ಭಾರತ vs ಆಸೀಸ್: 3ನೇ ಟೆಸ್ಟ್‌ಗೂ ಮುನ್ನ ಪಂತ್ ಕಸರತ್ತು-ವಿಡಿಯೋ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಜನವರಿ 7ರ ಗುರುವಾಗ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪಂದ್ಯಕ್ಕಾಗಿ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಭಾರತದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಜಿಮ್‌ನಲ್ಲಿ ಶ್ರಮ ವಹಿಸಿ ಅಭ್ಯಾಸ ನಡೆಸುತ್ತಿದ್ದಾರೆ.
ಮೂರನೇ ಟೆಸ್ಟ್ ನಿಮಿತ್ತ ತಯಾರಿಯಲ್ಲಿರುವ ರಿಷಭ್ ಪಂತ್ ತಾನು ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿರುವುದ ವಿಡಿಯೋ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಪಂತ್ ಹಾಕಿಕೊಂಡಿರುವ ಈ ವಿಡಿಯೋದಲ್ಲಿ ಪಂತ್ ಸಾಮಾನ್ಯ ಅಭ್ಯಾಸ ನಡೆಸುತ್ತಿಲ್ಲ, ಜಂಪ್ ಮಾಡಿ ಗಮನ ಸೆಳೆದಿದ್ದಾರೆ.
ಟ್ವಿಟರ್‌ನಲ್ಲಿ ವಿಡಿಯೋ ಹಾಕಿಕೊಂಡಿರುವ ಪಂತ್, 'ಗುಡ್ ಡೇ ಅ್ಯಟ್ ಲ್ಯಾಬ್' ಎಂದು ಬರೆದುಕೊಂಡಿದ್ದಾರೆ. ಇಂಥದ್ದೇ ಜಂಪ್ ಅನ್ನು ಪಂತ್ ಮೈದಾನದಲ್ಲೂ ಮಾಡಿ ಈ ಹಿಂದೆ ಚಿತ್ತ ತನ್ನತ್ತ ಹರಿಸಿಕೊಂಡಿದ್ದರು. ಇದಲ್ಲದೆ ಪಂತ್ ಜಿಮ್‌ನಲ್ಲಿ ಸಾಮಾನ್ಯ ಅಭ್ಯಾಸ ನಡೆಸುತ್ತಿರುವ ಚಿತ್ರಗಳೂ ಇನ್‌ಸ್ಟಾಗ್ರಾಮ್‌ನಲ್ಲಿತ್ತು.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ 40 ಎಸೆತಗಳಿಗೆ 29 ರನ್ ಬಾರಿಸಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಂತ್‌ಗೆ ಬ್ಯಾಟಿಂಗ್ ಸಿಕ್ಕಿರಲಿಲ್ಲ. ದ್ವಿತೀಯ ಪಂದ್ಯದಲ್ಲಿ ಪಂತ್ ವಿಕೆಟ್ ಕೀಪಿಂಗ್‌ನಲ್ಲೂ ಸುಧಾರಿಸಿದ್ದು ಕಂಡು ಬಂದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications