ಡೆಲ್ಲಿ ಕ್ಯಾಪಿಟಲ್ಸ್‌ಗೆ ವಿದಾಯ ಹೇಳಿದ ರಿಷಬ್ ಪಂತ್ ಭಾವುಕ ಪೋಸ್ಟ್
ಸೌದಿಯಲ್ಲಿ ಐಪಿಎಲ್ 2025ರ ಮೆಗಾ ಹರಾಜು ನಡೆದಿದೆ. ಈ ಹರಾಜಿನಲ್ಲಿ ಎಲ್ಲರ ಕಣ್ಣುಗಳನ್ನು ಕದ್ದ ಪ್ಲೇಯರ್ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್. ಕೆಎಲ್ ರಾಹುಲ್ ಅಂದುಕೊಂಡಷ್ಟು ದೊಡ್ಡ ಮೊತ್ತಕ್ಕೆ ಬಿಡ್ ಆಗಲಿಲ್ಲ. ಆದರೆ ರಿಷಭ್ ಪಂತ್ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್ ಅವರನ್ನು, ಲಕ್ನೋ ಸೂಪರ್ ಜೈಂಟ್ಸ್ ತಂಡ 27 ಕೋಟಿ ನೀಡಿ ಖರೀದಿ ಮಾಡಿದೆ. ಇನ್ನು ರಿಷಭ್ ಪಂತ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.
ದೆಹಲಿ ಕ್ಯಾಪಿಟಲ್ಸ್‌ನಲ್ಲಿ 9 ವರ್ಷಗಳ ಕಾಲ ಕಳೆದ ನಂತರ ಈಗ ಅವರು ಬೇರೆ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಅವರು ಭಾವನಾತ್ಮಕ ಪೋಸ್ಟ್ ಮಾಡಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಂತ್ ಐಪಿಎಲ್ ನಲ್ಲಿ ಹೊಸ ಪಯಣಕ್ಕೆ ತಯಾರಿ ನಡೆಸುತ್ತಿದ್ದಾರೆ. ಪೋಸ್ಟ್‌ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೃದಯ ಸ್ಪರ್ಷಿಯಾಗಿ ಪತ್ರವನ್ನು ಬರೆದಿದ್ದಾರೆ.

ಪಂತ್ ಡೆಲ್ಲಿ ಸೇರಿದ್ದು ಯಾವಾಗ?
ಪೋಸ್ಟ್‌ನಲ್ಲಿ ರಿಷಭ್ ಪಂತ್ ತಾವು ಡೆಲ್ಲಿ ಪರ ಆಡಿದ ಒಂಬತ್ತು ಆವೃತ್ತಿಗಳ ನೆನಪುಗಳನ್ನು ಒಂದು ಗೂಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ವಿದಾಯ ಹೇಳುವಾಗ, ಪಂತ್ ಅವರು ಯುವಕರಾಗಿ ತಂಡದೊಂದಿಗೆ ಹೇಗೆ ಸಂಬಂಧ ಹೊಂದಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಅಲ್ಲದೆ ರಿಷಭ್ ಅವರಿಗೆ ಅಪಘಾತವಾದಗ ಡೆಲ್ಲಿ ತಂಡ ಅವರೊಂದಿಗೆ ನಿಂತು ಕೊಂಡ ಬಗೆಯನ್ನು ಸಹ ಅವರು ನೆನಪಿಸಿಕೊಂಡಿದ್ದಾರೆ.
2016ರ ಅಂಡರ್-19 ವಿಶ್ವಕಪ್‌ನಲ್ಲಿ ಪಂತ್ ತಮ್ಮ ಆಕ್ರಮಣಕಾರಿ ಆಟದಿಂದ ಎಲ್ಲರನ್ನೂ ಆಕರ್ಷಿಸಿದ್ದರು. ಅದೇ ವರ್ಷದಲ್ಲಿ, ತಂಡವು ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದುವರೆಗೆ 111 ಪಂದ್ಯಗಳನ್ನು ಆಡಿರುವ ಪಂತ್, ಟೂರ್ನಿಯ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3248 ರನ್ ಗಳಿಸಿದ್ದಾರೆ. ಈ ಮೂಲಕ ಇವರು ಡಿಸಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಡೆಲ್ಲಿ ಪರ 2021, 2022 ಮತ್ತು 2024 ಆವೃತ್ತಿಗಳಲ್ಲಿ ನಾಯಕರಾಗಿದ್ದರು.
ಪೋಸ್ಟ್‌ನಲ್ಲಿ ಏನಿದೆ?
ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಅದ್ಭುತ ಕ್ಷಣ. ಈ ಪ್ರಯಾಣವನ್ನು ನಾನು ಊಹಿಸಿರಲಿಲ್ಲ. ನಾನು ಯುವಕ ಆಟಗಾರನಾಗಿ ತಂಡ ಸೇರಿದ್ದೆ. ಮತ್ತು ಕಳೆದ 9 ವರ್ಷಗಳಿಂದ ನಾವು ಒಟ್ಟಿಗೆ ಬೆಳೆದಿದ್ದೇವೆ ಎಂದು ತಿಳಿಸಿದ್ದಾರೆ. ಹೀಗೆ ಮುಂದುವರೆದ ಪೋಸ್ಟ್‌ನಲ್ಲಿ ಅಭಿಮಾನಿಗಳಿಗೂ ತಮ್ಮ ಸಂದೇಶ ನೀಡಿದ್ದಾರೆ. ನನ್ನನ್ನು ನಿಮ್ಮವನಾಗಿ ನೀವು ತಬ್ಬಿಕೊಂಡಿದ್ದೀರಿ, ಪ್ರೋತ್ಸಾಹಿಸಿದ್ದೀರಿ ಮತ್ತು ನನ್ನ ಜೀವನದ ಕಠಿಣ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ. ನಿಮ್ಮ ಪ್ರೀತಿ ಹಾಗೂ ಬೆಂಬಲ ನನ್ನೊಂದಿಗೆ ಸದಾ ಇರಲಿದೆ. ನಾನು ನಿಮ್ಮನ್ನು ರಂಜಿಸಲು ಎದುರು ನೋಡುತ್ತಿರುವೆ ಎಂದು ಭಾವುಕ ಪೋಸ್ಟ್ ಮಾಡಿದ್ದಾರೆ.
ರಿಷಭ್ ಪಂತ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯ ಐದು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications