Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧ ಈ ದಾಖಲೆ ಮಾಡಿದ ಮೊದಲ ಭಾರತೀಯ ಪಂತ್

Rishabh Pant is the first Indian batsman to score 25+ runs in 8 consecutive innings in Australia

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್‌ನಲ್ಲಿ ಆಡಿದ್ದ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಅಂಥ ಗಮನಾರ್ಹ ಪ್ರದರ್ಶನ ನೀಡಿಲ್ಲ. ಆದರೆ ಪಂತ್ ವಿಕೆಟ್ ಕೀಪಿಂಗ್, ಚುರುಕುತನದಲ್ಲಿ ಗಮನ ಸೆಳೆದಿದ್ದರು. ಇದರ ಜೊತೆಗೆ ಪಂತ್ ಭಾರತೀಯರ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸತತ 8 ಇನ್ನಿಂಗ್ಸ್‌ಗಳಲ್ಲಿ 25ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯನಾಗಿ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಮೈಲಿಗಲ್ಲು ಸ್ಥಾಪಿಸಿದ್ದಾರೆ. ದ್ವಿತೀಯ ಟೆಸ್ಟ್‌ನ ಒಂದು ಇನ್ನಿಂಗ್ಸ್‌ನಲ್ಲಿ (ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಂತ್‌ಗೆ ಬ್ಯಾಟಿಂಗ್‌ ಸಿಕ್ಕಿರಲಿಲ್ಲ) ಪಂತ್ 29 ರನ್ ಗಳಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಇನ್ನಿಂಗ್ಸ್‌ಗಳಲ್ಲಿ ಪಂತ್ ಕ್ರಮವಾಗಿ 25, 28, 36, 30, 39, 33, 159*, 29 ರನ್ ಗಳಿಸಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ ಒಬ್ಬ ಕಾಂಗರೂ ಪಡೆಯ ವಿರುದ್ಧ ಸತತ 8ಕ್ಕೂ ಹೆಚ್ಚು ಬಾರಿ 25ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯಿಲ್ಲ. ಈ ದಾಖಲೆ ಮಾಡಿದ ಮೊದಲಿಗ ಪಂತ್.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಸೋಲನುಭವಿಸಿದ್ದ ಭಾರತ, ದ್ವಿತೀಯ ಪಂದ್ಯದಲ್ಲಿ 8 ವಿಕೆಟ್ ಜಯಗಳಿಸುವುದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಂಡಿದೆ. ಅಂದ್ಹಾಗೆ, ದ್ವಿತೀಯ ಟೆಸ್ಟ್‌ನಲ್ಲಿ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್‌ ಮತ್ತು ರಿಷಭ್ ಪಂತ್ ಮಧ್ಯೆ ಬಿಸಿ ಸಂಭಾಷಣೆ ಗಮನ ಸೆಳೆದಿತ್ತು.

Story first published: Tuesday, December 29, 2020, 16:37 [IST]
Other articles published on Dec 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+