Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐದನೇ ಟೆಸ್ಟ್‌ಗೂ ಮುನ್ನವೇ ಭಾರತಕ್ಕೆ ಪೆಟ್ಟು: ಪಂತ್ ಸರಣಿಯಿಂದ ಔಟ್

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಔಟ್ ಆಗುತ್ತಿದ್ದಂತೆ ಎಲ್ಲರ ಕಣ್ಣುಗಳು ಡ್ರೆಸ್ಸಿಂಗ್ ರೂಮ್‌ನತ್ತ ನೆಟ್ಟಿದ್ದವು. ವಿಕೆಟ್‌ ಕೀಪರ್ ಬ್ಯಾಟರ್‌ ರಿಷಭ್ ಪಂತ್ ಬ್ಯಾಟ್ ಮಾಡಲು ಬರುತ್ತಾರಾ ಎಂದು. ಆದ್ರೆ ನಾಲ್ಕನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್‌ ಬ್ಯಾಟ್ ಮಾಡಲು ಬಂದರು. ಆ ಬಳಿಕ ರವೀಂದ್ರ ಜಡೇಜಾ ಬ್ಯಾಟ್ ಮಾಡಿದರು. ಹೀಗಾಗಿ ಅಭಿಮಾನಿಗಳ ಮನಸ್ಸಿನಲ್ಲಿ ರಿಷಭ್‌ ಪಂತ್‌ ಫಿಟ್ ಆಗಿಲ್ಲವಾ ಎಂಬ ಪ್ರಶ್ನೆಗಳು ಎದ್ದಿದ್ದವು. ರಿಷಭ್‌ ಪಂತ್‌ ಮುಂದಿನ ಟೆಸ್ಟ್‌ ಪಂದ್ಯದಿಂದ ಹೊರ ನಡೆದಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವ ವೇಳೆ ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ರಿಷಭ್ ಪಂತ್ ಅವರ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಕಾಲು ಊರಲು ಸಹ ಬಾರದಂತ ಪರಿಸ್ಥಿತಿಯಲ್ಲಿ ಮುಂಬೈಲ್‌ ಆಂಬುಲೆನ್ಸ್‌ನಲ್ಲಿ ಅವರನ್ನು ಕರೆದುಕೊಂಡು ಹೋಗಲಾಯಿತು. ಆದರೆ ತಂಡಕ್ಕೆ ಅವಶ್ಯಕ ಇದ್ದಾಗ ಕುಂಟುತ್ತಲೇ ಬಂದ ಪಂತ್‌ ಬ್ಯಾಟ್ ಮಾಡಿ ಅಪಾರ ಅಭಿಮಾನಿಗಳ ಮನ ಗೆದ್ದರು. ಆದರೆ ಇವರು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲೇ ಇಲ್ಲ. ಈ ಬಗ್ಗೆ ಈಗ ಬಿಸಿಸಿಐ ದೊಡ್ಡ ಅಪ್‌ಡೇಟ್ ನೀಡಿದೆ. ಪಂತ್ ಈಗ ಈ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

Rishabh Pant Out of Fifth Test Jagadeesan Joins India Squad

ಇಂಗ್ಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ ಪಂದ್ಯದಿಂದ ರಿಷಭ್ ಪಂತ್ ತಂಡದಿಂದ ಹೊರಗುಳಿದಿದ್ದಾರೆ. ಅವರು ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವಾಗ ಕಾಲಿಗೆ ಗಾಯವಾಗಿತ್ತು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಇವರ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ ಅವರನ್ನು ಅವರ ಸ್ಥಾನದಲ್ಲಿ ತಂಡಕ್ಕೆ ಸೇರಿಕೊಂಡಿದ್ದಾರೆ. ಸರಣಿಯ ಕೊನೆಯ ಪಂದ್ಯ ಜುಲೈ 31 ರಂದು ಓವಲ್‌ನಲ್ಲಿ ನಡೆಯಲಿದೆ.

ಕೋಚ್‌ ಹೇಳಿದ್ದೇನು?

ಪಂದ್ಯದ ಬಳಿಕ ಗೌತಮ್ ಗಂಭೀರ್‌ ರಿಷಭ್ ಪಂತ್‌ ಅವರು ಟೆಸ್ಟ್ ಸರಣಿಯಿಂದ ಹೊರ ನಡೆದಿರುವ ಬಗ್ಗೆ ಖಚಿತ ಪಡಿಸಿದರು. ಅಲ್ಲದೆ ಕಾಲಿಗೆ ಗಾಯವಾಗಿದ್ದರೂ ಸಹ ಪಂತ್‌ ಬ್ಯಾಟ್ ಮಾಡಿದ ರೀತಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಈ ಮೊದಲು ಹೆಚ್ಚಿನ ಆಟಗಾರರು ಈ ರೀತಿಯ ಸಾಹಾಸವನ್ನು ಮಾಡಲಿಲ್ಲ. ಮುಂದಿನ ಪೀಳಿಗೆಯ ಆಟಗಾರರು ಸಹ ಇವರ ಬಗ್ಗೆ ಮಾತನಾಡಬೇಕು. ಅವರು ಚೇತರಿಸಿಕೊಂಡು ಬೇಗನೆ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

Rishabh Pant Out of Fifth Test Jagadeesan Joins India Squad

ಐದನೇ ಟೆಸ್ಟ್‌ಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್, ಅನ್ಶುಲ್ ಕಾಂಬೋಜ್, ಅರ್ಶ್ದೀಪ್ ಸಿಂಗ್, ಎನ್ ಜಗದೀಶನ್ (ವಿಕೆಟ್ ಕೀಪರ್)

Story first published: Monday, July 28, 2025, 8:40 [IST]
Other articles published on Jul 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+