For Quick Alerts
ALLOW NOTIFICATIONS  
For Daily Alerts
 

ಬದುಕಿನಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸುವುನ್ನು ಕಲಿತಿದ್ದೇನೆ: ರಿಷಬ್ ಪಂತ್

Rishabh Pant Revealed That After His Accident, He Found Happiness In Even Small Things

ಡಿಸೆಂಬರ್ 30ರಂದು ನಡೆದ ಕಾರು ಅಪಘಾತದಲ್ಲಿ ರಿಷಬ್ ಪಂತ್ ಗಾಯಗೊಂಡಿದ್ದರು. ಡೆಹ್ರಾಡೂನ್ ಮತ್ತು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸಂಪೂರ್ಣವಾಗಿ ಸುಧಾರಿಸಿಕೊಳ್ಳಲು ಕನಿಷ್ಠ 1 ವರ್ಷ ಬೇಕು ಎನ್ನಲಾಗಿದೆ.

ತಮ್ಮ ಚೇತರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಷಬ್ ಪಂತ್ "ನಾನು ಈಗ ಉತ್ತಮವಾಗಿದ್ದೇನೆ, ಆರೋಗ್ಯದಲ್ಲಿ ಕೂಡ ಸುಧಾರಣೆಯಾಗುತ್ತಿದೆ" ಎಂದು ಹೇಳಿದ್ದಾರೆ. ತಾವು ಬೇಗ ಚೇತರಿಸಿಕೊಳ್ಳಲು ಈಗಲೂ ಸಾಕಷ್ಟು ಜನ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ ಎಂದು ಪಂತ್ ಹೇಳಿದರು. ಚೇತರಿಕೆಯ ಹಾದಿಯಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.

"ನಾನು ಈಗ ಉತ್ತಮವಾಗಿದ್ದೇನೆ, ಚೇತರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದೇನೆ. ದೇವದ ದಯೆ ಮತ್ತು ವೈದ್ಯಕೀಯ ತಂಡದ ಕಾಳಜಿಯಿಂದ ನಾನು ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸ ಹೊಂದಿದ್ದೇನೆ" ಎಂದು ರಿಷಬ್ ಪಂತ್ ಹೇಳಿದ್ದಾರೆ.

"ಈಗ ನಾನು ಜೀವನವನ್ನು ಪೂರ್ಣವಾಗಿ ಆನಂದಿಸುತ್ತಿದ್ದೇನೆ, ದೈನಂದಿನ ದಿನಚರಿಯಲ್ಲಿ ನಾವು ನಿರ್ಲಕ್ಷಿಸುವ ಚಿಕ್ಕ ಚಿಕ್ಕ ವಿಷಯಗಳನ್ನು ಈಗ ಗಮನಿಸುತ್ತಿದ್ದೇನೆ. ಇಂದು ಎಲ್ಲರೂ ವಿಶೇಷವಾದದ್ದನ್ನು ಸಾಧಿಸಲು ಕಷ್ಟಪಡುತ್ತಿದ್ದಾರೆ. ಆದರೆ, ಪ್ರತಿದಿನ ನಮಗೆ ಸಂತೋಷವನ್ನು ನೀಡುವ ಸಣ್ಣ ವಿಷಯಗಳನ್ನು ಆನಂದಿಸಲು ನಾವು ಮರೆತಿದ್ದೇವೆ." ಎಂದು ಪಂತ್ ಹೇಳಿದ್ದಾರೆ.

Rishabh Pant Revealed That After His Accident, He Found Happiness In Even Small Things

ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸುತ್ತಿದ್ದೇನೆ

ನನಗೆ ಅಪಘಾತವಾದ ನಂತರ ನನ್ನ ಹಲ್ಲುಗಳನ್ನು ಬ್ರಷ್ ಮಾಡುವುದನ್ನು ಕೂಡ ಅನುಭವಿಸುತ್ತಿದ್ದೇನೆ. ಸೂರ್ಯನ ಬಿಸಿಲಿನಲ್ಲಿ ಕುಳಿತು ಆಸ್ವಾದಿಸಿದ್ದೇನೆ. ನಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವಾಗ, ಸಾಮಾನ್ಯ ವಿಷಯಗಳನ್ನು ಲಘುವಾಗಿ ತೆಗೆದುಕೊಂಡಂತೆ ಕಾಣಿಸುತ್ತದೆ. ಈಗ ನಾನು ಪ್ರತಿ ಕ್ಷಣವನ್ನು ಆನಂದಿಸುವುದನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

"ನಾನು ಕ್ರಿಕೆಟ್‌ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಜೀವನ ಕ್ರಿಕೆಟ್ ಸುತ್ತವೇ ಸುತ್ತುತ್ತದೆ. ನಾನು ಈಗ ನಡೆಯುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ಆದಷ್ಟು ಬೇಗನೆ ಕ್ರಿಕೆಟ್ ಆಡಲು ಕಾಯುತ್ತಿದ್ದೇನೆ" ಎಂದು ಹೇಳಿದರು.

Rishabh Pant Revealed That After His Accident, He Found Happiness In Even Small Things

ವೇಳಾಪಟ್ಟಿಯಂತೆ ದಿನಚರಿ

"ವೇಳಾಪಟ್ಟಿಯ ಪ್ರಕಾರ ನಾನು ನನ್ನ ದಿನಚರಿಯನ್ನು ಅನುಸರಿಸುತ್ತಿದ್ದೇನೆ. ಬೆಳಿಗ್ಗೆ ಎದ್ದೇಳುತ್ತೇನೆ ನನ್ನ ಫಿಸಿಯೋಥೆರಪಿಸ್ಟ್‌ನೊಂದಿಗೆ ದಿನದ ನನ್ನ ಮೊದಲ ಫಿಸಿಯೋಥೆರಪಿ ಸೆಷನ್‌ಗೆ ಒಳಗಾಗುತ್ತೇನೆ. ಅದು ಮುಗಿದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಾನು ಎಷ್ಟು ನೋವನ್ನು ಸಹಿಸಿಕೊಳ್ಳಬಲ್ಲೆ ಎನ್ನುವುದ ಪ್ರಕಾರ ತರಬೇತಿ ಪಡೆಯುತ್ತಿದ್ದೇನೆ" ಎಂದು ತಿಳಿಸಿದರು.

ಸಂಜೆ ಮೂರನೇ ಬಾರಿಗೆ ಫಿಸಿಯೋಥೆರಪಿ ಸೆಷನ್‌ಗೆ ಒಳಗಾಗುತ್ತೇನೆ. ಪ್ರತಿದಿನ ಕಠಿಣವಾದ ಡಯಟ್ ಪಾಲಿಸುತ್ತೇನೆ. ಹಣ್ಣುಗಳು ಮತ್ತು ಜ್ಯೂಸ್‌ಗಳನ್ನು ಸೇವಿಸುತ್ತೇನೆ. ಸರಿಯಾಗಿ ನಡೆಯಲು ಸಾಧ್ಯವಾಗುವವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು ಪಂತ್ ಹೇಳಿದ್ದಾರೆ.

Story first published: Tuesday, February 28, 2023, 16:26 [IST]
Other articles published on Feb 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+