ಮನೆ ಹುಡುಕುತ್ತಿದ್ದೇನೆ ಎಂದ ಪಂತ್‌ಗೆ ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ!

ನವದೆಹಲಿ: ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಟೀಮ್ ಇಂಡಿಯಾ ಪಾಲಿಗೆ ರಿಷಭ್ ಪಂತ್ ಹೀರೋ ಅನ್ನಿಸಿದ್ದರು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಪಡೆ 2-1ರ ಜಯ ದಾಖಲಿಸುವಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿದ್ದ ಪಂತ್ 68.50ರ ಸರಾಸರಿಯಲ್ಲಿ 274 ರನ್ ಗಳಿಸಿದ್ದರು. ಅತ್ಯಧಿಕ ರನ್ ಪಟ್ಟಿಯಲ್ಲಿ ಮಾರ್ನಸ್ ಲ್ಯಬುಶೇನ್ (426 ರನ್), ಸ್ಟೀವನ್ ಸ್ಮಿತ್ (313) ಬಳಿಕ ಪಂತ್ ತೃತೀಯ ಸ್ಥಾನ ಪಡೆದುಕೊಂಡಿದ್ದರು.
ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ಬಳಿಕ, ಹೊಸ ಮನೆ ಕೊಳ್ಳುವಂತೆ ಪಂತ್ ಕುಟುಂಬಸ್ಥರು ಪಂತ್ ಅವರಲ್ಲಿ ಕೇಳುತ್ತಿದ್ದಾರಂತೆ. ಹೀಗಾಗಿ ಹೊಸ ಮನೆಯ ಹುಟುಕಾಟದಲ್ಲಿರುವ ಪಂತ್ ಟ್ವಿಟರ್‌ನಲ್ಲಿ ಸಲಹೆ ನೀಡುವಂತೆ ನಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ.
'ಪಂತ್ ಅವರು ಹೊಸ ಮನೆ ಎಲ್ಲಿ ಮಾಡಲಿ, ಸಲಹೆ ನೀಡಿ' ಎಂದಿದ್ದೇ ತಡ; ನೆಟ್ಟಿಗರು ಬಗೆ ಬಗೆ ರೀತಿಯಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಕೋಟ್ಲಾ ಪಕ್ಕದಲ್ಲಿ ಕೊಳ್ಳು
'ಹೊಸ ಮನೆ ಕೊಳ್ಳೋದಿದ್ರೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಕೊಳ್ಳು. ಆಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡೋಕೆ ತುಂಬಾ ಸುಲಭ ಆಗುತ್ತೆ' ಎಂದು ಪ್ರಶಾಂತ್ ರಾಮ್‌ಚಾಂದನಿ ಪ್ರತಿಕ್ರಿಯಿಸಿದ್ದಾರೆ.

ರೋಹಿತ್-ಕೊಹ್ಲಿಗೆ ಈ ಧಮ್ ಇಲ್ಲ
ಈ ಪ್ರಶ್ನೆಯನ್ನು ಹೀಗೆ ಟ್ವಿಟರ್‌ನಲ್ಲಿ ಕೇಳೋ ಧಮ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಕೂಡ ಇಲ್ಲಾಂತ ನಾನ್ ಬೇಕಾದ್ರೆ ಗ್ಯಾರಂಟಿ ಕೊಡ್ತೀನಿ ಎಂದು ಪ್ರಾಣಾ ಎಂಬವರು ಟ್ವೀಟ್ ಮಾಡಿದ್ದಾರೆ.
ಇಲ್ಲಿಂದ ಹೊರಟುಬಿಡು
ಹೊಸ ಮನೆ ಹುಡುಕಾಟದಲ್ಲಿರುವ ರಿಷಭ್ ಪಂತ್‌ಗೆ ಹಳೆ ಮನೆ ಹೇಳುತ್ತಿದೆಯಂತೆ, 'ಇಲ್ಲಿಂದ ಕೂಡಲೇ ನಡೆ' (ರೇಡಿಯನ್ ಅವರ ತಮಾಷೆಯ ಟ್ವೀಟ್).

ಆಸ್ಟ್ರೇಲಿಯಾದ ಆಧಾರ್ ಕಾರ್ಡ್
ಮೊದಲು ಆಸ್ಟ್ರೇಲಿಯಾದ ಆಧಾರ್ ಕಾರ್ಡ್ ಮಾಡಿಸು. ಮತ್ತೆ ಅಲ್ಲಿನ ರಾಷ್ಟ್ರೀಯತೆ ಪಡೆದುಕೊ. ಮತ್ತೆ ಸಿಡ್ನಿಯಲ್ಲಿ ಮನೆ ತಗೋ ಎಂದು ಇಲ್ಲೊಬ್ಬರು ತಮಾಷೆ ಮಾಡಿದ್ದಾರೆ. ಹಿಂದೊಮ್ಮೆ ಆಸೀಸ್ ಟೆಸ್ಟ್ ನಾಯಕ ಟಿಮ್ ಪೈನ್ ಪತ್ನಿ ಪಂತ್ ಅವರನ್ನು ತನ್ನ ಮಕ್ಕಳಿಗೆ ಬೇಬಿ ಸಿಟ್ಟರ್ ಮಾಡಿದ್ದರು. ಈ ಸಂಗತಿ ನೆನಪಿಸಿ ಹೀಗೆ ತರ್ಲೆ ಮಾಡಿರಲೂಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications