Rishabh Pant : ಆದಷ್ಟು ಬೇಗನೆ ಮೈದಾನಕ್ಕೆ ಬರುತ್ತೇನೆ : ಅಪಘಾತದ ಬಳಿಕ ಮೊದಲ ಬಾರಿ ರಿಷಬ್ ಪಂತ್ ಟ್ವೀಟ್

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಇದೇ ಮೊದಲ ಬಾರಿಗೆ ರಿಷಬ್ ಪಂತ್ ಟ್ವೀಟ್ ಮಾಡಿದ್ದಾರೆ. ತಮಗೆ ಅಪಘಾತವಾದಾಗ ಸಹಾಯಕ್ಕೆ ಬಂದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಡಿಸೆಂಬರ್ 30 ರಂದು ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಸುಮಾರು 18ಕ್ಕೂ ಹೆಚ್ಚಿನ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಪಂತ್ ಮೊದಲ ಬಾರಿಗೆ ಟ್ವೀಟ್ ಮಾಡಿದ್ದು, ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
"ನನಗೆ ಬೆಂಬಲ ನೀಡಿದ ಮತ್ತು ಹಾರೈಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ. ಚೇತರಿಸಿಕೊಳ್ಳುವ ಕೆಲಸ ಆರಂಭವಾಗಿದೆ. ಮುಂದಿನ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ, ಬಿಸಿಸಿಐ, ಜಯ್ ಶಾ ಮತ್ತು ಸರ್ಕಾರಿ ಸಿಬ್ಬಂದಿಯ ಸಹಾಯ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ಎಲ್ಲಾ ಅಭಿಮಾನಿಗಳು, ತಂಡದ ಸಹ ಆಟಗಾರರು, ವೈದ್ಯರು ಮತ್ತು ಫಿಸಿಯೋಗಳ ಸಲಹೆ ಮತ್ತು ಬೆಂಬಲಕ್ಕೆ ಹೃದಯದಿಂದ ಧನ್ಯವಾದಗಳು. ಮೈದಾನದಲ್ಲಿ ನಿಮ್ಮನ್ನು ಮತ್ತೆ ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಂಬೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ
ಡಿಸೆಂಬರ್ 30 ರಂದು ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಆರಂಭದಲ್ಲಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಮೂಲಕ ಸಾಗಿಸಲಾಗಿತ್ತು.
ಅಲ್ಲಿ ರಿಷಬ್ ಪಂತ್‌ಗೆ ಯಶಸ್ವಿಯಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕನಿಷ್ಠ 6 ತಿಂಗಳು ಅವರು ಕ್ರಿಕೆಟ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಬಿಸಿಸಿಐ ಪಂತ್‌ರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದೆ.
ಐಪಿಎಲ್ 2023: ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕನ್ನಡಿಗ ಸುನಿಲ್ ಜೋಶಿ ನೇಮಕ

21 ಕೋಟಿ ಪಡೆಯಲಿರುವ ಪಂತ್
ರಿಷಬ್ ಪಂತ್ 2023ರಲ್ಲಿ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಈಗಾಗಲೇ ಅವರು 2023ರ ಐಪಿಎಲ್‌ನಿಂದ ಹೊರುಗುಳಿಯುವುದು ಖಚಿತವಾಗಿದೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೌರವ್ ಗಂಗೂಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್‌ನಿಂದ ಹೊರಗುಳಿದರೂ ಅವರು ಒಪ್ಪಂದದ ಪ್ರಕಾರ 16 ಕೋಟಿ ರುಪಾಯಿ ವೇತನವನ್ನು ಪಡೆಯಲಿದ್ದಾರೆ. ವಿಮಾ ಕಂಪೆನಿಯೇ ಈ ಮೊತ್ತವನ್ನು ತುಂಬಿಕೊಡಲಿದೆ. ಅಲ್ಲದೆ ಬಿಸಿಸಿಐ ಒಪ್ಪಂದದಂತೆ 5 ಕೋಟಿ ರುಪಾಯಿ ವೇತನ ನೀಡಲು ನಿರ್ಧರಿಸಿದೆ. ಮಾತ್ರವಲ್ಲದೆ ರಿಷಬ್ ಪಂತ್‌ರ ಚಿಕಿತ್ಸೆಯ ವೆಚ್ಚವನ್ನು ಕೂಡ ಬಿಸಿಸಿಐ ಭರಿಸಲಿದೆ.

2023ರಲ್ಲಿ ಕ್ರಿಕೆಟ್ ಆಡ್ತಾರ?
ಮೂಲಗಳ ಪ್ರಕಾರ ರಿಷಬ್ ಪಂತ್ 2023ರಲ್ಲಿ ಕ್ರಿಕೆಟ್ ಆಡುವುದೇ ಅನುಮಾನ ಎನ್ನಲಾಗಿದೆ. ಗಾಯದ ಇತಿಹಾಸ ಹೊಂದಿರುವ ಪಂತ್ ಈಗ ಮೊಣಕಾಲು ಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ನಂತರ ಅವರು 3 ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕು ಎನ್ನಲಾಗಿದೆ.
ಏಕದಿನ ಮತ್ತು ಟಿ20 ಮಾದರಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡದೇ ಹೋದರೂ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ತಂಡಕ್ಕೆ ಪ್ರಮುಖವಾಗಿದ್ದರು. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ತಮ್ಮ ಫಾರ್ಮ್ ಕಂಡುಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಸಿದ್ಧವಾಗುವ ವೇಳೆಯಲ್ಲಿ ಅವರು ಅಪಘಾತದಲ್ಲಿ ಗಾಯಗೊಂಡಿದ್ದು, ಟೆಸ್ಟ್ ತಂಡದ ಮೇಲೆ ಪರಿಣಾಮ ಬೀರಿರುವುದಂತೂ ಸತ್ಯ. ಆದಷ್ಟು ಬೇಗ ಯಂಗ್ ಬ್ಯಾಟರ್ ಸುಧಾರಿಸಿಕೊಂಡು ಮೈದಾನಕ್ಕೆ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications