Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant: ಐಪಿಎಲ್ ಹರಾಜಿನ "ಕಿಂಗ್‌" ಆಗ್ತಾರಾ ಪಂತ್?

ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ನ್ನು ಮಾಲೀಕರು ಬಿಸಿಸಿಐಗೆ ನೀಡುವ ಮೊದಲು ಯಾರನ್ನು ಉಳಿಸಿಕೊಳ್ಳುತ್ತಾರೆ ಅನುಮಾನ ಇತ್ತು. ಆದರೆ ಹಲವು ಆಟಗಾರರ ಮೇಲೆ ಅಭಿಮಾನಿಗಳು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಭ್ ಪಂತ್‌ ಅವರನ್ನು ಹರಾಜಿಗೆ ಬಿಟ್ಟಿದೆ. ಈಗ ಅಭಿಮಾನಿಗಳ ಮುಂದಿರುವ ಪ್ರಶ್ನೆ ರಿಷಭ್ ಪಂತ್ ಯಾವ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಹಲವು ಐಪಿಎಲ್‌ ಮಾಲೀಕರು ರಿಷಭ್ ಪಂತ್‌ ಅವರನ್ನು ಕೊಂಡು ಕೊಳ್ಳಲು ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಕೆಲವು ತಂಡಗಳು ವಿಕೆಟ್‌ ಕೀಪರ್‌ ಬ್ಯಾಟರ್‌, ಕ್ಯಾಪ್ಟನ್ ಮೇಲೆ ಬಾಜಿ ಕಟ್ಟಲು ಸಿದ್ಧವಾಗಿವೆ. ಆದರೆ ಈ ಎಲ್ಲ ತಂಡಗಳಿಗಿಂತಿಲೂ ಈ ತಂಡದ ಪರ ರಿಷಭ್‌ ಪಂತ್ ಆಡುವುದು ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ.

Rishabh Pant s Release Shocks IPL Fans Punjab Kings Likely to Target Him as New Captain

ರಿಷಭ್‌ ಮೇಲೆ ಕಣ್ಣು?

ಐಪಿಎಲ್‌ ಹರಾಜು ಅಂಗಳಕ್ಕೆ ಅಂತಾರಾಷ್ಟ್ರೀಯ ವಿಕೆಟ್‌ ಕೀಪರ್‌ ಬ್ಯಾಟರ್‌ ಸೆಗ್ಮೆಂಟ್‌ ಬರುತ್ತಿದ್ದಂತೆ, ಎಲ್ಲರ ಕಿವಿ ಚುರುಕಾಗುತ್ತವೆ. ರಿಷಭ್‌ ಪಂಥ್‌ ಹೆಸರು ಕಿವಿಯ ಪಟಲದ ಮೇಲೆ ಬೀಳುತ್ತಿದ್ದಂತೆ ಕಾರ್ಯ ಪ್ರವೃತ್ತರಾಗಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪ್ಲೇಯರ್‌ ಬಿಡ್‌ ಅಖಾಡಕ್ಕೆ ಬರುತ್ತಿದ್ದಂತೆ ಹಣದ ಹೊಳೆಯನ್ನೇ ಹರಿಸಲು ಮಾಲೀಕರು ಸಿದ್ಧತೆ ನಡೆಸಿದ್ದಾರೆ. ಇದು ಸಂಭವಿಸಿದಲ್ಲಿ, ಹೆಚ್ಚಿನ ಪರ್ಸ್ ಹೊಂದಿರುವ ತಂಡವು ಗೆಲ್ಲುತ್ತದೆ.

ರಿಷಭ್‌ ಪಂತ್‌, ಕೆಎಲ್‌ ರಾಹುಲ್‌ ಅವರಂತಹ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದರೆ ತಂಡದ ಪರ್ಸ್‌ ಸೈಜ್ ಸಹ ನಿಶ್ಚಿತವಾಗಿಯೂ ದೊಡ್ಡದಾಗಿರಬೇಕು. ಎಲ್ಲಾ ಹತ್ತು ತಂಡಗಳು ಐಪಿಎಲ್ ಹರಾಜಿಗೆ ಹೋದಾಗ, ಪ್ರತಿ ತಂಡವು ಎಷ್ಟು ಹಣವನ್ನು ಹೊಂದಿದೆ, ಎಂಬುದನ್ನು ಗಮನಿಸಿ ಬಾಜಿ ಕಟ್ಟುತ್ತವೆ. ಸದ್ಯ ಪಂಜಾಬ್‌ ಕಿಂಗ್ಸ್‌ ಪರ್ಸ್‌ನಲ್ಲಿ ಭಾರೀ ಮೊತ್ತದ ಹಣವಿದೆ. ಪಂಜಾಬ್‌ ರಿಟೇನ್‌ನಲ್ಲಿ ಕೇವಲ ಇಬ್ಬರು ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಂಡಿದೆ. ಹೀಗಾಗಿ ಪಂಜಾಬ್‌ ಬಳಿ ಅತಿ ಹೆಚ್ಚು ಹಣವನ್ನು ಹೊಂದಿದೆ. ಪಂಜಾಬ್‌ ಬಳಿ 100 ಕೋಟಿಗೂ ಹೆಚ್ಚು ಹಣ ಉಳಿದಿದೆ.

Rishabh Pant s Release Shocks IPL Fans Punjab Kings Likely to Target Him as New Captain

ಒಂದು ವೇಳೆ ರಿಷಭ್‌ ಪಂತ್‌ ಅವರನ್ನು ಕೊಂಡೆ ತೀರುತ್ತೇನೆ ಎಂದು ಪಂಜಾಬ್ ಟೊಂಕ್ ಕಟ್ಟಿ ನಿಂತರೆ ಯಾವ ಫ್ರಾಂಚೈಸಿ ಸಹ ಪಂಜಾಬ್‌ ಸವಾಲು ಮೀರಿ ನಿಲ್ಲಲು ಸಾಧ್ಯವೇ ಇಲ್ಲ. ಏಕೆಂದರೆ ಪಂಜಾಬ್‌ ಪರ್ಸ್‌ನಲ್ಲಿ 110.5 ಕೋಟಿ ರೂಪಾಯಿ ಹಣವಿದೆ. ಇನ್ನು ವಿಶೇಷ ಎಂದರೆ ಪಂಜಾಬ್‌ ಶಿಖರ್‌ ಧವನ್‌ ಅವರಿಂದ ತೆರವಾದ ನಾಯಕನ ಸ್ಥಾನಕ್ಕೆ ಒಬ್ಬ ಪ್ಲೇಯರ್ ಹುಡುಕಾಟ ನಡೆಸಿದೆ. ಈ ನಿಟ್ಟಿನಲ್ಲಿ ರಿಷಭ್ ಪಂತ್ ಬೆಸ್ಟ್‌ ಆಯ್ಕೆ ಆಗಲಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಕೋಚ್‌ ರಿಕಿ ಪಾಂಟಿಂಗ್‌, ಕಳೆದ ಕೆಲವು ಆವೃತ್ತಿಗಳಲ್ಲಿ ಡಿಸಿ ನೀಡಿದ ಪ್ರದರ್ಶನ ಬೇಸತ್ತು ತಂಡವನ್ನು ತೊರೆದು, ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿದ್ದರು. ರಿಕಿ ಹಾಗೂ ಪಂತ್ ಇಬ್ಬರ ನಡುವಿನ ಸಂಬಂಧವೂ ಚೆನ್ನಾಗಿ ಇರುವುದರಿಂದ ಈ ತಂಡದ ಪರವೇ ಪಂತ್‌ ಆಡಬಹುದು ಎಂದು ಹೇಳಲಾಗುತ್ತಿದೆ.

Story first published: Tuesday, November 5, 2024, 15:50 [IST]
Other articles published on Nov 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+