Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishi Dhawan: ಟೀಮ್ ಇಂಡಿಯಾದ ಆಲ್‌ರೌಂಡರ್‌ ನಿವೃತ್ತಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ತನ್ನ ಪಾರಮ್ಯ ಅಂತ್ಯಗೊಳಿಸಿದೆ. ಸ್ಟಾರ್‌ ಆಟಗಾರರು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಟ್ರೋಫಿ ಆಸ್ಟ್ರೇಲಿಯಾ ತೆಕ್ಕೆಗೆ ಪಡೆದಿದೆ. ಈ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ ಆರ್‌ ಅಶ್ವಿನ್‌ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಇವರಾದ ಬಳಿಕ ಹಲವು ಸ್ಟಾರ್ ಆಟಗಾರರು ಈಗಾಗಲೇ ಮೈದಾನದಿಂದ ಹಿಂದೆ ಸರಿಯುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈಗ ಈ ಸರದಿಗೆ ಮತ್ತೊಬ್ಬ ಕ್ರಿಕೆಟ್‌ ಆಟಗಾರರ ಎಂಟ್ರಿ ನೀಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ಪಡದಿದ್ದ ಸ್ಟಾರ್ ವೇಗದ ಬೌಲರ್‌ ರಿಷಿ ಧವನ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು, 2016 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇವರು ಇಂಡಿಯನ್ ಪ್ರೀಮಿಯಂನಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದರು. ರಿಷಿ ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

Rishi Dhawan Announces Retirement from Limited Overs Cricket

ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು. ಕಳೆದ 20 ವರ್ಷಗಳಿಂದ ಕ್ರಿಕೆಟ್‌ ಆಡಿದ್ದೇನೆ. ಕ್ರಿಕೆಟ್‌ ನನಗೆ ಹಲವು ರೀತಿಯ ಸಂತೋಷ ನೀಡಿದೆ. ಈ ಆಟವು ನನ್ನ ಹೃದಯಕ್ಕೆ ತುಂಬ ಹತ್ತಿರವಾಗಿದೆ. ನನ್ನ ಆಟವನ್ನು ಕಂಡು ಆಡಲು ಅವಕಾಶ ನೀಡಿದ ಬಿಸಿಸಿಐ, ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ, ಪಂಜಾಬ್‌ ಕಿಂಗ್ಸ್, ಮುಂಬೈ ಇಂಡಿಯನ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್ ಧನ್ಯವಾದಗಳು. ದೊಡ್ಡ ವೇದಿಕೆಯಲ್ಲಿ ನನ್ನ ಆಟವನ್ನು ಪ್ರದರ್ಶಿಸುವ ಅವಕಾಶವನ್ನು ನೀಡಿದಕ್ಕಾಗಿ ಧನ್ಯವಾದಗಳನ್ನು ರಿಷಿ ಧವನ್ ತಿಳಿಸಿದ್ದಾರೆ.

ರಿಷಿ ಧವನ್ ಸಾಧನೆ

ರಿಷಿ ಧವನ್‌ ಭಾರತದ ಪರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದೇ ಒಂದು ಸರಣಿ ಆಡಿದ್ದಾರೆ. ಈ ವೇಳೆ ಇವರು 2016ರಲ್ಲಿ ಮೆಲ್ಬೋರ್ನ್‌ನಲ್ಲಿ ಪದಾರ್ಪಣೆ ಮಾಡಿದರು. ತಮ್ಮ ಕೊನೆಯ ಪಂದ್ಯವನ್ನು ಇದೇ ಸರಣಿಯಲ್ಲಿ ಜನವರಿ 23 ರಂದು ಆಡಿದ್ದರು. ಇವರು ಭಾರತದ ಪರ 3 ಏಕದಿನ ಹಾಗೂ 1 ಟಿ20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದು, ಒಟ್ಟು 2 ವಿಕೆಟ್‌ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ 13 ರನ್‌ ಸಿಡಿಸಿದ್ದಾರೆ.

Rishi Dhawan Announces Retirement from Limited Overs Cricket

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇವರ ದಾಖಲೆ ಅಮೋಘ. ಇವರು 98 ಪಂದ್ಯಗಳಲ್ಲಿ 4824 ರನ್‌ ಸಿಡಿಸಿದ್ದಾರೆ. ಇಷ್ಟೇ ಅಲ್ಲದೆ 353 ವಿಕೆಟ್‌ ಕಬಳಿಸಿದ್ದಾರೆ. ಲೀಸ್ಟ್ ಎ ಕ್ರಿಕೆಟ್‌ನಲ್ಲಿ 2906 ರನ್‌ ಬಾರಿಸಿದ್ದು, 186 ವಿಕೆಟ್ ಕಿತ್ತಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಇವರಿಗೆ 39 ಪಂದ್ಯಗಳನ್ನು ಆಡುವ ಅವಕಾಶ ನೀಡಲಾಯಿತು. ಈ ವೇಳೆ ಇವರು 25 ವಿಕೆಟ್‌ ಕಬಳಿಸಿದ್ದಾರೆ.

Story first published: Monday, January 6, 2025, 8:08 [IST]
Other articles published on Jan 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+