For Quick Alerts
ALLOW NOTIFICATIONS  
For Daily Alerts
 

Rishabh Pant: ಗಾಯದ ನೋವನ್ನು ಮರೆತು ತಂಡಕ್ಕೆ ಆಧಾರವಾದ ರಿಷಭ್‌: ದಾಖಲೆ ಬರೆದ ಪಂತ್

ಮೊದಲ ಇನಿಂಗ್ಸ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರಾ ಎಂಬ ಪ್ರಶ್ನೆಗಳು ಇದ್ದವು. ಆದರೆ ಶನಿವಾರ ಸರ್ಫರಾಜ್‌ ಖಾನ್‌ ಅಂಗಳಕ್ಕೆ ಇಳಿಯುವಾಗ ಇವರೊಂದಿಗೆ ರಿಷಭ್‌ ಪಂತ್‌ ಕೂಡ ಅಂಗಳಕ್ಕೆ ಇಳಿದರು. ಇವರು ಅಂಗಳಕ್ಕೆ ಇಳಿದಾಗ ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.

ಸರ್ಫರಾಜ್‌ ಹಾಗೂ ರಿಷಭ್‌ ಪಂತ್‌ ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವನ್ನು ಆಡಿದರು. ಈ ಜೋಡಿ ನ್ಯೂಜಿಲೆಂಡ್‌ ತಂಡದ ಬೌಲರ್‌ಗಳಿಗೆ ಕಾಟ ನೀಡಿದರು. ರಿಷಭ್‌ ಪಂತ್‌ ಕಾರು ಅಪಘಾತಕ್ಕೆ ಇಡಾದಾಗ ಯಾವ ಕಾಲಿಗೆ ಪೆಟ್ಟು ಆಗಿತ್ತೋ, ಅದೆ ಕಾಲಿಗೆ ಮೊದಲ ಇನಿಂಗ್ಸ್‌ನಲ್ಲಿ ಕಿಪೀಂಗ್ ಮಾಡುವಾಗ ಪೆಟ್ಟು ಮಾಡಿಕೊಂಡರು. ಹೀಗಾಗಿ ಅವರು ಅಂಗಳಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆಗಳು ಇದ್ದವು. ಆದರೆ ಆ ಗಾಯದ ನೋವನ್ನು ಮರೆತು ತಂಡಕ್ಕಾಗಿ ಆಡಲು ಮೈದಾನಕ್ಕೆ ರಿಷಭ್‌ ಇಳಿದರು.

Rishabh Pant s Gutsy 99 Propels Him Past Kapil Dev Equals AB de Villiers Sixes Record

ನಾಲ್ಕನೇ ವಿಕೆಟ್‌ಗೆ ರಿಷಭ್‌ ಪಂತ್ ಹಾಗೂ ಸರ್ಫರಾಜ್ ಖಾನ್‌ ಜೊತೆಗೂಡಿ ಶತಕದ ಜೊತೆಯಾಟವನ್ನು ನೀಡಿದರು. ಈ ಜೋಡಿ 221 ಎಸೆತಗಳಲ್ಲಿ 177 ರನ್‌ ಗಳ ಜೊತೆಯಾಟದ ಕಾಣಿಕೆ ನೀಡಿದರು. ಸರ್ಫರಾಜ್‌ 18 ಬೌಂಡರಿ, 3 ಸಿಕ್ಸರ್ ಸಹಾಯದಿಂದ 150 ರನ್‌ ಬಾರಿಸಿ ಔಟ್ ಆದರು.

ಸರ್ಫರಾಜ್‌ ಔಟ್ ಆದರೂ ದೃತಿ ಗೆಡದ ರಿಷಭ್‌ ಪಂತ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 9 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ 99 ರನ್‌ ಬಾರಿಸಿ ಔಟ್‌ ಆದರು. ಆದರೂ ರಿಯಲ್‌ ಫೈಟರ್‌ ರೀತಿ ಬ್ಯಾಟ್ ಮಾಡಿ ತಂಡದ ಮೊತ್ತವನ್ನು ಹಿಗ್ಗಿಸಿದರು.

Rishabh Pant s Gutsy 99 Propels Him Past Kapil Dev Equals AB de Villiers Sixes Record

ದಾಖಲೆ ಬರೆದ ಪಂತ್

ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ, ರಿಷಬ್ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ. 131 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 61 ಸಿಕ್ಸರ್‌ಗಳನ್ನು ಬಾರಿಸಿದ್ದ ಕಪಿಲ್ ದೇವ್ ಅವರನ್ನು ಪಂತ್ ಹಿಂದಿಕ್ಕಿದ್ದಾರೆ.

ಪಂತ್‌ ಅವರ ಹೆಸರಿನಲ್ಲಿ ಸದ್ಯ 64 ಸಿಕ್ಸರ್‌ಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 103 ಪಂದ್ಯಗಳಲ್ಲಿ 90 ಸಿಕ್ಸರ್‌ಗಳನ್ನು ಬಾರಿಸಿರುವ ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರ ಹಿಂದೆ ರೋಹಿತ್‌ ಶರ್ಮಾ ನಿಂತಿದ್ದು, ಇವರು 88 ಸಿಕ್ಸರ್ ಸಿಡಿಸಿದ್ದಾರೆ.

ಎಬಿಡಿ ದಾಖಲೆಯ ಸಮಕ್ಕೆ ನಿಂತ ಪಂತ್

ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಂತ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್‌ ಬಾರಿಸಿರುವ ಪಂತ್‌, ದಕ್ಷಿಣ ಆಫ್ರಿಕಾದ ಸ್ಟಾರ್‌ ಆಟಗಾರ ಎಬಿಡಿ ವಿಲಿಯರ್ಸ್‌ ದಾಖಲೆಯ ಸಮಕ್ಕೆ ನಿಂತಿದ್ದಾರೆ.

ಎಬಿಡಿ 114 ಟೆಸ್ಟ್‌ ಪಂದ್ಯಗಳಲ್ಲಿ 64 ಸಿಕ್ಸರ್‌ ಬಾರಿಸಿದ್ದಾರೆ. ಪಂತ್‌ ಸಹ ಇಷ್ಟೇ ಸಿಕ್ಸರ್ ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ಇಂಗ್ಲೆಂಡ್ ತಂಡದ ಬೆನ್‌ ಸ್ಟೋಕ್ಸ್‌ಗೆ ಸಲ್ಲುತ್ತದೆ. ಇವರು 131 ಸಿಕ್ಸರ್‌ ಸಿಡಿಸಿದ್ದಾರೆ.

Story first published: Saturday, October 19, 2024, 16:04 [IST]
Other articles published on Oct 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+