Rishabh Pant: ದುಬಾರಿ ಆಟಗಾರನಿಗೆ ಇಲ್ಲ ನಾಯಕನ ಪಟ್ಟ
ಸೌದಿಯಲ್ಲಿ ನಡೆಯದ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ನೀಡಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಈ ಮೂಲಕ ಹಲವು ದಾಖಲೆಗಳನ್ನು ರಿಷಭ್ ಪಂತ್ ಮುರಿದಿದ್ದಾರೆ. ಈ ಹರಾಜಿನ ದುಬಾರಿ ಆಟಗಾರ ಎಂಬ ಖ್ಯಾತಿ ರಿಷಭ್ ಅವರದ್ದಾಗಿದೆ. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟಿತ್ತು. ಇನ್ನು ಮುಂದೆ ಇವರು ಲಕ್ನೋ ತಂಡದ ಪರ ಆಡಲಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ನಡೆಸುವ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಇದೇ ವೇಳೆ ತಮ್ಮ ತಂಡದಲ್ಲಿ ನಾಯಕರಿಗೆ ಏನು ಕಮ್ಮಿ ಇಲ್ಲ ಎಂಬುದಾಗಿ ಸಹ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಇದೇ ಸಂದರ್ಶನದಲ್ಲಿ ಅವರು ರಿಷಭ್ ಪಂತ್ ಅವರನ್ನು ಏಕೆ ತಂಡಕ್ಕೆ ಸೇರಿಸಿಕೊಂಡಿದ್ದಾಗಿಯೂ ಸಹ ತಿಳಿಸಿದ್ದಾರೆ.

ರಿಷಭ್ ಪಂತ್ ಅವರನ್ನು ಏಕೆ ತಂಡಕ್ಕೆ ಸೇರಿಸಿಕೊಂಡಿರಿ?
ಟಿ20 ವಿಶ್ವಕಪ್ ಫೈನಲ್‌ನಲ್ಲಿ ನಾನು (ಸಂಜೀವ್ ಗೋಯೆಂಕಾ) ರಿಷಭ್ ಪಂತ್ ಅವರ ವಿಡಿಯೋ ಒಂದನ್ನು ನೋಡಿದ್ದೇ. ಅದರಲ್ಲಿ ಅವರು ಪಂದ್ಯದ ಗತಿಯನ್ನು ನಿಂಯತ್ರಿಸಲು ಡ್ರಾಮಾ ಮಾಡಿದ್ದರು. ಇದರಿಂದ ಪಂದ್ಯದ ವೇಗಕ್ಕೆ ಕಡಿವಾಣ ಬಿತ್ತು. ರಿಷಭ್ ಅವರ ಈ ನಿರ್ಧಾರ ನಿಜಕ್ಕೂ ನನಗೆ ಇಷ್ಟವಾಯಿತು. ಗಾಯದಿಂದ ಚೇತರಿಸಿಕೊಂಡು ಅವರು ಮೈದನಕ್ಕೆ ಇಳಿದಿರುವುದು ಶ್ಲಾಘನಿಯ. ಇವರ ಮೈದಾನದಲ್ಲಿರುವ ಗುಣಗಳನ್ನು ಕಂಡು ಇವರು ನಮ್ಮ ತಂಡದಲ್ಲಿದ್ದರೆ ಚೆನ್ನಾಗಿತ್ತು ಎಂದು ನಾನು ಲೆಕ್ಕಾಚಾರ ಹಾಕಿದ್ದೇ ಎಂದು ಸಂಜಯ್ ಗೋಯೆಂಕಾ ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಗೋಯೆಂಕಾ ನಮ್ಮ ತಂಡದಲ್ಲಿ ನಾಲ್ಕು ಆಟಗಾರರು ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ನಿಕೋಲಸ್ ಪೂರನ್, ಐಡೇನ್ ಮಾರ್ಕ್ರಮ್, ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಈ ಪಟ್ಟಿಯಲ್ಲಿ ಸೇರಿದ್ದಾರೆ. ನಾಯಕ ಯಾರು ಎಂಬುದು ನಮ್ಮ ತಂಡದ ರಣ ತಂತ್ರದ ಮೇಲೆ ನಿಂತಿದೆ. ಈ ನಾಲ್ವರೂ ಆಟಗಾರರು ಗೆಲುವಿನ ಕನಸಿನೊಂದಿಗೆ ಆಡುತ್ತಾರೆ. ಅಲ್ಲದೆ ರಿಷಭ್ ಪಂತ್ ಸಹ ಒಬ್ಬ ಫೈಟರ್. ಹೀಗಾಗಿಯೇ ನಾವು ಹರಾಜಿನಲ್ಲಿ ಉತ್ತಮ ತಂಡವನ್ನು ಕಟ್ಟಿದ್ದೇವೆ ಎಂದಿದ್ದಾರೆ.

ರಿಷಭ್ ಪಂತ್ ಅವರಿಗೆ ಭಾರೀ ಮೊತ್ತವನ್ನು ನೀಡಿರುವ ಎಲ್‌ಎಸ್‌ಜಿ ಅವರಿಗೆ ಮಧ್ಯಮ ಕ್ರಮಾಂಕ ಹಾಗೂ ಫೀನಿಷರ್ ರೋಲ್ ನೀಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ತಂಡದಲ್ಲಿ ಉಳಿಸಿಕೊಂಡಿರುವ ನಿಕೋಲಸ್ ಪೂರನ್ ಸಹ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎಸ್‌ಎ ಟಿ20 ಚಾಂಪಿಯನ್ ತಂಡವನ್ನು ಮುನ್ನಡೆಸಿದ ಅನುಭವ ಐಡೇನ್ ಮಾರ್ಕ್ರಮ್ ಅವರಿಗಿದೆ. ಹೀಗಾಗಿ ಇವರಲ್ಲಿ ಲಕ್ನೋ ಯಾರಿಗೆ ನಾಯಕತ್ವ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications