಬಳಿಕ ಈ ಜವಾಬ್ಧಾರಿ ವಹಿಸಿಕೊಂಡಿದ್ದು ಪಂದ್ಯದಿಂದ ಪಂದ್ಯಕ್ಕೆ ಬೆಳವಣಿಗೆ ಸಾಧಿಸುತ್ತಾ ಭತವಸೆ ಮೂಡಿಸುತ್ತಿದ್ದಾರೆ.
ವಿಕೆಟ್ ಕೀಪರ್ ಆಗಿ ಆರಂಭದಲ್ಲಿ ವೈಫಲ್ಯವನ್ನು ಕಂಡಿದ್ದರೂ ಪ್ರಸ್ತುತ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಗುರಿತಿಸಿಕೊಂಡಿದ್ದಾರೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಅವರಿಗಿಂತ ಉತ್ತಮ ಆಯ್ಕೆ ಎನಿಸಿಕೊಂಡಿದ್ದಾರೆ ಪಂತ್. ವಿಕೆಟ್ ಕೀಪರ್ ಬ್ಯಾಟರ್ ಆಗಿ ಭಾರತ ತಂಡದ ಅತ್ಯುತ್ತಮ ಆಟಗಾರ ಎನಿಸಿಕೊಳ್ಳುವ ಅವಕಾಶ ರಿಷಭ್ ಪಂತ್‌ಗೆ ಹೆಚ್ಚಾಗಿದೆ. ಅದಕ್ಕೆ ಕಾರಣವಾದ ಕೆಲ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ..
ಸ್ವಾಭಾವಿಕ ಅಥ್ಲೀಟ್ ರಿಷಭ್ ಪಂತ್
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ರೀತಿ ರಿಷಭ್ ಪಂತ್ ಕುಡ ತಂಡದಲ್ಲಿನ ಅತ್ಯುತ್ತಮ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಈ ಹಂತದಲ್ಲಿ ರಿಷಬ್ ಪಂತ್ ಜಿಮ್ನ್ಯಾಸ್ಟ್ ಆಗಿಯೂ ಪಳಗಿದ್ದಾರೆ. ಬ್ಯಾಕ್ ಫ್ಲಿಪ್, ಫ್ರಂಟ್ ಫ್ಲಿಪ್ ಅಲ್ಲದೆ ಕಿಕ್ ಅಪ್‌ನಂತಾ ಸಾಹಸಗಳನ್ನು ಪಂತ್ ಮಾಡಬಲ್ಲವರಾಗಿದ್ದಾರೆ. ಇನ್ನು ವಿಕೆಟ್ ಕೀಪಿಂಗ್ ತಂಡದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವ ಕಾರಣ ಫಿಟ್‌ನೆಸ್, ಏಕಾಗ್ರತೆ, ಕೌಶಲ್ಯತೆಗಳು ಬಹಳ ಅಗತ್ಯವಾಗಿದೆ. ಇವೆಲ್ಲವೂ ರಷಭ್ ಪಂತ್ ಅವರಲ್ಲಿ ಉತ್ತಮ ಪ್ರಮಾಣದಲ್ಲಿರುವುದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಈ ವಿಚಾರವಾಗಿ ಅವರು ಸಾಕಷ್ಟು ಪ್ರಗತಿಯನ್ನು ಕೂಡಸಾಧಿಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಳ್ಳುವ ಸಾಧ್ಯತೆಯಿದೆ.

ಕೈ ಹಾಗೂ ಕಣ್ಣಿನ ಮಧ್ಯೆ ಅತ್ಯುತ್ತಮ ಸಮನ್ವಯತೆ
ಯಶಸ್ವಿ ವಿಕೆಟ್ ಕೀಪರ್ ಎನಿಸಿಕೊಳ್ಳಲು ಇರುವ ಪ್ರಮುಖ ಗುಣ ಎಂದರೆ ಕೂ ಹಾಗೂ ಕಣ್ಣಿನ ನಡುವಿನ ಅತ್ಯುತ್ತಮ ಸಮನ್ವಯತೆ. ಪ್ರತಿ ಪಿಚ್ ಕೂಡ ಭಿನ್ನವಾಗಿದ್ದು ಭಿನ್ನವಾದ ರೀತಿಯಲ್ಲಿ ಬೌನ್ಸ್ ತಿರುವುಗಳನ್ನು ಪಡೆಯುತ್ತದೆ. ಎದುರಾಳಿ ಬ್ಯಾಟರ್‌ಗಳು ಈ ಪಿಚ್‌ಗಳ ಸವಾಲನ್ನು ಹೇಗೆ ಎದುರಿಸಲು ಸಿದ್ಧವಾಗುತ್ತಾರೋ ಅದೇ ಸವಾಲು ವಿಕೆಟ್ ಕೀಪರ್ ಕೂಡ ಎದುರಿಸಬೇಕಾಗುತ್ತದೆ. ಈ ವಿಚಾರವಾಗಿಯೂ ರಿಷಬ್ ಪಂತ್ ಅವರು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಹೀಗಾಗಿ ಇದು ಕೂಡ ಉತ್ತಮ ಬೆಳವಣಿಗೆಯಾಗಿದೆ.

ಅತ್ಯುತ್ತಮ ಆಟಗಾರರಿಂದ ಕಲಿಕೆ
ರಿಷಬ್ ಪಂತ್‌ಗೆ ದೊರೆತ ಮತ್ತೊಂದು ದೊಡ್ಡ ಸಕಾರಾತ್ಮಕ ಸಂಗತಿಯೆಂದರೆ ಕಲಿಕೆಯ ಹಂತದಲ್ಲಿ ದೊರೆದ ದೊಗ್ಗಜ ಆಟಗಾರರು. ಅದರಲ್ಲೂ 18ರ ಹರೆಯದಲ್ಲಿ ಭಾರತೀಯ ತಮಡದಲ್ಲಿ ಪಂತ್ ಸ್ಥಾನ ಪಡೆದಾಗ ತಂಡದಲ್ಲಿ ಎಂಎಸ್ ಧೋನಿಯಂತಾ ದಿಗ್ಗಜ ಆಟಗಾರ ಇದ್ದರು. ಹೀಗಾಗಿ ಕಲಿಯಲು ಅತ್ಯುತ್ತಮ ಅವಕಾಶ ದೊರೆತಿದೆ. ಧೋನಿ ಮಾತ್ರವಲ್ಲ ವೃದ್ಧಿಮಾನ್ ಸಾಹಾ ಕೂಡ ರಿಷಭ್ ಪಂತ್ ಬೆಳವಣಿಗೆಯಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದರೆ ತಪ್ಪಾಗಲಾರದು. ಸಾಕಷ್ಟು ಅತ್ಯುತ್ತಮ ಸಲಹೆಗಳನ್ನು ವೃದ್ಧಿಮಾನ್ ಸಾಹಾ ಕೂಡ ನೀಡಿದ್ದು ಅವುಗಳು ಕೂಡ ಪಂತ್ ಬೆಳವಣಿಗೆಯಲ್ಲಿ ಸಹಕಾರಿಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರಿಷಭ್ ಪಂತ್ ಸದ್ಯ ಭಾರತ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications