ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಎರಡನೇ ಪಂದ್ಯ ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಟೀಮ್ ಇಂಡಿಯಾದ ರಿಷಭ್ ಪಂತ್ ಈ ಸರಣಿಯಿಂದ ಕಣಕ್ಕೆ ಇಳಿಯಬಹುದು ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ಪ್ರವಾಸದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ ಈಗ ಮೈದಾನಕ್ಕೆ ಮರಳುವ ಬಗ್ಗೆ ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಣಜಿ ಟ್ರೋಫಿಯ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಪಂತ್ ಅಂಗಳಕ್ಕೆ ಅಕ್ಟೋಬರ್ 25 ರಿಂದ ಇಳಿಯಹುದು ಎಂದು ತಿಳಿದು ಬಂದಿದೆ. ಈ ಮೂಲಕ ನವೆಂಬರ್ 14 ರಿಂದ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಇವರು ತಂಡಕ್ಕೆ ವಾಪಸ್ ಅಗುವ ಸಾಧ್ಯತೆ ಇದೆ.

ಪಂತ್ ವಾರದ ಕೊನೆಯಲ್ಲಿ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ (COI) ನಲ್ಲಿ ಅವರ ಫಿಟ್ನೆಸ್ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ. ಅವರ ಕಾಲಿಗೆ ಹಾಕಿದದ ಪ್ಲಾಸ್ಟರ್ ಅನ್ನು ಎರಡು ವಾರಗಳ ಹಿಂದೆ ತೆಗೆದು ಹಾಕಲಾಗಿತ್ತು. ಈಗ ಪಂತ್ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದ್ದಾರೆ. ಅವರ ವ್ಯಾಯಮಗಳ ಮೂಲಕ ತಮ್ಮ ಕಾಲಿಗೆ ಬಲ ತುಂಬವ ಕೆಲಸವನ್ನು ಮಾಡುತ್ತಿದ್ದಾರೆ. ಇವರಿಗೆ ಅನುಮತಿ ನೀಡಿದರೆ ಅಕ್ಟೋಬರ್ 15 ರಂದು ಹೈದರಾಬಾದ್ ವಿರುದ್ಧ ನಡೆಯುವ ರಣಜಿ ಟ್ರೋಫಿ ಆರಂಭಿಕ ಸುತ್ತಿನ ಪಂದ್ಯದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಭಾರತ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದ್ದಾಗ ರಿಷಬ್ ಪಂತ್ ಈ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡಿದ್ದರು. ಅಲ್ಲದೆ ಈ ಸರಣಿಯಲ್ಲಿ ಇವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಆದರೆ ಈ ಸರಣಿಯ ನಾಲ್ಕನೇ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಎಸೆದ ಎಸೆತವನ್ನು ತಪ್ಪಾಗಿ ಅರ್ಥಹಿಸಿಕೊಂಡು ಪ್ಲೇಡ್ ಮಾಡಲು ಹೋದರು. ಚೆಂಡು ಇವರ ಶೂಗೆ ಬಡೆದಿದ್ದರಿಂದ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಕೊನೆಯ ಹಾಗೂ ನಿರ್ಣಾಯಕ ಐದನೇ ಟೆಸ್ಟ್ ಪಂದ್ಯದಲ್ಲಿ ಆಡಲು ಆಗಿರಲಿಲ್ಲ. ಅಲ್ಲದೆ ಏಷ್ಯಾ ಕಪ್ ಟಿ20 ಟೂರ್ನಿಯಲ್ಲೂ ಇವರು ತಂಡದ ಭಾಗವಾಗಿರಲಿಲ್ಲ. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದಲೂ ಹೊರ ನಡೆದಿದ್ದರು. ಈಗ ಮತ್ತೆ ಟೆಸ್ಟ್ ಸರಣಿಗೆ ಸಿದ್ಧರಾಗಲು ಮೈದಾನದಲ್ಲಿ ರಿಷಭ್ ಪಂತ್ ಬೆವರು ಹರಿಸುತ್ತಿದ್ದಾರೆ. ಯಾವ ಸರಣಿಯಲ್ಲಿ ಇವರು ಕಣಕ್ಕೆ ಇಳಿಯುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.