'ವೈಟ್‌ಬಾಲ್ ತಂಡಗಳಲ್ಲಿ ಅಯ್ಯರ್, ಸ್ಯಾಮ್ಸನ್ ಬದಲು ಪಂತ್ ಆಡಿಸಬೇಕು'

ನವದೆಹಲಿ: ಏಕದಿನ ಕ್ರಿಕೆಟ್ ಮತ್ತು ಟಿ20ಐ ಕ್ರಿಕೆಟ್ ಮಾದರಿಗಳಲ್ಲಿ ಶ್ರೇಯಸ್ ಐಯ್ಯರ್ ಅಥವಾ ಸಂಜು ಸ್ಯಾಮ್ಸನ್ ಬದಲಿಗೆ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಅವಕಾಶ ನೀಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಬ್ರಾಡ್ ಹಾಗ್ ಹೇಳಿದ್ದಾರೆ.
ರಿಷಭ್ ಪಂತ್ ಅವರ ಅಸಾಂಪ್ರದಾಯಿಕ ಹೊಡೆತಗಳು ಬೌಲರ್‌ಗಳಿಗೆ ಬೌಲ್ ಮಾಡಲು ಸವಾಲೆನಿಸುತ್ತವೆ. ಹೀಗಾಗಿ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ಗೆ ಹೆಚ್ಚು ಅವಕಾಶ ನೀಡಬೇಕು ಎಂದು ಬ್ರಾಡ್ ಹಾಗ್ ಅಭಿಪ್ರಾಯಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹಾಗ್, ಈ ವಿಚಾರ ಹೇಳಿಕೊಂಡಿದ್ದಾರೆ.
'ಆಸ್ಟ್ರೇಲಿಯಾದಲ್ಲಿ ಆಡಿದ ಆ ತಂಡಕ್ಕಿಂತ ಉತ್ತಮ ತಂಡ ನಿಮಗೆ ಬೇರೆ ಸಿಗಲಿಕ್ಕಿಲ್ಲ. ನಾನವನನ್ನು (ಪಂತ್‌ನನ್ನು) ಶ್ರೇಯಸ್ ಜಾಗದಲ್ಲಿ ಇಡಲು ಬಯಸುತ್ತೇನೆ. ನಿಮ್ಮ ಆಲ್ ರೌಂಡರ್ ಆಯ್ಕೆಗಳನ್ನೆಲ್ಲಾ ಬೌಲಿಂಗ್, ಬ್ಯಾಟಿಂಗ್‌ನತ್ತ ಇಡಿ. ಆತ ಒಂದೋ ಶ್ರೇಯಸ್ ಐಯ್ಯರ್ ಬದಲು ಅಥವಾ ಸಂಜು ಸ್ಯಾಮ್ಸನ್ ಬದಲು ತಂಡದಲ್ಲಿರುತ್ತಾರೆ,' ಎಂದು ಹಾಗ್ ಹೇಳಿದ್ದಾರೆ.
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಐದು ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಪಂತ್ 3ನೇ ಸ್ಥಾನ ಪಡೆದುಕೊಂಡಿದ್ದರು. ಪಂತ್ 68.50ರ ಸರಾಸರಿಯಂತೆ 274 ರನ್ ಬಾರಿಸಿದ್ದರು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕೂಡ ಪಂತ್ ಅನಂತರದ ಸ್ಥಾನಗಳಲ್ಲಿ ಅಂದರೆ 4ನೇ, 5ನೇ ಸ್ಥಾನದಲ್ಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications