For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಸಿಂಗ್ ಗರಡಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರಿಷಭ ಪಂತ್

ಟಿ20 ವಿಶ್ವಕಪ್‌ ಮುಗಿದಿದೆ. ಈಗ ಎಲ್ಲ ಆಟಗಾರರು ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ತಯಾರಿ ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಡಿದ ಟೀಮ್ ಇಂಡಿಯಾದ ಆಟಗಾರರು ಇನ್ನು ಕೆಲವೇ ದಿನಗಳಲ್ಲಿ ತಮ್ಮ ತಮ್ಮ ಕ್ಯಾಂಪ್ ಸೇರಲಿದ್ದಾರೆ. ಈ ತಿಂಗಳು ಕೊನೆಯಲ್ಲಿ ಆರಂಭವಾಗಲಿರುವ ಐಪಿಎಲ್‌ಗಾಗಿ 10 ತಂಡಗಳ ಫ್ರಾಂಚೈಸಿಗಳು ತಯಾರಿ ನಡೆಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ರಿಷಭ್ ಪಂತ್ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ರಿಷಭ್‌ ಪಂತ್ ಅವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್ ಸಿಕ್ಸರ್‌ ಸಿಂಗ್ ಖ್ಯಾತಿಯ ಯುವರಾಜ್‌ ಸಿಂಗ್ ಗರಡಿಯಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ. ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಯುವರಾಜ್ ಸಿಂಗ್ ಅವರ ಅಡಿಯಲ್ಲಿ ರಿಷಭ್ ಪಂತ್ ತರಬೇತಿ ಪಡೆಯುತ್ತಿರುವ ವೀಡಿಯೊ ಸಖತ್ ವೈರಲ್ ಆಗುತ್ತಿದೆ. ಈ ಬದಲಾವಣೆಯ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ನೋಡಬಹುದಾಗಿದೆ.

Rishabh Pant

ಪಂತ್ ಅವರ ಬ್ಯಾಟಿಂಗ್‌ನಲ್ಲಿ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇವರು ಆಫ್ ಸೈಡ್‌ನಲ್ಲಿ ಹೆಚ್ಚಿನ ಶಾಟ್‌ಗಳನ್ನು ಪ್ರಯೋಗಿಸಿದನ್ನು ವಿಡಿಯೋದಲ್ಲ ಕಾಣಬಹುದಾಗಿದೆ. ಈ ವೇಳೆ ಇವರ ಬ್ಯಾಟಿಂಗ್‌ನಲ್ಲಿ ಬದಲಾವಣೆಯನ್ನು ಸಹ ಕಾಣಬಹುದಾಗಿದೆ. ಪಂತ್ ಬ್ಯಾಟಿಂಗ್ ಮಾಡುವಾಗ ಯುವರಾಜ್‌ ಸಿಂಗ್ ಅಂಪೈರ್‌ ಸ್ಥಾನದಲ್ಲಿ ನಿಂತು ಹತ್ತಿರದಿಂದ ಪಂತ್ ಅವರ ಆಟವನ್ನು ನೋಡುತ್ತಿದ್ದರು.

ರಿಷಭ್‌ ಪಂತ್ ಕಠಿಣ ಅಭ್ಯಾಸ

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ ಅವರಿಗೆ 18ನೇ ಆವೃತ್ತಿಯ ಐಪಿಎಲ್ ಯಾವುದೇ ದುಃಸ್ವಪ್ನಕ್ಕಿಂತ ಕಡಿಮೆ ಏನು ಇರಲಿಲ್ಲ. ಕಳೆದ ಬಾರಿ ರಿಷಭ್‌ ಪಂತ್ ರನ್ ಕಲೆ ಹಾಕಲು ಪರದಾಟ ನಡೆಸಿದರು. ಇವರ ಕಳಪೆ ಪ್ರದರ್ಶನದ ಫಲವಾಗಿ ಇವರನ್ನು ಭಾರತೀಯ ಏಕದಿನ ತಂಡದಿಂದಲೂ ಕೈ ಬಿಡಲಾಗಿತ್ತು. ಅವರ ನಾಯಕತ್ವದಲ್ಲಿ ಕಳೆದ ಆವೃತ್ತಿಯನ್ನು ಆಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಕಳೆದ ಸೀಸನ್‌ನಲ್ಲಿ 7 ನೇ ಸ್ಥಾನ ಗಳಿಸಿತು. ಯುವಿ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರೊಂದಿಗೆ ಕೆಲಸ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇವರು ವಿಶೇಷವಾಗಿ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಶುಭಮನ್‌ ಗಿಲ್‌ ಪ್ರಭ್ಸಿಮ್ರಾನ್ ಸಿಂಗ್ ಅವರಿಗೆ ತರಬೇತಿ ನೀಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ರಿಷಭ್ ಪಂತ್ ಹಾಗೂ ಎಲ್‌ಎಸ್‌ಜಿ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದೇ ಎಲ್ಲರ ಚಿತ್ತ ಕದ್ದಿದೆ.

Story first published: Wednesday, March 11, 2026, 14:12 [IST]
Other articles published on Mar 11, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+