Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಷಭ್‌ ಪಂತ್‌ ಟೆಸ್ಟ್‌ ತಂಡ ಸೇರುವ ಮುನ್ನ ಭರ್ಜರಿ ಬ್ಯಾಟಿಂಗ್: ಟೀಕೆಗಳಿಗೆ ಅಂಗಳದಲ್ಲಿ ಉತ್ತರ

ಟೀಮ್ ಇಂಡಿಯಾದ ವಿಕೆಟ್‌ ಕೀಪರ್ ಬ್ಯಾಟರ್‌ ರಿಷಭ್‌ ಪಂತ್‌ ಅವರ ಕ್ಷಮತೆಯ ಬಗ್ಗೆ ಯಾರಿಗೂ ಸಂಶಯವೂ ಇಲ್ಲವೇ ಇಲ್ಲ. ಆದರೆ ಪ್ರಸಕ್ತ ಅವರು ಗಾಯದಿಂದ ತಂಡಕ್ಕೆ ಮರಳಿದ್ದು ಟೆಸ್ಟ್‌ ಫಾರ್ಮೆಟ್‌ನಲ್ಲಿ ಆಡುವಷ್ಟು ಕ್ಷಮತೆ ಇದೆಯೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿದ್ದವು. ಆ ಅನುಮಾನಗಳಿಗೆ ರಿಷಭ್‌ ದುಲೀಪ್‌ ಟ್ರೋಫಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಭರ್ಜರಿ ಆನ್ಸರ್‌ ನೀಡಿದ್ದಾರೆ.

ರಿಷಭ್‌ ಪಂತ್‌ ದುಲೀಪ್‌ ಟ್ರೋಫಿಯಲ್ಲಿ ಸದ್ಯ ಆಡುತ್ತಿದ್ದಾರೆ. ಭಾರತ ಎ ಹಾಗೂ ಭಾರತ ಬಿ ತಂಡಗಳು ನಡುವಿನ ಕಾದಾಟದಲ್ಲಿ ರಿಷಭ್‌ ಅಂಗಳ ಪ್ರವೇಶಿಸಿದ್ದಾರೆ. ಭಾರತ ಬಿ ತಂಡದ ಪರ ಬ್ಯಾಟ್ ಮಾಡಿರುವ ರಿಷಭ್‌, ಮೊದಲ ಇನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಕೀಪಿಂಗ್‌ನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಈಗ ರಿಷಭ್‌ಪಂತ್‌ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದಾರೆ.

Rishabh Pant Shines in Duleep Trophy Silences Critics Ahead of Test Team Selection

ಟೀಕೆಗಳಿಗೆ ಬ್ಯಾಟ್‌ನಿಂದ ಉತ್ತರ

ದುಲೀಪ್‌ ಟ್ರೋಫಿ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್‌ ಪಂತ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಬ್ಯಾಟಿಂಗ್ ವೈಭವ ಕಂಡು ಟೀಕಾಕಾರರು ಸಹ ಬಾಯಿ ಮುಚ್ಚಬೇಕಾಯಿತು. ಲಾಂಗರ್‌ ಫಾರ್ಮೆಟ್‌ನಲ್ಲಿ ಚುಟುಕು ಕ್ರಿಕೆಟ್‌ ರೀತಿ ಬ್ಯಾಟ್ ಮಾಡಿ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾಬೀತು ಪಡಿಸಿದರು.

ತಂಡ ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಆಧಾರವಾದ ಆಟಗಾರ ರಿಷಭ್ ಪಂತ್. ತಮ್ಮ ಮನಮೋಹಕ ಬ್ಯಾಟಿಂಗ್ ಶೈಲಿಯನ್ನು ಶನಿವಾರ ಪ್ರಸ್ತುತ ಪಡಿಸಿದರು. ಇವರು ಜಸ್ಟ್‌ 34 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ ಅರ್ಧಶತಕ ಬಾರಿಸಿ ಮಿಂಚಿದರು. ಬ್ಯಾಟಿಂಗ್ ಸ್ವರ್ಗ ಎಂದೇ ಕರೆಯಲ್ಪಡುವ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ರಿಷಭ್ ನೈಜ ಆಟವನ್ನು ಆಡಿ ಗಮನ ಸೆಳೆದರು. 47 ಎಸೆತಗಳಲ್ಲಿ 61 ಸಿಡಿಸಿ ರಿಷಭ್‌ ಪೆವೆಲಿಯನ್ ಸೇರಿದರು.

Rishabh Pant Shines in Duleep Trophy Silences Critics Ahead of Test Team Selection

ಸರ್ಫರಾಜ್‌ ಕ್ಲಾಸಿಕ್‌ ಬ್ಯಾಟಿಂಗ್

ಭಾರತ ಬಿ ತಂಡದ ಪರವೇ ಬ್ಯಾಟ್ ಮಾಡುತ್ತಿರುವ ಸರ್ಫರಾಜ್ ಖಾನ್‌ ಕ್ಲಾಸಿಕ್‌ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಇವರು ಭಾರತದ ಪರ ಟೆಸ್ಟ್ ಆಡಿರುವ ಆಕಾಶ್ ದೀಪ್ ಅವರ ಒಂದೇ ಓವರ್‌ನಲ್ಲಿ ಸತತ 5 ಬೌಂಡರಿಗಳನ್ನು ಬಾರಿಸಿದರು. ಒಂದಕ್ಕಿಂತ ಒಂದು ಅಮೋಘ ಹೊಡೆತಗಳನ್ನು ಪ್ರಯೋಗಿಸಿ ಮಿಂಚಿದರು.

ಆಕಾಶ್‌ ದೀಪ್‌ ಮೊದಲ ಎಸೆತ ಡಾಟ್‌ ಆಯಿತು. ಎರಡನೇ ಎಸೆತದಲ್ಲಿ ಸರ್ಫರಾಜ್‌ ಥರ್ಡ್‌ ಮ್ಯಾನ್‌ ಕಡೆ, ಮೂರನೇ ಎಸೆತದಲ್ಲಿ ಕವರ್‌ನಲ್ಲಿ, ನಾಲ್ಕನೇ ಎಸೆತದಲ್ಲಿ ಲೆಗ್‌ ಸೈಡ್‌ನಲ್ಲಿ, ಐದನೇ ಎಸೆತದಲ್ಲಿ ಲಾಂಗ್‌ ಆಫ್‌ನಲ್ಲಿ, ಕೊನೆಯ ಎಸೆತದಲ್ಲಿ ಆಫ್‌ ಸೈಡ್‌ನಲ್ಲಿ ಅಮೋಘ ಡ್ರೈವ್‌ ಮಾಡಿ ಬೌಂಡರಿ ಪಡೆದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾರತ ಬಿ 240 ರನ್‌ ಮುನ್ನಡೆ

ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ಬಿ ತಂಡ ಶನಿವಾರದ ಆಟದ ಮುಕ್ತಾಯಕ್ಕೆ 6 ವಿಕೆಟ್‌ಗೆ 150 ರನ್‌ ಸೇರಿಸಿದೆ. ವಾಶಿಂಗ್ಟನ್‌ ಸುಂದರ್‌ ಅರು ರನ್‌ ಬಾರಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Saturday, September 7, 2024, 20:30 [IST]
Other articles published on Sep 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+