IPL 2027: ಐಪಿಎಲ್ ಇತಿಹಾಸದ ಮೆಗಾ ಟ್ರೇಡ್: ಡೆಲ್ಲಿಗೆ ಮರಳಿದ ಪಂತ್ ಸಂಬಳ ಕಡಿತ; ಲಕ್ನೋ ಸೇರಿದ ಕುಲದೀಪ್
ಐಪಿಎಲ್ 2026ರ ಆವೃತ್ತಿ ಮುಕ್ತಾಯದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಂಚಲನ ಮೂಡಿಸುವ ಟ್ರೇಡ್ ಒಂದು ಹೊರ ಬಿದ್ದಿದೆ. ಭಾರತದ ಸ್ಟಾರ್ ವಿಕೆಟ್ ಕೀಪರ್ ಮತ್ತು ಸ್ಫೋಟಕ ಬ್ಯಾಟರ್ ಆಗಿರುವ ರಿಷಭ್ ಪಂತ್ ಕೊನೆಗೂ ತಮ್ಮ ಹಳೆಯ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ತ್ಯಜಿಸಿದ ಬಳಿಕ ರಿಷಭ್, ಭಾರಿ ಪ್ರಮಾಣದ ಸಂಬಳ ಕಡಿತಗೊಳಿಸಿಕೊಂಡು ತವರಿಗೆ ಮರಳಿದ್ದಾರೆ.
ರಿಷಭ್ ಪಂತ್ ಅವರ ಬದಲಿಗೆ ಎಲ್‌ಎಸ್‌ಜಿ ಸ್ಟಾರ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಅಚ್ಚರಿದಾಯಕ ಕುತೂಹಲ ಮೂಡಿಸಿರುವ ಟ್ರೇಡ್‌ಗಳಲ್ಲಿ ಈ ಟ್ರೇಡ್ ಸಹ ಒಂದಾಗಿದೆ. ಈ ಟ್ರೇಡ್ ಬಗ್ಗೆ ಐಪಿಎಲ್ ಆಡಳಿತ ಮಂಡಳಿಯು ಜೂನ್ 23, 2026ರಂದು ಅಧಿಕೃತ ಮುದ್ರೆ ಒತ್ತಿದೆ. ಈ ಡೀಲ್‌ನಿಂದ ಮುಂಬರುವ ಟೂರ್ನಿಗಳಲ್ಲಿ ತಂಡದ ರಣತಂತ್ರವನ್ನು ರೂಪಿಸಿಕೊಳ್ಳಲು ಸಹಾಯಕ ಮಾಡುತ್ತದೆ.

ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನ ಅಂಗಳಕ್ಕೆ ಬಿಟ್ಟಿತ್ತು. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಇವರಿಗೆ 27 ಕೋಟಿ ರೂಪಾಯಿಯನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ ಅವರಿಗೆ ನಾಯಕತ್ವವನ್ನು ನೀಡಿತ್ತು. ಇವರ ಮುಂದಾಳತ್ವದಲ್ಲಿ ಎಲ್‌ಎಸ್‌ಜಿ ಆಡಿದ ಎರಡೂ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ನಿರಾಸೆ ಅನುಭವಿಸಿದೆ.
ಎಲ್‌ಎಸ್‌ಜಿ ರಿಷಭ್ ಪಂತ್ ಅವರನ್ನು ಬಿಟ್ಟುಕೊಡಲು ಕಾರಣವೇನು?
ಎಲ್‌ಎಸ್‌ಜಿ ಪರ ರಿಷಭ್ ಪಂತ್ ಕಳೆದ ಎರಡು ಆವೃತ್ತಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಅಲ್ಲದೆ ಬ್ಯಾಟಿಂಗ್‌ನಲ್ಲಿ ಸತತ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇದರಿಂದ ಇವರ ನಾಯಕತ್ವಕ್ಕೂ ಕುತ್ತು ಬಂದಿತ್ತು. 19ನೇ ಆವೃತ್ತಿಯ ಐಪಿಎಲ್ ಮುಗಿದ ಬಳಿಕ ಎಲ್‌ಎಸ್‌ಜಿ ಇವರನ್ನು ನಾಯಕತ್ವದಿಂದ ಕೆಳಗಿಳಿಯುವಂತೆ ಸೂಚಿಸಿತ್ತು. ಅವರ ಬ್ಯಾಟಿಂಗ್ ಪ್ರದರ್ಶನ ಹಾಗೂ ನಾಯಕತ್ವ ಶೈಲಿಯು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣದ ಕಾರಣ ತಂಡದ ಮ್ಯಾನೇಜ್‌ಮೆಂಟ್ ಇಕ್ಕಟ್ಟಿಗೆ ಸಿಲುಕಿತ್ತು.
2025ರ ಐಪಿಎಲ್ ಆವೃತ್ತಿಯಲ್ಲಿ ಅವರು ಕೇವಲ 269 ರನ್ ಗಳಿಸಿದರೆ,. 2026ರ ಐಪಿಎಲ್‌ನಲ್ಲಿ 312 ರನ್‌ಗಳನ್ನು ಮಾತ್ರ ಗಳಿಸಿದ್ದರು. ಒತ್ತಡದ ನಡುವೆ ಅವರ ನೈಜ ಸ್ಫೋಟಕ ಆಟ ಎಲ್ಲೋ ಕಳೆದುಹೋಗಿತ್ತು. ಹೀಗಾಗಿ ತಮ್ಮ ಹಳೆಯ ಖದರ್‌ಗೆ ಮರಳಲು ಪಂತ್ ಮರಳಿ ಡೆಲ್ಲಿ ಮೈದಾನವನ್ನು ಆಯ್ದುಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಉತ್ತಮ ಬಾಂಧವ್ಯ
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮತ್ತು ರಿಷಭ್ ಪಂತ್ ನಡುವಿನ ಬಾಂಧವ್ಯ ಅಮೋಘವಾಗಿದೆ. ಪಂತ್ ಅವರು 2016 ರಿಂದ 2024 ರವರೆಗೆ ಸತತವಾಗಿ ಒಂಬತ್ತು ವರ್ಷಗಳ ಕಾಲ ಡೆಲ್ಲಿ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದರು. ಈ ಅವಧಿಯಲ್ಲಿ ಅವರು ಡೆಲ್ಲಿ ಪರವಾಗಿ ಬರೋಬ್ಬರಿ 111 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ಫ್ರಾಂಚೈಸಿಯ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು. 2021 ರಿಂದ 2024 ರವರೆಗೆ ನಡೆದ ಮೂರು ಆವೃತ್ತಿಗಳಲ್ಲಿ ಪಂತ್ 43 ಪಂದ್ಯಗಳಲ್ಲಿ ಡೆಲ್ಲಿ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಲಕ್ನೋ ಸೇರಿದ ಕುಲದೀಪ್
ಈ ಟ್ರೇಡ್ ಡೀಲ್‌ನ ಮತ್ತೊಂದು ಪ್ರಮುಖ ಅಂಶವೆಂದರೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರ ವರ್ಗಾವಣೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಪ್ರಮುಖ ವಿಕೆಟ್ ಟೇಕರ್ ಆದ ಕುಲದೀಪ್ ಯಾದವ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತನ್ನ ಹೊಸ ಯೋಜನೆಯ ಭಾಗವಾಗಿ ಆಯ್ಕೆ ಮಾಡಿಕೊಂಡಿದೆ. ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಕುಲದೀಪ್ ಈಗ 13.50 ಕೋಟಿ ರೂಪಾಯಿಗಳಿಗೆ ಲಕ್ನೋ ತಂಡ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

