ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ 'ಐಸಿಸಿ ತಿಂಗಳ ಆಟಗಾರ' ಪ್ರಶಸ್ತಿ

ಚೆನ್ನೈ: ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ತಿಂಗಳ ಆಟಗಾರ ಪ್ರಶಸ್ತಿ ಲಭಿಸಿದೆ. ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಭಾರತೀಯನಿಗೆ ಗೌರವ ಲಭಿಸಿರುವುದನ್ನು ಖಾತರಿಪಡಿಸಿದೆ.
ಐಸಿಸಿ ಘೋಷಿಸುತ್ತಿರುವ ತಿಂಗಳ ಪ್ರಪ್ರಥಮ ಪ್ರಶಸ್ತಿಯಿದು. ಇನ್ನು ಪ್ರತೀ ತಿಂಗಳು ಐಸಿಸಿ ಹೀಗೇ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸಲಿದೆ. ಈ ಪ್ರಶಸ್ತಿಗಾಗಿ ಪಂತ್ ಜೊತೆಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಐರ್ಲೆಂಡ್‌ನ ಪೌಲ್ ಸ್ಟಿರ್ಲಿಂಗ್ ಕೂಡ ನಾಮನಿರ್ದೇಶಿಸಲ್ಪಟ್ಟಿದ್ದರು. ಇದರಲ್ಲಿ ಪಂತ್‌ಗೆ ಗೌರವ ದೊರೆತಿದೆ.
'ಈ ಒಂದು ತಿಂಗಳು ಭಾರತದ ರಿಷಭ್ ಪಂತ್ ಅವರನ್ನು ನೆನಪಿಸಿಕೊಳ್ಳಬೇಕಿದೆ. ಐಸಿಸಿ ಪುರುಷರ ವಿಭಾಗದ ತಿಂಗಳ ಉದ್ಘಾಟನಾ ಪ್ರಶಸ್ತಿ ಪಡೆದ ರಿಷಭ್ ಪಂತ್‌ಗೆ ಅಭಿನಂದನೆಗಳು ಎಂದು ಐಸಿಸಿ ಟ್ವಿಟರ್‌ನಲ್ಲಿ ಬರೆದುಕೊಂಡಿದೆ. ಪಂತ್ ಸದ್ಯ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ.
ಈ ಮೊದಲು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ 23ರ ಹರೆಯದ ರಿಷಭ್ ಪಂತ್ ಸಿಡ್ನಿ ಟೆಸ್ಟ್‌ನಲ್ಲಿ 97 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಸೋಲುವುದರಲ್ಲಿದ್ದ ಭಾರತ ಡ್ರಾ ಸಾಧಿಸಿತ್ತು. ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಪಂತ್ ಅಜೇಯ 89 ರನ್ ಬಾರಿಸಿದ್ದರು. ಈ ಪಂದ್ಯದ ಗೆಲುವಿನೊಂದಿಗೆ ಭಾರತ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ದಾಖಲೆ ನಿರ್ಮಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications