ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಸೇರಿಸಿದ ರಿಷಭ್ ಪಂತ್

ನವದೆಹಲಿ: ಭಾರತದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವು ನೀಡಿದ್ದಾರೆ. ಆರ್ಥಿಕ ನೆರವು ನೀಡಿರುವ ಪಂತ್, ಆ ಹಣ ಆಮ್ಲಜನಕ ಸಿಲಿಂಡರ್‌ಗಳ ಉತ್ಪಾದನೆಗೆ, ಬೆಡ್‌ಗಳ ಸೌಲಭ್ಯಕ್ಕೆ ಮತ್ತು ಕೋವಿಡ್ ರಿಲೀಫ್ ಕಿಟ್‌ಗಳ ಖರೀದಿಗೆ ಸಹಾಯವಾಗಲಿದೆ ಎಂದಿದ್ದಾರೆ.
ಮೇ 8ರ ಶನಿವಾರ ರಿಷಭ್ ಪಂತ್ ಟ್ವೀಟ್ ಮೂಲಕ ಈ ವಿಚಾರ ತಿಳಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಭಾರತ ಬಹಳ ಸಮಸ್ಯೆ ಎದುರಿಸುತ್ತಿದೆ. ದೇಶದ ಈ ಪರಿಸ್ಥಿತಿ ನನಗೂ ಪರಿಣಾಮ ಬೀರಿದೆ ಎಂದು ಉದ್ದ ಸಂದೇಶ ಬರೆದುಕೊಂಡಿರುವ ಪಂತ್ ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವು ನೀಡಿರುವುದಾಗಿ ಹೇಳಿದ್ದಾರೆ.
'ನಾನು ಹೇಮಕುಂಟ್ ಫೌಂಡೇಶನ್‌ಗೆ ಆರ್ಥಿಕ ನೆರವು ನೀಡುತ್ತಿದ್ದೇನೆ. ಅದರಿಂದ ಆಕ್ಸಿಜನ್ ಸಿಲಿಂಡರ್‌ಗಳು, ಬೆಡ್‌ಗಳು ಮತ್ತು ಕೋವಿಡ್ ಕಿಟ್‌ಗಳನ್ನು ಖರೀದಿಸಲು ಸಹಾಯವಾಗಲಿದೆ. ನಾನು ಸಂಸ್ಥೆಗಳ ಜೊತೆಗಿದ್ದು ಭಾರತದ ಗ್ರಾಮೀಣ ಭಾಗಗಳಲ್ಲಿ ಸಹಾಯ ನೀಡಲು ಉತ್ಸುಕನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
2021ರ ಪಾಯಿಂಟ್ ಟೇಬಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಂ.1 ಸ್ಥಾನದಲ್ಲಿದೆ. ಆದರೆ ಐಪಿಎಲ್ ಬಯೋ ಬಬಲ್ ಒಳಗೆ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಈ ಬಾರಿಯ ಐಪಿಎಲ್ ಅಮಾನತಾಗಿತ್ತು. ಕೇವಲ 29 ಪಂದ್ಯಗಳಷ್ಟೇ ನಡೆದಿದ್ದವು. ಇನ್ನೂ 31 ಪಂದ್ಯಗಳು ಬಾಕಿಯಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications