ಕಾರು ಅಪಘಾತದಲ್ಲಿ ಗಾಯಕ್ಕೆ ಈಡಾದ ಬಳಿಕ ಸುಮಾರು 20 ತಿಂಗಳು ಬಳಿಕ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿಯಲಿದ್ದಾರೆ. ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ರಿಷಭ್ ಪಂತ್ ದಾಖಲೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ.
ಸ್ಟಾರ್ ವಿಕೆಟ್ ಕೀಪರ್ ಪಂತ್ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಮತ್ತು ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಬಹುದು. ಪಂತ್ ಈ ದಾಖಲೆಯ ಸನಿಹಕ್ಕೆ ಬಂದು ನಿಂತಿದ್ದಾರೆ. ದುಲೀಪ್ ಟ್ರೋಫಿ 2024 ಅರ್ಧಶತಕ ಗಳಿಸಿ ಅಬ್ಬರಿಸಿದ್ದರು.

ರಿಷಬ್ ಪಂತ್ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುವುದು ಖಚಿತ. ಈ ಪಂದ್ಯದಲ್ಲಿ ಅವರು ಸಿಕ್ಸರ್‌ಗಳನ್ನು ಬಾರಿಸುವುದರ ಮೂಲಕ ದಾಖಲೆಯ ಪುಟ ಸೇರುವ ಕನಸಿನಲ್ಲಿದ್ದಾರೆ. ರಿಷಭ್ ಪಂತ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 55 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರು ಸಿಕ್ಸರ್‌ಗಳ ಲೆಕ್ಕಾಚಾರದಲ್ಲಿ ಗಂಗೂಲಿಯನ್ನು ಹಿಂದಿಕ್ಕಲು ಮೂರು ಸಿಕ್ಸರ್‌ಗಳ ಅವಶ್ಯಕತೆ ಇದೆ. ಇನ್ನು ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಲು ಪಂತ್ ಗೆ 7 ಸಿಕ್ಸರ್‌ಗಳ
ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಪಂತ್ ಆರನೇ ಸ್ಥಾನಕ್ಕೆ ಬರುತ್ತಾರೆ. ರಿಷಬ್ ಪಂತ್ ಕೊನೆಯ ಬಾರಿಗೆ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. ಗಾಯದ ಬಳಿಕ ಚೇತರಿಸಿಕೊಂಡ ಪಂತ್ ಈ ಬಾರಿ ಐಪಿಎಲ್‌ನಲ್ಲಿ ಆಡಿ ಗಮನ ಸೆಳೆದಿದ್ದರು.
ಪಂತ್ 2024 ರ ಟಿ 20 ವಿಶ್ವಕಪ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಅಭಿಮಾನಿಗಳು ಕೂಡ ಪಂತ್ ಬಗ್ಗೆ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ರಿಷಭ್ ಪಂತ್ ಭಾರತದ ಪರ 33 ಟೆಸ್ಟ್ ಪಂದ್ಯಗಳ 56 ಇನ್ನಿಂಗ್ಸ್‌ಗಳಲ್ಲಿ 2271 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಪಂತ್ 5 ಶತಕ ಮತ್ತು 11 ಅರ್ಧ ಶತಕ ಸಿಡಿಸಿದ್ದಾರೆ. ಇದರಲ್ಲಿ ಅಜೇಯ 159 ರನ್ ಸಿಡಿಸಿರುವುದು ದೊಡ್ಡ ಸಾಧನೆ. ವಿಕೆಟ್ ಕೀಪಿಂಗ್ ಮಾಡುವಾಗ, ಅವರು ಈ ಸ್ವರೂಪದಲ್ಲಿ 119 ಕ್ಯಾಚ್‌ಗಳು ಮತ್ತು 14 ಸ್ಟಂಪಿಂಗ್‌ಗಳನ್ನು ಸಹ ತೆಗೆದುಕೊಂಡಿದ್ದಾರೆ.