ರಿಷಭ್ ಪಂತ್ ಲಕ್ನೋ ತಂಡವನ್ನು ಮುನ್ನಡೆಸುವುದು ಡೌಟ್
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಿಷಭ್ ಪಂತ್ ಅವರನ್ನು ದುಬಾರಿ ಬೆಲೆ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಈ ವೇಳೆ ಲಕ್ನೋ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಡಲಾಗಿರುವ ರಿಷಭ್ ಪಂತ್ ಅವರಿಗೆ 27 ಕೋಟಿ ರೂಪಾಯಿ ನೀಡಿತು. ಇಷ್ಟು ಭಾರೀ ಮೊತ್ತಕ್ಕೆ ಎಲ್‌ಎಸ್‌ಜಿ ತಂಡ ಕೊಂಡು, ಇವರಿಗೆ ಕ್ಯಾಪ್ಟನ್ ಪಟ್ಟ ನೀಡುತ್ತದೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಈಗ ಬರುತ್ತಿರುವ ಸುದ್ದಿ ನಿಜಕ್ಕೂ ರಿಷಭ್ ಪಂತ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಮುಂದಿನ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದೆ. ಹೀಗಾಗಿ ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಲಕ್ನೋ ತಂಡ ತನ್ನ ನಾಯಕನನ್ನೇ ಹರಾಜು ಅಂಗಳಕ್ಕೆ ಬಿಟ್ಟಿತ್ತು. ಹೀಗಾಗಿ ಎಲ್‌ಎಸ್‌ಜಿ ಒಬ್ಬ ಸೂಕ್ತ ನಾಯಕನ ಹುಡುಕಾಟದಲ್ಲಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ತಂಡ ಭಾರೀ ಮೊತ್ತವನ್ನು ನೀಡಿ ರಿಷಭ್ ಪಂತ್ ಅವರಿಗೆ ಮಣೆ ಹಾಕಿತು.

ಪಂತ್ ಕೈ ತಪ್ಪಿದ ಪಟ್ಟ?
ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿರುವ ರಿಷಭ್ ಪಂತ್ ಹೆಗಲಿಗೆ ನಾಯಕತ್ವವನ್ನು ನೀಡುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಲೆಕ್ಕಾಚಾರ ಆರಂಭಿಸಿದ್ದರು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಎಲ್‌ಎಸ್‌ಜಿ ಪರ ಪಂತ್ ಬರೀ ಪ್ಲೇಯರ್ ಆಗಿ ಮಾತ್ರ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಲಕ್ನೋ ತನ್ನ ತಂಡದಲ್ಲಿದ್ದ ಆಟಗಾರರಿಗೆ ನಾಯಕತ್ವ ನೀಡುವ ಸಾಧ್ಯತೆ ಇದೆ.
ವರದಿಗಳನ್ನು ನಂಬುವುದಾದರೆ, ವೆಸ್ಟ್ ಇಂಡೀಸ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಎಲ್‌ಎಸ್‌ಜಿ ನಾಯಕರನ್ನಾಗಿ ಮಾಡವ ಸಾಧ್ಯತೆ ಇದೆ. ಎಲ್‌ಎಸ್‌ಜಿ ಪೂರನ್ ಅವರನ್ನು 21 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಇನ್ನು ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಪೂರನ್ ಹಲವಾರು ಪಂದ್ಯಗಳಲ್ಲಿ ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ಲಕ್ನೋ ತಂಡದ ಉಪನಾಯಕರಾಗಿದ್ದರು. ಹೀಗಾಗಿ ಈ ಬಾರಿ ಅವರ ಹೆಗಲಿಗೆ ನಾಯಕತ್ವದ ಹೋಣೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಬಾರಿಯ ಐಪಿಎಲ್‌ನಲ್ಲಿ ರಿಷಭ್ ಪಂತ್ ಬರೀ ಆಟಗಾರನಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಪೂರನ್ ಐಪಿಎಲ್ ಸಾಧನೆ
ನಿಕೋಲಸ್ ಪೂರನ್ ಪಂಜಾಬ್ ಕಿಂಗ್ಸ್ ಪರ 2019ರಲ್ಲಿ ಪದಾರ್ಪಣೆ ಮಾಡಿದ್ದರು. ಬಳಿಕ 2022ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಾಣಿಸಿಕೊಂಡರು. ಇನ್ನು 2023 ಹಾಗೂ 2024ರಲ್ಲಿ ಪೂರನ್ ಲಕ್ನೋ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಈ ವರೆಗೆ 76 ಐಪಿಎಲ್ ಪಂದ್ಯಗಳ 73 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 162.29 ಸ್ಟ್ರೈಕ್ ರೇಟ್‌ನಲ್ಲಿ 1769 ರನ್ ಸಿಡಿಸಿ ಭರವಸೆ ಮೂಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications