For Quick Alerts
ALLOW NOTIFICATIONS  
For Daily Alerts
 

ರಿಷಭ್‌ ಪಂತ್‌, ಕೆಎಲ್ ರಾಹುಲ್‌ ಇಬ್ಬರಲ್ಲಿ ಯಾರು ಬೆಸ್ಟ್‌ ಕ್ಯಾಪ್ಟನ್‌? ಇಲ್ಲಿದೆ ಅಂಕಿ ಅಂಶ

ಲಕ್ನೋ ಸೂಪರ್ ಜೈಂಟ್ಸ್ ಸೋಮವಾರ ತನ್ನ ಹೊಸ ನಾಯಕನನ್ನು ಘೋಷಣೆ ಮಾಡಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‍‌ ರಿಷಭ್ ಪಂತ್‌ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್‌ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತ ನೀಡಿ ಎಲ್‌ಎಸ್‌ಜಿ ಪಂತ್‌ಗೆ ಮಣೆ ಹಾಕಿತ್ತು. ಆದರೆ ಇವರಿಗೆ ನಾಯಕತ್ವ ನೀಡುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನ ಇತ್ತು. ಆದರೆ ಈ ಎಲ್ಲ ಅನುಮಾನಕ್ಕೂ ತೆರೆ ಬಿದ್ದಿದ್ದು, 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್‍‌ ಜೈಂಟ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ.

ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್‌ ಅವರಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಭಾರೀ ಮೊತ್ತವನ್ನು ನೀಡಿ ಖರೀದಿ ಮಾಡಿತ್ತು. ಎಲ್‌ಎಸ್‌ಜಿ ತಂಡದ ನಾಯಕ ಕೆಎಲ್ ರಾಹುಲ್ ಅವರನ್ನು ಕೈ ಬಿಟ್ಟಿದ್ದ ಲಕ್ನೋ, ಅವರ ಬದಲಿಗೆ ರಿಷಭ್‌ಗೆ ಮಣೆ ಹಾಕಿದೆ. ಹಾಗಿದ್ದರೆ ಇವರಿಬ್ಬರ ನಾಯಕತ್ವದ ದಾಖಲೆಗಳು ಹೇಗಿವೆ ಎಂಬ ಬಗ್ಗೆ ವರದಿ ಇಲ್ಲಿದೆ.

Rishabh Pant s IPL Captaincy Record A New Era for Lucknow Super Giants in 2025

ಪಂತ್‌ ಅವರಿಗೆ ಹೋಲಿಸಿದರೆ ಕೆಎಲ್ ರಾಹುಲ್ ಅನುಭವಿ ಆಟಗಾರ ಎಂದು ಹೇಳಬಹುದು. ರಿಷಭ್‌ ಪಂತ್ ಈಗಾಗಲೇ 3 ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇದಕ್ಕೂ ಹೆಚ್ಚಿನ ಅನುಭವ ರಾಹುಲ್‌ ಅವರಿಗೆ ಇದೆ. ಆದರೆ ಕಳೆದ ಬಾರಿ ಮಾಲೀಕರೊಂದಿಗೆ ನಾಯಕ ರಾಹುಲ್ ಮಾಡಿಕೊಂಡಿದ್ದ ಜಟಾಪಟಿಯಿಂದ ಅವರನ್ನು ಕೆಳಗಿಳಿಸುವುದು ಗ್ಯಾರಂಟಿ ಎಂಬುದಾಗಿತ್ತು. ಆದರೆ ಹರಾಜಿಗೂ ಮುನ್ನವೇ ಅವರನ್ನು ಕೈ ಬಿಟ್ಟು, ಹರಾಜಿನಲ್ಲಿ ಎಲ್‌ಎಸ್‌ಜಿ ಬೇರೆ ನಾಯಕನಿಗೆ ಮಣೆ ಹಾಕಿತ್ತು.

ನಾಯಕನಾಗಿ ಕೆಎಲ್‌ ಅಂಕಿ ಅಂಶ

ಟೀಮ್ ಇಂಡಿಯಾದ ಭವಿಷ್ಯದ ನಾಯಕರ ಸಾಲಿನಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರು ನಿಂತು ಕೊಳ್ಳುತ್ತಾರೆ. ಕೆಎಲ್ ರಾಹುಲ್‌ ಎಲ್‌ಎಸ್‌ಜಿ ಪರ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಇವರ ಮುಂದಾಳತ್ವದಲ್ಲಿ ಲಕ್ನೋ ಎರಡು ಬಾರಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಆದರೆ ಕಳೆದ ಋತುವಿನಲ್ಲಿ ತಂಡ ಲೀಗ್‌ ಹಂತದಿಂದಲೇ ಟೂರ್ನಿಗೆ ಗುಡ್ ಬಾಯ್ ಹೇಳಿತ್ತು.

2022ಕ್ಕೂ ಮುನ್ನ ರಾಹುಲ್ ಪಂಜಾಬ್‌ ಕಿಂಗ್ಸ್ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ 2023 ರಲ್ಲಿ 9 ಪಂದ್ಯಗಳಲ್ಲಿ ಲಕ್ನೋ ತಂಡವನ್ನು ಮುನ್ನಡೆಸಿದ್ದು, 5 ಪಂದ್ಯಗಳಲ್ಲಿ ತಂಡ ಜಯ ಸಾಧಿಸಿತು. 2024 ರಾಹುಲ್‌ಗೆ ನಾಯಕನಾಗಿ ಅಷ್ಟೇನೂ ವಿಶೇಷವಾಗಿರಲಿಲ್ಲ. ಐಪಿಎಲ್‌ನಲ್ಲಿ ರಾಹುಲ್ ಒಟ್ಟು 64 ಪಂದ್ಯಗಳ ನಾಯಕತ್ವ ವಹಿಸಿದ್ದು, ಆ ಪೈಕಿ ತಂಡ 31 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ.

Rishabh Pant s IPL Captaincy Record A New Era for Lucknow Super Giants in 2025

ಪಂತ್ ಸಾಧನೆ ಹೇಗಿದೆ?

ರಿಷಭ್ ಪಂತ್ 43 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಿದ 43 ಪಂದ್ಯಗಳಲ್ಲಿ ತಂಡವು 24 ಪಂದ್ಯಗಳಲ್ಲಿ ಗೆದ್ದಿದ್ದರೆ, 19 ಪಂದ್ಯಗಳಲ್ಲಿ ಸೋತಿದೆ. ಪಂತ್ ಮೂರು ಋತುಗಳಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದು, ತಂಡ ಒಮ್ಮೆ ಮಾತ್ರ ಪ್ಲೇ ಆಫ್ ಪ್ರವೇಶಿಸಿದೆ. ಇವರ ನಾಯಕತ್ವದಲ್ಲಿ ಲಕ್ನೋ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುತ್ತದಾ ಕಾದು ನೋಡಬೇಕಿದೆ.

Story first published: Monday, January 20, 2025, 20:30 [IST]
Other articles published on Jan 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+