ಟೀಮ್ ಇಂಡಿಯಾಕ್ಕೆ ಮರಳುವ ಕನಸು ಕಾಣುತ್ತಿರುವ ರಿಷಭ್ ಪಂತ್: ಕ್ಯಾಚ್ ಸಖತ್ ವೈರಲ್
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್, ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಟಿ20 ಕ್ರಿಕೆಟ್ ಆಡಿ ರಿಷಭ್ ಸೈ ಎನಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಭಾರತದ ಪರ ಅಮೋಘ ಆಟವನ್ನು ಆಡಿ ಅಭಿಮಾನಿಗಳ ಚಿತ್ತ ಕದ್ದಿದ್ದರು. ಈಗ ಟೆಸ್ಟ್ ತಂಡವನ್ನು ಸೇರಲು ಕಾತುರರಾಗಿದ್ದಾರೆ.
ದೇಶೀಯ ಟೂರ್ನಿಯ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಅಮೋಘ ಪ್ರದರ್ಶನ ನೀಡಿದ್ದಾರೆ. ದುಲೀಪ್ ಟ್ರೋಫಿ ವೇಳೆ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗಾಗಲೇ ರಿಷಭ್ ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದಾರೆ. ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅವರು ಒಂದು ಅಮೋಘ ಕ್ಯಾಚ್ ಹಿಡಿಸಿದಿದ್ದಾರೆ. ಈ ಕ್ಯಾಚ್ ಈಗ ಸಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅವರು ಭಾರತ ಎ ತಂಡದ ವಿರುದ್ಧ ಅದ್ಭುತ ಕ್ಯಾಚ್ ಪಡೆದರು.

ವೈರಲ್ ವಿಡಿಯೋ
ದೇಶೀಯ ಟೂರ್ನಿ ದುಲೀಪ್ ಟ್ರೋಫಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಟೂರ್ನಿಯ ಮೊದಲ ದಿನ ರೋಚಕತೆಯನ್ನು ಹುಟ್ಟಿಸಿತ್ತು. ಎರಡನೇ ದಿನವೂ ಈ ಪಂದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದ್ಭುತ ಕ್ಯಾಚ್
ನವದೀಪ್ ಸೈನಿ ಬೌಲಿಂಗ್ ಮಾಡುವ ವೇಳೆ ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ ಮಾಡುತ್ತಿದ್ದರು. ನವದೀಪ್ ಎಸೆದ ಚೆಂಡು ಲೆಗ್ ಸ್ಟಂಪ್ ಮೆಲೆ ಬಿದ್ದಿತು. ಮಯಾಂಕ್ ಅಗರ್ವಾಲ್ ಅವರು ನವದೀಪ್ ಸೈನಿ ಅವರ ಚೆಂಡನ್ನು ಥರ್ಡ್ ಮ್ಯಾನ್ ಸೈಡ್‌ನಲ್ಲಿ ಆಡಲು ಮುಂದಾದರು. ಈ ವೇಳೆ ಬ್ಯಾಟ್‌ಗೆ ಬಡೆದ ಚೆಂಡು ಗಾಳಿಯಲ್ಲಿ ಸಾಗಿತು. ಇದನ್ನು ನೋಡಿದ ರಿಷಭ್ ಪಂಥ್ ತಮ್ಮ ಎಡಕೈ ನೆಗೆದು ಗಾಳಿಯಲ್ಲಿ ಅದ್ಭುತ್ ಕ್ಯಾಚ್ ಪಡೆದರು. ರಿಷಭ್ ಪಂತ್ ಅವರ ಕ್ಯಾಚ್ ಸಖತ್ ವೈರಲ್ ಆಗುತ್ತಿದೆ.
ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಕನಸು
ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಈಗ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕೆಲವು ಆಟಗಾರರು ದೇಶೀಯ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದಾರೆ. ಭಾರತದಲ್ಲಿ ಸೆಪ್ಟಂಬರ್ 19 ರಿಂದ ಬಾಂಗ್ಲಾದೇಶದ ವಿರುದ್ಧ ಎರಡು ಪಂದ್ಯ ಟೆಸ್ಟ್ ಆಡಲು ಬರಲಿದೆ. ಈ ಟೆಸ್ಟ್‌ಗೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಹುಡುಕಾಟದಲ್ಲಿದ್ದಾರೆ. ಈ ರೇಸ್‌ನಲ್ಲಿ ಸದ್ಯ ಕೆಎಲ್ ರಾಹುಲ್, ಧ್ರುವ್ ಜುರೇಲ್ ಹಾಗೂ ರಿಷಭ್ ಪಂಥ್ ಪೈಪೋಟಿ ನಡೆಸಿದ್ದಾರೆ.

ದುಲಿಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಬಳಿಕ ರಿಷಭ್ ಪಂತ್ ಟೀಮ್ ಇಂಡಿಯಾಕ್ಕೆ ಮರಳುವ ಕನಸು ಕಾಣುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications