IPL Auction 2024: ಖುದ್ದಾಗಿ ಬಿಡ್ಡಿಂಗ್ ವಾರ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್!
ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ನಡೆಯಲಿರುವ 2024ರ ಐಪಿಎಲ್ ಮಿನಿ ಹರಾಜಿಗೂ ಮುನ್ನ, ಎಲ್ಲಾ ಫ್ರಾಂಚೈಸಿಗಳ ಮಾಲೀಕರು ಅರಬ್ ನಗರವನ್ನು ತಲುಪಿದ್ದಾರೆ.
ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಾಯಕ ರಿಷಭ್ ಪಂತ್ ಅವರು ಖುದ್ದಾಗಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರೊಂದಿಗೆ ಫ್ರಾಂಚೈಸಿ ಟೇಬಲ್‌ನಲ್ಲಿ ಹಾಜರಾಗಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಭರ್ತಿ ಮಾಡಿಕೊಳ್ಳಲು 9 ಸ್ಲಾಟ್‌ಗಳನ್ನು ಹೊಂದಿದ್ದು, ಅದರಲ್ಲಿ 4 ಸಾಗರೋತ್ತರ ಆಟಗಾರರಿಗೆ ಮೀಸಲಾಗಿದೆ. ತಂಡದ ನಾಯಕರೊಬ್ಬರು ಹರಾಜು ಮೇಜಿನ ಬಳಿ ಇರುವುದು ಇದೇ ಮೊದಲ ಘಟನೆಯೇನಲ್ಲ.
ಈ ಹಿಂದೆ, ದಿನೇಶ್ ಕಾರ್ತಿಕ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿದ್ದಾಗ ಹರಾಜಿನಲ್ಲಿ ಭಾಗವಹಿಸಿದ್ದರು. ಸಾಮಾನ್ಯವಾಗಿ ಫ್ರಾಂಚೈಸಿಯ ಸಿಇಒಗಳು, ಕೋಚ್‌ಗಳು ಮತ್ತು ಕ್ರಿಕೆಟ್‌ನ ನಿರ್ದೇಶಕರು ಹರಾಜು ಟೇಬಲ್‌ನಲ್ಲಿ ಇರುತ್ತಾರೆ.
ಕಳೆದ ವರ್ಷ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡ ನಂತರ, ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಅವರ ಪುನರಾಗಮನಕ್ಕೆ ಸಂಪೂರ್ಣ ನಂಬಿಕೆ ಇಟ್ಟಿದೆ. ಇದೇ ವೇಳೆ ಹರಾಜು ಟೇಬಲ್‌ನಲ್ಲಿ ರಿಷಭ್ ಪಂತ್ ಅವರ ಉಪಸ್ಥಿತಿ ಇರುವುದು ಬಿಡ್ಡಿಂಗ್ ವಾರ್‌ಗೆ ಮತ್ತಷ್ಟು ಬಲ ಬಂದಿದೆ.
ಐಪಿಎಲ್‌ನ ಎಕ್ಸ್ ಖಾತೆಯು ಮೊದಲ ಬಾರಿಗೆ ಐಪಿಎಲ್ ಹರಾಜಿಗೆ ಹಾಜರಾಗಲು ರಿಷಭ್ ಪಂತ್ ತೆರೆದ ವಿಡಿಯೋವನ್ನು ಹಂಚಿಕೊಂಡಿದೆ. ಹರಾಜಿಗೆ ಹಾಜರಾಗಲು ತಾನು ಯಾವಾಗಲೂ ಯೋಚಿಸುತ್ತಿದ್ದೆ, ಆದರೆ ಅದು ಇಷ್ಟು ಬೇಗ ಸಾಕಾರಗೊಳ್ಳುತ್ತದೆ ಎಂದು ತಿಳಿದಿರಲಿಲ್ಲ ಎಂದು ರಿಷಭ್ ಪಂತ್ ಹೇಳಿದರು.
"ಒಂದು ದಿನ ನಾನು ಹೇಗಾದರೂ ತಂಡಕ್ಕೆ ಸಹಾಯ ಮಾಡಲು ಹರಾಜು ಮೇಜಿನ ಮೇಲೆ ಕುಳಿತುಕೊಳ್ಳುತ್ತೇನೆ ಎಂದು ನಾನು ಯೋಚಿಸುತ್ತಿದ್ದೆ. ನಾನು ಅದನ್ನು ಮಾಡಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ಆಶಾದಾಯಕವಾಗಿ, ಇದು ಅದ್ಭುತ ಅನುಭವವಾಗಲಿದೆ. ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಮತ್ತು ಆಶಾದಾಯಕವಾಗಿ ನಾವು ಹರಾಜಿನಲ್ಲಿ ನಮಗೆ ಬೇಕಾದುದನ್ನು ಪಡೆಯುತ್ತೇವೆ," ಎಂದು ರಿಷಭ್ ಪಂತ್ ತಿಳಿಸಿದ್ದಾರೆ.
2024ರ ಐಪಿಎಲ್ ಮುಂಚಿತವಾಗಿ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕರನ್ನಾಗಿ ಹೆಸರಿಸಲಾಗಿದೆ. 2024ರ ಪಂದ್ಯಾವಳಿ ವೇಳೆಗೆ ಪಂತ್ ತಮ್ಮ ಫಿಟ್‌ನೆಸ್‌ನಲ್ಲಿ ಅತ್ಯುತ್ತಮವಾಗಿರಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications