Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಷಭ್ ಪಂತ್ ಔಟ್‌ಗೆ ಕಾರಣನಾದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

Rishabh Pant run out after terrible mistake with Virat Kohli: Video

ಅಹ್ಮದಾಬಾದ್: ಅಹ್ಮದಾಬಾದ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ತೃತೀಯ ಟಿ20ಐ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕೇವಲ 25 ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆಗಿನ ಗೊಂದಲದಿಂದಾಗಿ ಪಂತ್ ಔಟ್ ಆಗಿದ್ದು ಕಂಡುಬಂತು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 16) ನಡೆದ ತೃತೀಯ ಟಿ20 ಪಂದ್ಯದಲ್ಲಿ 11ನೇ ಓವರ್‌ ಎಸೆಯಲು ಸ್ಯಾಮ್ ಕರನ್ ಬಂದಿದ್ದಾಗ ಮೊದಲ ಎಸೆತಕ್ಕೆ ಬ್ಯಾಟ್ ಬೀಸಿದ ರಿಷಭ್ ಪಂತ್ ರನ್‌ಗಾಗಿ ಓಡಿದರು. ನಾನ್ ಸ್ಟ್ರೈಕ್‌ನಲ್ಲಿದ್ದ ನಾಯಕ ವಿರಾಟ್ ಕೂಡ ಸಿಂಗಲ್ ರನ್ ಮಾಡಿದರು.

ಆಂಗ್ಲ ಫೀಲ್ಡರ್‌ಗಳು ಚುರುಕಾಗಿ ಇಲ್ಲದಿದ್ದರಿಂದ ಪಂತ್‌ ಮತ್ತು ಕೊಹ್ಲಿ ಮತ್ತೊಂದು ರನ್ ಓಡಿದರು. ಅದಾಗಿ ಮತ್ತೆ ಮೂರನೇ ರನ್ ಓಡುವಾಗ ಇಬ್ಬರೂ ಗೊಂದಲದಲ್ಲಿದ್ದರು. ಆರಂಭದಲ್ಲಿ ರನ್ ಬೇಡ ಎಂದು ನಿರ್ಧರಿಸಿದವರೂ ಮತ್ತೆ ಮೂರನೇ ರನ್‌ಗಾಗಿ ಓಡಿದರು.

ಆಗ ಚೆಂಡು ಕಲೆಕ್ಟ್ ಮಾಡಿದ ಜೋಸ್ ಬಟ್ಲರ್, ಸ್ಯಾಮ್ ಕರನ್‌ನತ್ತ ಚೆಂಡು ಎಸೆದರು. ಕೂಡಲೇ ಕರನ್ ಚೆಂಡನ್ನು ವಿಕೆಟ್‌ಗೆ ತಾಗಿಸಿದರು. ಹೀಗಾಗಿ ಪಂತ್ ಔಟಾಗಿ ನಿರ್ಗಮಿಸಬೇಕಾಯ್ತು. ಪಂದ್ಯದಲ್ಲಿ ಕೊಹ್ಲಿ ಅಜೇಯ 77 (46) ರನ್ ಕೊಡುಗೆ ನೀಡಿದ್ದರು. ಭಾರತ 20 ಓವರ್‌ಗೆ 156 ರನ್ ಗಳಿಸಿತ್ತು.

Story first published: Tuesday, March 16, 2021, 22:20 [IST]
Other articles published on Mar 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+