Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ರಿಷಭ್ ಪಂತ್

Rishabh Pant scored a fifty in the Intra Squad practice match ahead of the WTC final

ಸೌತಾಂಪ್ಟನ್: ಸೌತಾಂಪ್ಟನ್‌ನಲ್ಲಿ ಕ್ವಾರಂಟೈನ್ ಮುಗಿಸಿರುವ ಟೀಮ್ ಇಂಡಿಯಾ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೂ ಮುನ್ನ 4 ದಿನಗಳ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯ ಆಡಲಿದೆ. ಈ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಅರ್ಧ ಶತಕ ಬಾರಿಸಿದ್ದಾರೆ.

ಜೂನ್ 18ರಿಂದ 22ರ ವರೆಗೆ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಪಡೆ ತಂಡದೊಳಗೆ ಅಭ್ಯಾಸ ನಡೆಸುತ್ತಿದೆ. ಅತ್ತ ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್‌ ವಿರುದ್ಧ ದ್ವಿತೀಯ ಟೆಸ್ಟ್‌ ಪಂದ್ಯ ಆಡುತ್ತಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಜ್ಜಾಗುತ್ತಿರುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅಭ್ಯಾಸ ವೇಳೆಯೂ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದು ಕಾಣಿಸಿತ್ತು. ನಡೆಯುತ್ತಿರುವ ಅಂತರ್ ತಂಡದ ಅಭ್ಯಾಸ ಪಂದ್ಯದಲ್ಲೂ ಪಂತ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಬ್ಯಾಟಿಂಗ್‌ನ ನಿರೀಕ್ಷೆ ಮೂಡಿಸಿದ್ದಾರೆ.

ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯ ಯಾರ ಯಾರ ಮಧ್ಯೆ ನಡೆಯಿತು, ನಾಯಕತ್ವ ಯಾರು ವಹಿಸಿಕೊಂಡಿದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಆದರೆ ಟೀಮ್ ಇಂಡಿಯಾ ಅಂತರ್ ಅಭ್ಯಾಸ ಪಂದ್ಯದಲ್ಲಿ ಗೆಲುವಿನ ಹುರುಪು ತೋರಿಕೊಂಡಿರುವುದಕ್ಕೆ ಬಿಸಿಸಿಐಯ ಫೋಟೋಗಳು, ವಿಡಿಯೋ ಸಾಕ್ಷಿ ಹೇಳಿವೆ.

Story first published: Saturday, June 12, 2021, 13:54 [IST]
Other articles published on Jun 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+