Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ರೈನರ್ ಮೇಲೆ ರೊಚ್ಚಿಗೆದ್ದ ಯುಜುವೇಂದ್ರ ಚಾಹಲ್ ದಾಳಿ!: ವಿಡಿಯೋ

Rishabh Pants After Workout Video Looks Straight Out Of A Comedy Movie

ಯುಜುವೇಂದ್ರ ಚಾಹಲ್ ಕ್ರಿಕೆಟ್‌ ಅಭಿಮಾನಿಗಳಿಗೆ ಇದೇನು ಅಪರಿಚಿತ ಹೆಸರಲ್ಲ. ಆಟದಿಂದ ಮಾತ್ರವಲ್ಲ ಮಂಗಾಟದಿಂದಲೂ ಚಾಹಲ್ ಖ್ಯಾತರು. ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಮತ್ತೊಂದು ಮಂಗಾಟ ಬಹಿರಂಗವಾಗಿದೆ. ಅದು ಸಾಕಷ್ಟು ಮಜವಾಗಿದೆ.

ಟೀಮ್ ಇಂಡಿಯಾ ವಿಕೆಟ್‌ ಕೀಪರ್ ರಿಷಬ್ ಪಂತ್ ತಂಡದ ಸ್ಟ್ರೆಂತ್ ಮತ್ತು ಕಂಡೀಶನಿಂಗ್ ಕೋಚ್ ನಿಕ್ ವೆಬ್‌ ಜೊತೆ ಟ್ರೈನಿಂಗ್‌ನಲ್ಲಿ ತೊಡಗಿದ್ದರು. ರಿಷಬ್ ಪಂತ್ ಟ್ರೈನರ್‌ ಜೊತೆ ಬಾಕ್ಸಿಂಗ್ ಟ್ರೈನಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಈ ಅಭ್ಯಾಸ ಮುಗಿದ ಬಳಿಕ ಕೋಚ್ ನಿಕ್ ವೆಬ್‌ಗೆ ದೊಡ್ಡ ಆಘಾತ ಕಾದಿತ್ತು!

ಆ ಆಘಾತ ಬೇರೇನು ಅಲ್ಲ. ಟೀಮ್ ಇಂಡಿಯಾ ಬೌಲರ್ ಯಜುವೇಂದ್ರ ಚಾಹಲ್ ರೊಚ್ಚಿಗೆದ್ದಿದ್ದರು. ಕೋಚ್ ನಿಕ್ ವೆಬ್ ಅವರ ಮೇಲೆ ಚಾಹಲ್ ಬಲ ಪ್ರದರ್ಶನಕ್ಕಿಳಿದಿದ್ದರು. ರಿಷಬ್ ಪಂತ್ ಸೇರಿದಂತೆ ಸಹ ಆಟಗಾರರು ಕೋಚ್ ನಿಕ್ ವೆಬ್ ಅವರ ಸಹಾಯಕ್ಕೆ ಬಂದರೂ ಚಾಹಲ್ ಕೋಪ ಕಡಿಮೆಯಾಗಿರಲಿಲ್ಲ. ಎಲ್ಲರೂ ಸುತ್ತುವರಿದಿದ್ದರೂ ಕೂಡ ಚಾಹಲ್ ಕೋಚ್ ಮೇಲೆ ದಾಳಿ ಮುಂದುವರಿಸಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಕೋಚ್ ನಿಕ್ ವೆಬ್ ಹರಸಾಹಸ ಪಡಬೇಕಾಯಿತು.

ಹಾಗಂತ ಇದೇನು ಸೀರಿಯಸ್ ಹೊಡೆದಾಟವಲ್ಲ. ಪುಟ್ಟ ದೇಹದ ಚಾಹಲ್ ಟೀಮ್ ಇಂಡಿಯಾದಲ್ಲಿ ತುಂಬಾ ಆ್ಯಕ್ಟಿವ್. ಮೈದಾನದ ಹೊರಗೆ ತನ್ನಿಂದ ಸಾಧ್ಯವಾಗುವಷ್ಟು ಕೀಟಲೆಯಲ್ಲೇ ಕಾಲ ಕಳೆಯುತ್ತಾರೆ. ಆ ಕೀಟಲೆಯ ಒಂದು ಭಾಗವೇ ಈ ಹೊಡೆದಾಟ ಎನ್ನಬಹುದು.

ಗುವಾಹಟಿಯಲ್ಲಿ ಮೊದಲ ಪಂದ್ಯ ಆಯೋಜನೆಯಾಗಿತ್ತು. ಆ ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಪಂದ್ಯಕ್ಕೂ ಮುನ್ನ ನಡೆದ ಘಟನೆ ಇದಾಗಿದ್ದು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Story first published: Sunday, May 3, 2020, 11:00 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+