ಆಟದ ವೇಳೆ WWE ಸ್ಟಾರ್ ಶಾನ್ ಮೈಕಲ್ಸ್‌ನಂತೆ ಜಂಪ್ ಮಾಡಿದ ಪಂತ್!

ಸಿಡ್ನಿ, ಜನವರಿ 4: ಆಟದ ವೇಳೆ ಕಾಮೆಂಟರಿ ಕಿರಿಕ್ ಶುರು ಮಾಡಿ ಸುದ್ದಿಯಾಗಿದ್ದ ಭಾರತದ ಯುವ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಈಗ ಡಬ್ಲ್ಯೂಡಬ್ಲ್ಯೂಇಯನ್ನು ನೆನಪಿಸಿ ಸದ್ದು ಮಾಡಿದ್ದಾರೆ. ಆಟದ ವೇಳೆ ಪಂತ್ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಶಾನ್ ಮೈಕಲ್ಸ್ ನಂತೆ ಜಂಪ್ ಮಾಡಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ (ಜನವರಿ 4) ನಡೆದ ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಪಂತ್, ಶಾನ್ ಮೈಕಲ್ಸ್ ಅವರ 'ಕಿಪ್‌ಅಪ್' ಮಾಡಿ ಗಮನ ಸೆಳೆದರು. ಪಂತ್ ಜೋಷೂ, ಜಂಪೂ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ.
ಭಾರತದ ಇನ್ನಿಂಗ್ಸ್ ಮುಗಿದು ಆಸೀಸ್ ಇನ್ನಿಂಗ್ಸ್ ಆರಂಭವಾಗಿತ್ತು. ಈ ನಡುವೆ ಡ್ರಿಂಕ್ಸ್ ಬ್ರೇಕ್ ನೀಡಲಾಯಿತು. ಆಗ ಕೀಪಿಂಗ್ ಮಾಡುತ್ತಿದ್ದ ಪಂತ್ ಚೆಂಡನ್ನು ಹಿಡಿಯೋಕೆ ಹೋದೋದು ನೆಲಕ್ಕೆ ಬಿದ್ದರು, ಮರುಕ್ಷಣವೇ ಜಂಪ್ ಮಾಡಿ ಎದ್ದು ನಿಂತರು. ಇದು ವಿಡಿಯೋದಲ್ಲಿ ಸೆರೆಯಾಗಿತ್ತು.
ಇದೇ ಪಂದ್ಯದಲ್ಲಿ ಪಂತ್ ಆಕರ್ಷಕ ಶತಕ (159 ರನ್) ಕೂಡ ಬಾರಿಸಿದ್ದರು. ಚೇತೇಶ್ವರ ಪೂಜಾರ 193, ಮಯಾಂಕ್ ಅಗರ್ವಾಲ್ 77, ಹನುಮ ವಿಹಾರಿ 42, ರವೀಂದ್ರ ಜಡೇಜಾ 81 ರನ್ ಕೊಡುಗೆಯೊಂದಿಗೆ ಭಾರತ 167.2 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 622 ರನ್ ಗಳಿಸಿ, ಡಿಕ್ಲೇರ್ ಘೋಷಿಸುವ ಮೊದಲ ಇನ್ನಿಂಗ್ಸ್ ಮುಗಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications