Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪಂತ್!

ಕಳೆದ ಎರಡು ವರ್ಷಗಳ ಹಿಂದೆ ಕಾರು ಅಪಘಾತಕ್ಕೀಡಾಗಿದ್ದ ಟೀಮ್ ಇಂಡಿಯಾ ಸ್ಟಾರ್ ವಿಕೆಟ್‌ಕೀಪರ್‌-ಬ್ಯಾಟರ್ ರಿಷಬ್ ಪಂತ್ ಅವರ ಅದೃಷ್ಟ ಬದಲಾಗಿದೆ. ಕಾರು ಅಪಘಾತದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಬ್ ಪಂತ್ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕನಸಿನ ಮಾತು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಟೀಮ್ ಇಂಡಿಯಾದಲ್ಲಿ ಪಂತ್ ಭದ್ರಪಡಿಸಿಕೊಂಡಿದ್ದ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಪಂತ್ ಇದೀಗ ಟೀಮ್ ಇಂಡಿಯಾ ಪರ ಮಿಂಚಿದ್ದರು.

ರಿಷಬ್ ಪಂತ್ ಈಗ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿ ಹೋಗಿದ್ದಾರೆ. ತಂಡ ಸಂಕಷ್ಟ ಸಂದರ್ಭದಲ್ಲಿ ಸಿಲುಕಿದಾಗೆಲ್ಲ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ರನ್ ಹೊಳೆ ಹರಿಸುತ್ತಿದ್ದಾರೆ. ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ದಾಖಲೆ ಬೆಲೆಗೆ ಬಿಡ್ ಆಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಫ್ರಾಂಚೈಸಿ ರಿಷಬ್ ಪಂತ್ ಅವರಿಗೆ 27 ಕೋಟಿ ರೂ. ನೀಡಿ ಬಿಡ್ ಮಾಡಿದೆ. ಇಲ್ಲಿಂದ ರಿಷಬ್ ಪಂತ್ ಅವರ ಅದೃಷ್ಟದ ಮತ್ತೊಂದು ಬಾಗಿಲು ತೆರೆದಿದೆ. ಈ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಟೀಮ್ ಇಂಡಿಯಾದ ಸ್ಟಾರ್ ಆಟಗಾರರನ್ನು ಸಂಭಾವನೆ ಪಡೆಯುವ ವಿಚಾರದಲ್ಲಿ ರಿಷಬ್ ಪಂತ್ ಹಿಂದಿಕ್ಕಿದ್ದಾರೆ.

Rishabh Pant Surpasses Virat Kohli and Rohit Sharma to Become the Highest-Paid Indian Cricketer

ರಿಷಬ್ ಪಂತ್ ಈಗ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ನಿರ್ಮಿಸಿರುವ ರಿಷಬ್ ಪಂತ್ ಎಲ್‌ಎಸ್‌ಜಿ ಫ್ರಾಂಚೈಸಿಯಿಂದ 27 ಕೋಟಿ ರೂ. ಪಡೆದರೆ, ಕೇಂದ್ರ ಗುತ್ತಿಗೆ ಒಪ್ಪಂದಗಳ ಗ್ರೇಡ್ ಬಿ ಪಟ್ಟಿಯಲ್ಲಿರುವ ಪಂತ್ ಬಿಸಿಸಿಐನಿಂದ ವರ್ಷಕ್ಕೆ 3 ಕೋಟಿ ರೂ. ಹಣ ಪಡೆಯುತ್ತಿದ್ದಾರೆ.

ಐಪಿಎಲ್ ಮತ್ತು ಬಿಸಿಸಿಐ ಒಪ್ಪಂದಗಳು ಸೇರಿದಂತೆ ರಿಷಬ್ ಪಂತ್ ಅವರ ವಾರ್ಷಿಕ ಸಂಭಾವನೆ ಈಗ 30 ಕೋಟಿ ರೂ.ಗಳಾಗಿದೆ. ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗಿಂತ ಹೆಚ್ಚಾಗಿದೆ. ಎ ಪ್ಲಸ್ ಗ್ರೇಡ್ ಕ್ರಿಕೆಟಿಗರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಸ್ತುತ ಬಿಸಿಸಿಐನಿಂದ ವಾರ್ಷಿಕ ತಲಾ 7 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ, ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) 16.3 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ.

ಐಪಿಎಲ್ ಮತ್ತು ಬಿಸಿಸಿಐ ಒಪ್ಪಂದಗಳು ಸೇರಿ ವಿರಾಟ್ ಕೊಹ್ಲಿಯ ವಾರ್ಷಿಕ ಸಂಭಾವನೆ ಈಗ 28 ಕೋಟಿ ರೂ. ಮತ್ತೊಂದೆಡೆ ರೋಹಿತ್ ಶರ್ಮಾ ಅವರ ಸಂಭಾವನೆ 23.3 ಕೋಟಿ ರೂ. ಆಗಿದೆ. ಈ ಇಬ್ಬರಿಗಿಂತ ಹೆಚ್ಚು ವಾರ್ಷಿಕ ಸಂಭಾವನೆ ಹೊಂದಿರುವ ರಿಷಭ್ ಪಂತ್ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ರಿಷಬ್ ಪಂತ್ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Story first published: Friday, November 29, 2024, 14:40 [IST]
Other articles published on Nov 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+