For Quick Alerts
ALLOW NOTIFICATIONS  
For Daily Alerts
 

ICC Ranking: ಶ್ರೇಯಾಂಕದಲ್ಲಿ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ ರಿಷಭ್‌ ಪಂತ್‌: ಸರ್ಫರಾಜ್‌ಗೆ ಭಾರೀ ಬಡ್ತಿ

ಐಸಿಸಿ ನೂತನ ಶ್ರೇಯಾಂಕ ಪಟ್ಟಿ ಬಿಡುಗಡೆ ಆಗಿದೆ. ಈ ಬಾರಿಯ ಶ್ರೇಯಾಂಕದಲ್ಲಿ ಹೆಚ್ಚು ಬದಲಾವಣೆಗಳನ್ನು ಕಾಣಬಹುದಾಗಿದೆ. ಟೀಮ್ ಇಂಡಿಯಾದ ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿ, ತಮ್ಮ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಬೆಂಗಳೂರು ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರರ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಸರ್ಫರಾಜ್‌ ಖಾನ್‌, ರಿಷಭ್ ಪಂತ್‌ ಶ್ರೇಯಾಂಕದಲ್ಲಿ ಮುನ್ನಡೆದಿದ್ದಾರೆ. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಒಂದು ರನ್‌ಗಳಿಂದ ಶತಕವಂಚಿತರಾಗಿರುವ ರಿಷಭ್‌ ಪಂತ್‌ ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.

Rishabh Pant Overtakes Virat Kohli in ICC Rankings Sarfaraz Khan Sees Huge Promotion

ವಿರಾಟ್ ಹಿಂದಿಕ್ಕಿದ ಪಂತ್‌

ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ರಿಷಭ್ ಪಂತ್ ಟೀಮ್ ಇಂಡಿಯಾಕ್ಕೆ ಆಧಾರವಾಗಿದ್ದರು. ಇವರು ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 99 ರನ್‌ ಬಾರಿಸಿದ್ದರು. ಇವರ ಅಮೋಘ ಪ್ರದರ್ಶನದ ಫಲವಾಗಿ ಈಗ ಅವರ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಸದ್ಯ ಪಂತ್‌ 745 ಅಂಕಗಳೊಂದಿಗೆ ಮೂರ ಸ್ಥಾನ ಜಿಗಿತ ಕಂಡಿದ್ದು, ಆರನೇ ಸ್ಥಾನ ತಲುಪಿದ್ದಾರೆ. ಇವರು ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಶ್ರೇಯಾಂಕದಲ್ಲಿ ಹಿಂದಿಕ್ಕಿದ್ದಾರೆ. ವಿರಾಟ್‌ 720 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್‌ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎರಡು ಸ್ಥಾನ ಕುಸಿತ ಕಂಡಿದ್ದು, 16ನೇ ಸ್ಥಾನಕ್ಕೆ ತಲುಪಿದ್ದಾರೆ.

ಸರ್ಫರಾಜ್‌ಗೆ ಭರ್ಜರಿ ಬಡ್ತಿ

ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಆರ್ಭಟ ನಡೆಸಿದ್ದ ಸರ್ಫರಾಜ್‌ ಖಾನ್‌ ಅವರ ಶ್ರೇಯಾಂಕದಲ್ಲೂ ಭಾರಿ ಜಿಗಿತವನ್ನು ಕಂಡಿದ್ದಾರೆ. ಇದೀಗ ಸರ್ಫರಾಜ್ ಜಂಟಿ 53ನೇ ಸ್ಥಾನಕ್ಕೆ ತಲುಪಿದ್ದಾರೆ. ಇವರು ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸರ್ಫರಾಜ್ 31 ಸ್ಥಾನ ಮೇಲಕ್ಕೇರಿದ್ದಾರೆ. ಇದು ಅವರ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು.

Rishabh Pant Overtakes Virat Kohli in ICC Rankings Sarfaraz Khan Sees Huge Promotion

ಇಂಗ್ಲೆಂಡ್‌ ತಂಡದ ಜೋ ರೂಟ್ 917 ಅಂಕಗಳೊಂದಿಗೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ, ಕಿವೀಸ್ ತಂಡದ ಕೇನ್‌ ವಿಲಿಯಮ್ಸನ್‌ ಎರಡನೇ ಸ್ಥಾನದಲ್ಲಿದ್ದಾರೆ.

ಬುಮ್ರಾ ಅಗ್ರ ಸ್ಥಾನ ಭಧ್ರ

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಟೆಸ್ಟ್‌ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇವರು ಇವರು 871 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನವನ್ನು ಅಶ್ವಿನ್‌ ಕಬಳಿಸಿದ್ದಾರೆ. ಇವರು 849 ರೇಟಿಂಗ್ ಪಾಯಿಂಟ್‌ ಹೊಂದಿದ್ದಾರೆ. ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್‌ವುಡ್ ಮೂರನೇ ಸ್ಥಾನದಲ್ಲಿದ್ದಾರೆ.

ಟೀಮ್ ಇಂಡಿಯಾದ ಇನ್ನೋರ್ವ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಏಳನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಕುಲದೀಪ್‌ ಯಾದವ್‌ 16ನೇ ಶ್ರೇಯಾಂಕ ತಲುಪಿದ್ದಾರೆ.

ಜಡೇಜಾ ನಂಬರ್ 1

ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ 442 ಅಂಕಗಳೊಂದಿಗೆ ಆಲ್‌ರೌಂಡರ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ 335 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್‌ ಹಸನ್‌ ಮೂರನೇ ಸ್ಥಾನದಲ್ಲಿದ್ದಾರೆ.

Story first published: Wednesday, October 23, 2024, 19:01 [IST]
Other articles published on Oct 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+