IND vs ENG T20: ಈ ಮೂವರು ಆಟಗಾರರಿಗೆ ಏಕಿಲ್ಲ ತಂಡದಲ್ಲಿ ಸ್ಥಾನ?
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಗೆ ಆತಿಥೇಯ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದಿನ ಟಿ20 ಸರಣಿಯಲ್ಲಿ ಆಡಿದ ಯುವ ಆಟಗಾರರಿಗೆ ಗೇಟ್ ಪಾಸ್ ನೀಡಲಾಗಿದೆ. ಇನ್ನು ಯಾವೆಲ್ಲಾ ಆಟಗಾರರಿಗೆ ಅವಕಾಶ ನೀಡಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಹಾಗಿದ್ದರೆ ಯಾವೆಲ್ಲಾ ಆಟಗಾರರಿಗೆ ತಂಡದಲ್ಲಿ ಸ್ಥಾನ ಮಿಸ್ ಆಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಜನವರಿ 22 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ಸೂರ್ಯಕುಮಾರ್ ಮುನ್ನಡೆಸಲಿದ್ದು, ಅಕ್ಷರ್ ಪಟೇಲ್ ಅವರಿಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಉಳಿದಂತೆ ತಂಡಕ್ಕೆ 14 ತಿಂಗಳು ಬಳಿಕ ಮೊಹಮ್ಮದ್ ಶಮಿ ಕಂ ಬ್ಯಾಕ್ ಮಾಡಿದ್ದಾರೆ. ಇನ್ನು ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದ ಮೂವರು ಆಟಗಾರರಿಗೆ ಭಾರೀ ನಿರಾಸೆ ಆಗಿದೆ.

ರಿಷಭ್ ಪಂತ್
ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದಾಗ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದ ರಿಷಭ್ ಪಂತ್, ಚುಟುಕು ಫಾರ್ಮೆಟ್ ತಂಡವನ್ನು ನಿರಾಸೆ ಆಗಿದೆ. ಇವರು ಇತ್ತೀಚಿಗೆ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದರು. ಅಲ್ಲದೆ ವೇಗವಾಗಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಇವರು ಐದನೇ ಟೆಸ್ಟ್ ಪಂದ್ಯದಲ್ಲಿ ಟಿ20 ರೀತಿ ಬ್ಯಾಟಿಂಗ್ ಮಾಡಿದ್ದರು. ಇವರು ತಂಡದಲ್ಲಿ ಸ್ಥಾನ ಪಡೆಯದೇ ಇರುವುದು ಬೇಸರ ತರಿಸಿದೆ.
ಯಶಸ್ವಿ ಜೈಸ್ವಾಲ್
ಟಿ20 ಕ್ರಿಕೆಟ್‌ನಲ್ಲಿ ಕಂ ಬ್ಯಾಕ್ ಮಾಡುವ ಕನಸನ್ನು ಯಶಸ್ವಿ ಜೈಸ್ವಾಲ್ ಮಾಡಿದ್ದರು. ಇವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದರು. ಯಶಸ್ವಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ದರು. ಆದರೆ ಇವರಿಗೆ ಆಡುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಆಯ್ಕೆ ಸಮಿತಿ ಟೆಸ್ಟ್ ತಂಡದಲ್ಲಿ ಇವರನ್ನು ಪರಿಗಣಿಸುವಂತೆ, ಸೀಮಿತ ಓವರ್‍ಗಳ ಪಂದ್ಯದಲ್ಲಿ ಪರಿಗಣಿಸುತ್ತಿಲ್ಲ ಎಂಬ ನೋವು ಅಭಿಮಾನಿಗಳಲ್ಲಿದೆ.

ರುತುರಾಜ್ ಗಾಯಕ್ವಾಡ್
ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಟಿ20 ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡುವ ಕನಸಿನಲ್ಲಿದ್ದ ರುತುರಾಜ್ ಗಾಯಕ್ವಾಡ್ ಅವರಿಗೂ ಆಯ್ಕೆ ಸಮಿತಿ ಗೇಟ್ ಪಾಸ್ ನೀಡಿದೆ. ಇವರನ್ನು ಕಡೆಗಣಿಸಲು ಕಾರಣ ಏನು ಎಂಬುದೇ ಇನ್ನು ತಿಳಿದು ಬಂದಿಲ್ಲ. ಇವರು ಸಿಕ್ಕ ಅವಕಾಶದಲ್ಲಿ ಸ್ಥಿರ ಪ್ರದರ್ಶನ ನೀಡಿ ತಮ್ಮ ಆಯ್ಕೆಯನ್ನು ಸಹ ಸಮರ್ಥಿಸಿಕೊಂಡಿದ್ದರು. ಆದರೆ ಇವರೂ ಸಹ ಆಯ್ಕೆ ಸಮಿತಿಯ ಮನಸ್ಸು ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಈ ಮೂವರು ಆಟಗಾರರನ್ನು ಟೀಮ್ ಇಂಡಿಯಾ ಭವಿಷ್ಯದ ಸ್ಟಾರ್ ಗಳೆಂದು ಪರಿಗಣಿಸಲಾಗಿತ್ತು. ಆದರೆ ಇವರಿಗೆ ಸ್ಥಾನ ನೀಡದೆ ಇರುವುದು ನಿಜಕ್ಕೂ ಬೇಸರ ತರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications