Rishabh Pant: ಎಲ್‌ಎಸ್‌ಜಿ ಚಿಂತೆ ಹೆಚ್ಚಿಸಿದ ದುಬಾರಿ ಆಟಗಾರನ ಫಾರ್ಮ್: ಪಂತ್ ರನ್ ಬರ
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖದಲ್ಲಿ ಚಿಂತೆಯ ಆ ಒಂದು ಗೆರೆ ನಾಲ್ಕನೇ ಪಂದ್ಯದಲ್ಲೂ ಮುಂದುವರೆದಿದೆ. ದುಬಾರಿ ಆಟಗಾರ ಇಂದು ಬಿಗ್ ಇನಿಂಗ್ಸ್ ಬರಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದ ಮ್ಯಾನೇಜ್ಮೆಂಟ್‌ಗೆ ಮತ್ತೊಮ್ಮೆ ಶಾಕ್ ಕಾದಿದೆ. ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿರುವ ರಿಷಭ್ ಪಂತ್ ಆಡಿದ ನಾಲ್ಕು ಪಂದ್ಯಗಳಲ್ಲಿ ನೀರಸ ಪ್ರದರ್ಶನ ಮುಂದುವರೆಸಿದ್ದಾರೆ.
ಮುಂಬೈ ವಿರುದ್ಧ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ಭರ್ಜರಿ ಆರಂಭವನ್ನು ಪಡೆಯಿತು. ಮಿಚೆಲ್ ಮಾರ್ಷ್ 60 ಹಾಗೂ ಭರವಸೆಯ ಆಟಗಾರ ನಿಕೋಲಸ್ ಪೂರನ್ 12 ರನ್‌ಗಳಿಗೆ ಆಟ ಮುಗಿಸಿದರು. ಇವರು ಔಟ್ ಆಗ್ತಾ ಇದ್ದಂತೆ ಕ್ರೀಸ್‌ಗೆ ಬಂದವರೇ ಎಲ್‌ಎಸ್‌ಜಿ ತಂಡದ ನಾಯಕ ರಿಷಭ್ ಪಂತ್. ಕಳೆದ ಮೂರು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ರಿಷಭ್ ಪಂತ್, ಮುಂಬೈ ಇಂಡಿಯನ್ಸ್ ವಿರುದ್ಧವೂ ತಮ್ಮ ಫ್ಲಾಪ್ ಶೋ ಮುಂದುವರೆಸಿದರು.

11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರಿಷಭ್ ಪಂತ್ ಔಟಾದರು. ಅವರು ಕೇವಲ 2 ರನ್ ಗಳಿಗೆ ಸುಸ್ತಾದ್ರು. ಅವರು ಔಟ್ ಆದ ನಂತರ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಾಗ, ಕ್ಯಾಮೆರಾ LSG ಮಾಲೀಕ ಸಂಜೀವ್ ಗೋಯೆಂಕಾ ಮೇಲೆ ನೆಟ್ಟಿತ್ತು. ಸಂಜೀವ್ ಕೋಪಗೊಂಡಂತೆ ಕಾಣುತ್ತಿದ್ದರು. ಆದರೆ ಶಾಂತ ಚಿತ್ತರಾಗಿ ಇದ್ದಂತೆ ಕಂಡು ಬಂದಿತು. ಪಂತ್ ಪ್ರಸಕ್ತ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 19 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಪಂತ್ ವಿಫಲರಾಗಿದ್ದಾರೆ.
ದುಬಾರಿ ಆಟಗಾರನ ರನ್ ಬರ
ಈ ಋತುವಿನಲ್ಲಿ, ಪಂತ್ ಮಾತ್ರವಲ್ಲ, ಎಲ್‌ಎಸ್‌ಜಿ ಫಾರ್ಮ್ ಸಹ ಚೆನ್ನಾಗಿಲ್ಲ. ಈ ಪಂದ್ಯಕ್ಕೂ ಮುನ್ನ ಪಂತ್ ಪಡೆ ಆಡಿದ 3 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಜಯ ಸಾಧಿಸಿದೆ. ಈ ಲೀಗ್‌ನಲ್ಲಿಏಳನೇ ಸ್ಥಾನದಲ್ಲಿದೆ. ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ರಿಷಭ್ ಪಂತ್ ಅವರನ್ನು ಎಲ್‌ಎಸ್‌ಜಿ 27 ಕೋಟಿ ರೂಪಾಯಿಯ ಭಾರೀ ಮೊತ್ತವನ್ನು ನೀಡಿ ಇವರಿಗೆ ತಂಡಕ್ಕೆ ಬರಮಾಡಿಕೊಂಡಿತ್ತು. ಅಲ್ಲದೆ ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್ ಅವರನ್ನು ಹರಾಜಿನ ಅಂಗಳಕ್ಕೆ ಕೈ ಬಿಟ್ಟಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಕೈ ಬಿಟ್ಟ ಪಂತ್‌ಗೆ ಎಲ್‌ಎಸ್‌ಜಿ ಭಾರೀ ಮೊತ್ತ ನೀಡಿ ಮಣೆ ಹಾಕಿದೆ. ಅಲ್ಲದೆ ಪಂತ್ ಅವರಿಗೆ ನಾಯಕತ್ವ ಪಟ್ಟವನ್ನು ಸಹ ನೀಡಿದೆ. ಎಲ್‌ಎಸ್‌ಜಿ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಲಕ್ನೋ ತಂಡ ಕಣಕ್ಕೆ ಇಳಿದಿದೆ. ಈ ವೇಳೆ ಆರಂಭದಲ್ಲಿ ತಂಡಕ್ಕೆ ನಿರಾಸೆ ಕಾದಿದೆ.

ರಿಷಭ್ ಪಂತ್ ಅವರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ನಿಶ್ಚಿತವಾಗಿ ಎಲ್‌ಎಸ್‌ಜಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಮುಂದಿನ ಪಂದ್ಯಗಳಲ್ಲಿ ಇವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಕಾಣಬಹುದಾ ಎಂಬ ಪ್ರಶ್ನೆಗಳು ಎದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications