IPL 2024: ಡೆಲ್ಲಿ ಕ್ಯಾಂಪ್ ಸೇರಿದ ರಿಷಭ್ ಪಂತ್: 'ಪದಾರ್ಪಣೆ ಮಾಡಿದ ಅನುಭವ'
IPL 2024 ಕ್ಕೆ ವೇದಿಕೆ ಸಿದ್ಧವಾಗಿದೆ. ಮೆಗಾ ಈವೆಂಟ್‌ಗಾಗಿ ತಂಡಗಳು ತಮ್ಮ ತಯಾರಿಯನ್ನು ಪ್ರಾರಂಭಿಸಿವೆ. ಈ ಪಂದ್ಯಾವಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೆ ಅಂಗಳಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.
ನಾನು ಅಂಗಳಕ್ಕೆ ಇಳಿಯಲು ಕಾತುರನಾಗಿದ್ದನೇ. ಅಷ್ಟೇ ಭಯವಿದೆ. ಪದಾರ್ಪಣೆ ಪಂದ್ಯ ಆಡುವ ಅನುಭ ಆಗುತ್ತಿದೆ ಎಂದು ರಿಷಭ್ ಪಂತ್ ತಿಳಿಸಿದ್ದಾರೆ.

2022 ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್, ಸುಮಾರು ಒಂದು ವರ್ಷ ನಾಲ್ಕು ತಿಂಗಳು ಬಳಿಕ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಆವೃತ್ತಿಯಲ್ಲಿ ಆಡಲು ಬಿಸಿಸಿಐ ಫಿಟ್ ಎಂದು ಘೋಷಿಸಿದೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸಲಿದ್ದು, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿಯೂ ಆಡಲಿದ್ದಾರೆ.
ಬಿಸಿಸಿಐ ಅವರು ಫಿಟ್ ಎಂದು ಘೋಷಿಸಿ ಟ್ವಿಟರ್‌ನಲ್ಲಿ ಸುದ್ದಿಯನ್ನು ಪೋಸ್ಟ್ ಮಾಡಿದ ನಂತರ, ಎಲ್ಲಾ ಫ್ರಾಂಚೈಸಿಗಳು ಕ್ರಿಕೆಟಿಗನನ್ನು ಭಾವನಾತ್ಮಕ ಸಂದೇಶಗಳೊಂದಿಗೆ ಸ್ವಾಗತಿಸಿದ್ದಾರೆ. ಮತ್ತು ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ 2024 ರಲ್ಲಿ ರಿಷಭ್ ಪಂತ್ ಅವರ ಆಟವನ್ನು ನೋಡಲು ಎಲ್ಲರೂ ಕಾತರುರಾಗಿದ್ದಾರೆ.
ರಿಷಭ್ ಪಂತ್ ತಂಡದ ತರಬೇತಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಅಲ್ಲದೆ ಡೆಲ್ಲಿ ತಂಡದ ಪರ ಆಡಲು ಸಿದ್ಧರಿರುವದಾಗಿ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ನಾಯಕ ಪಂತ್ ಅವರನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದೆ. ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಮಗುವಿಗೆ ವಿಶೇಷ ಜರ್ಸಿಯನ್ನು ಕಳುಹಿಸಲಾಗಿದೆ. ಅದು "ನಿಮ್ಮನ್ನು ಬಹಳಷ್ಟು ಕಳೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ಯುವ ಆಟಗಾರನ ಮರಳುವಿಕೆಯನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿರುವುದರಿಂದ ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಶ್ವಕಪ್‌ನಲ್ಲಿ ಪಂತ್?
ಡಿಸೆಂಬರ್ 2022 ರ ನಂತರ ಮೊದಲ ಬಾರಿಗೆ, ರಿಷಬ್ ಪಂತ್ ಮಾರ್ಚ್ 23 ರಂದು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚಂಡೀಗಢದಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರು ಉತ್ತಮ ಪ್ರದರ್ಶನ ನೀಡಿದರೆ, ಟಿ20 ವಿಶ್ವಕಪ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಿರುವುದರಿಂದ ಎಲ್ಲರ ಕಣ್ಣುಗಳು ಅವರ ಮೇಲಿರುತ್ತವೆ.
ರಿಷಭ್ ಪಂತ್ ನೆಟ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಮಾಡುತ್ತಿದ್ದಾರೆ. ಅವರು ಫಿಟ್ ಆಗಿದ್ದರೆ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಬಿಸಿಸಿಐ ಫಿಟ್ ಎಂದು ಘೋಷಿಸುವ ಒಂದು ದಿನದ ಮೊದಲು ಶಾ ಮಾಧ್ಯಮಗಳಿಗೆ ಹೇಳಿದ್ದರು. ರಿಷಭ್ ಪಂತ್ ಐಪಿಎಲ್ ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications