For Quick Alerts
ALLOW NOTIFICATIONS  
For Daily Alerts
 

Rishabh Pant: ರಿಷಭ್‌ ಪಂತ್ ಬಿರುಸಿನ್ ಬ್ಯಾಟಿಂಗ್ ವಿಶ್ವ ದಾಖಲೆ

ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಿವೆ. ಈ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಬರ ಅನುಭವಿಸಿದ್ದಾರೆ. ಆದರೆ ಭಾರತ ತಂಡದ ಮಧ್ಯಮ ಕ್ರಮಾಂಕದ ರಿಷಭ್‌ ಪಂತ್‌ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ರಿಷಭ್‌ ಅಬ್ಬರಿಸಿದರು. ಈ ಮೂಲಕ ರಿಷಭ್ ಪಂಥ್‌ ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಎರಡನೇ ಇನಿಂಗ್ಸ್‌ನಲ್ಲೂ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಮೊದಲ ದಿನದಂತೆಯೇ ಎರಡನೇ ದಿನವೂ ಬೌಲರ್‌ಗಳ ಪ್ರಾಬಲ್ಯ ಕಂಡು ಬಂದಿದ್ದು, ಇಡೀ ದಿನ ಒಟ್ಟು 15 ವಿಕೆಟ್‌ಗಳು ಬಿದ್ದಿವೆ. ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ 61 ರನ್ ಬಾರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಪಂತ್ ತಮ್ಮ ಅರ್ಧಶತಕವನ್ನು ಕೇವಲ 29 ಎಸೆತಗಳಲ್ಲಿ ಪೂರ್ಣಗೊಳಿಸಿದರು.

Rishabh Pant Sets Test Cricket Record with Blistering 29-Ball Fifty in Sydney

ವೇಗದ ಅರ್ಧಶತಕ

ರಿಷಭ್‌ ಪಂತ್‌ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು ಬಿರುಸಿನ ಬ್ಯಾಟಿಂಗ್‌ಗೆ ಆಸೀಸ್‌ ಬೌಲರ್‌ಗಳು ಕಂಗಾಲಾದರು ಟೆಸ್ಟ್‌ ಕ್ರಿಕೆಟ್‌ನಲ್ಲಿ, ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿದ ರಿಷಭ್‌ ಪಂತ್‌ ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಅವರು ಕೇವಲ 2 ಎಸೆತಗಳ ಅಂತರದಲ್ಲಿ ಮತ್ತೊಂದು ದಾಖಲೆ ಬರೆಯುವ ಕನಸು ನುಚ್ಚುನುರಾಗಿದೆ. ರಿಷಭ್‌ ಪಂತ್ ಇದಕ್ಕೂ ಮೊದಲು ಬೆಂಗಳೂರಿನಲ್ಲಿ 2022ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ರಿಷಭ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 30 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಅರ್ಧಶತಕ ಪೂರೈಸಿದರು. ಈ ಸಾಧನೆಯನ್ನು ವಿಶ್ವ ಕ್ರಿಕೆಟ್‌ನಲ್ಲಿ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

184 ಸ್ಟ್ರೈಕ್‌ ರೇಟ್‌

ರಿಷಭ್‌ ಪಂತ್‌ ಎರಡನೇ ಇನಿಂಗ್ಸ್‌ನಲ್ಲಿ 33 ಎಸೆತಗಳಲ್ಲಿ 61 ರನ್‌ ಸಿಡಿಸಿದರು. ಇವರು 6 ಬೌಂಡರಿಗಳ ಜೊತೆಗೆ 4 ಸಿಕ್ಸರ್‌ ಸಿಡಿಸಿದರು. ಈ ವೇಳೆ ಪಂತ್ ಸ್ಟ್ರೈಕ್ ರೇಟ್ 184.85 ಆಗಿದೆ. ಪಂತ್ ಅವರ ಅಮೋಘ ಇನಿಂಗ್ಸ್ ಫಲವಾಗಿ ಟೀಮ್ ಇಂಡಿಯಾ ಸದ್ಯ ರೋಚಕತೆ ಹೆಚ್ಚಿಸಿದೆ.

ಪಂತ್‌ ಅವರ ಈ ಇನಿಂಗ್ಸ್‌ ಆಧಾರದ ಮೇಲೆ ಇವರು ಡೇವಿಡ್ ವಾರ್ನರ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಅವರ ಹೆಸರಿರುವ ಪಟ್ಟಿಗೆ ಸೇರಿಕೊಂಡಿದ್ದಾರೆ . ಡೇವಿಡ್ ವಾರ್ನರ್ 2017 ರಲ್ಲಿ ಪಾಕಿಸ್ತಾನದ ವಿರುದ್ಧ 203.70 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದರು. ಇನ್ನು ಆಡಂ ಗಿಲ್‌ ಕ್ರಿಸ್ಟ್ ಸಹ 2006ರಲ್ಲಿ ಇಂಗ್ಲೆಂಡ್ ವಿರುದ್ಧ 172.88 ಸ್ಟ್ರೈಕ್ ರೇಟ್‌ ನಲ್ಲಿ ರನ್ ಕಲೆ ಹಾಕಿ ಅಬ್ಬರಿಸಿದರು.

Story first published: Saturday, January 4, 2025, 19:25 [IST]
Other articles published on Jan 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+