BCCI ಆ ಒಂದು ನಿರ್ಧಾರವನ್ನು ಮಾಡಿದ್ದೇ ಆದ್ರೆ ಪಾಕಿಸ್ತಾನ, ಬಾಂಗ್ಲಾ ವಿಲವಿಲ
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಘ್ನತೆ ಹೆಚ್ಚಾಗುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಅಮಾಯಕ ಪ್ರಯಾಣಿಕರ ಮೇಲೆ ಉಗ್ರರರು ಹಲ್ಲೇ ನಡೆಸಿದ್ದರು. ಇದಕ್ಕೆ ಭಾರತ ಪ್ರತಿಕಾರ ಯಾವಾಗ ತೀರಿಸಿಕೊಳ್ಳುತ್ತದೆ ಎಂದು ಎಲ್ಲರು ಕಾಯುತ್ತಿದ್ರು. ಆಗಲೇ ಭಾರತ ಬುಧವಾರ ನಸುಕಿನ ಜಾವ ಪಾಕ್‌ನ 9 ಪ್ರದೇಶಗಳಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯ ಬಗ್ಗೆ ಎರಡೂ ದೇಶಗಳ ನಡುವೆ ಉದ್ವಿಘ್ನತೆ ಇನ್ನು ಹೆಚ್ಚಾಗಿದೆ.
ಈ ಉದ್ವಿಘ್ನತೆಯ ನೆರಳು ಕ್ರಿಕೆಟ್ ಮೇಲೂ ಪರಿಣಾಮ ಬೀರಬಹುದಾಗಿದೆ. ಪಹಲ್ಗಾಮ್‌ನಲ್ಲಿ ಅಮಾಯಕ ಪ್ರಯಾಣಿಕರ ಮೇಲೆ ಉಗ್ರರರು ದಾಳಿ ನಡೆಸಿದ ನಂತರ ಬಿಸಿಸಿಐ ಒಂದು ಪತ್ರವನ್ನು ಐಸಿಸಿಗೆ ಕಳುಹಿಸಿದೆ. ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಇಡಬೇಡಿ ಎಂದು ಮನವಿಯನ್ನು ಸಹ ಮಾಡಿದೆ. ಈ ಮನವಿಯ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯಗಳು ಆಡುವುದು ಇನ್ನು ಕಡಿಮೆ ಆಗಲಿದೆ. ಒಂದು ವೇಳೆ ಭಾರತವು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ಮೇಲೆ ಬಹಿಷ್ಕಾರವನ್ನು ಹೇರಿದ್ರೆ, ಆ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ದೊಡ್ಡ ಹೊಡೆತ ಬೀಳುವುದಂತೂ ಗ್ಯಾರಂಟಿ.

ಪಾಕ್ ಬೊಕ್ಕಸಕ್ಕೆ ಭಾರೀ ನಷ್ಟ
ಒಂದು ವೇಳೆ ಟೀಮ್ ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಬಹಿಷ್ಠರಿಸಿದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ. ಒಂದು ಲೆಕ್ಕಾಚಾರದ ಪ್ರಕಾರ ಹೀಗೆ ಏನಾದ್ರೂ ಆದಲ್ಲಿ 220 ಕೋಟಿ ರೂ.ಗಳಷ್ಟು ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಭಾರತ, ಪಾಕಿಸ್ತಾನದ ಜೊತೆಗೆ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಪಾಕಿಸ್ತಾನದಲ್ಲಿ ಯಾವುದೇ ಐಸಿಸಿ ಟೂರ್ನಿಗಳು ಆಯೋಜನೆಗೊಂಡರೂ ಸಹ ಭಾರತ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲಿದೆ. ಚಾಂಪಿಯನ್ಸ್ ಟ್ರೋಫಿ 2025ರ ಆತಿಥ್ಯ ಪಾಕಿಸ್ತಾನ ವಹಿಸಿಕೊಂಡಿತ್ತು. ಭಾರತ, ಪಾಕ್‌ಗೆ ತಂಡವನ್ನು ಕಳುಹಿಸಲು ನಿರಾಕರಿಸಿದ್ದರಿಂದ ದುಬೈನಲ್ಲಿ ಪಂದ್ಯಗಳನ್ನು ಆಡಬೇಕಾಯಿತು.
ಒಂದು ವೇಳೆ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಜೊತೆ ಪಾಕ್ ಪ್ರತಿ ಟೂರ್ನಮೆಂಟ್ ಆಡದೇ ಇದ್ದಲ್ಲಿ 168 ಕೋಟಿ ರೂಗಳಷ್ಟು ನಷ್ಟ ಆಗುವ ಸಾಧ್ಯತೆ ಇದೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಬಾಂಗ್ಲಾಗೂ ಪೆಟ್ಟು
ಇನ್ನು ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ ಸಹ ಇದರಿಂದ ಪೆಟ್ಟು ತಿನ್ನಿಸಿಕೊಳ್ಳಲಿದೆ. ಭಾರತ ಒಂದು ವೇಳೆ ಬಾಂಗ್ಲಾದೇಶವನ್ನು ಬಹಿಷ್ಕರಿಸಿದರೆ, ಬಾಂಗ್ಲಾ ಕ್ರಿಕೆಟ್ ಬೊಕಸಕ್ಕೂ ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ. ಈ ಹಿಂದೆ ಭಾರತ, ಬಾಂಗ್ಲಾದೇಶ ಪ್ರವಾಸ ಬೆಳೆಸಿದ್ದಾಗ ಆ ಕ್ರಿಕೆಟ್ ಬೋರ್ಡ್‌ಗೆ 80 ಕೋಟಿ ರೂ ಹರಿದು ಬಂದಿತ್ತು. ಬಾಂಗ್ಲಾ ಸಹ ಭಾರತದೊಂದಿಗೆ ದ್ವಿಪಕ್ಷೀಯ ಸರಣಿ ಆಡದೇ ಇದ್ದಲ್ಲಿ ಪ್ರತಿ ಸರಣಿಯಲ್ಲಿ 100 ಕೋಟಿ ರೂ. ನಷ್ಟವಾಗುತ್ತದೆ. ಇನ್ನು ಐಸಿಸಿ ಟೂರ್ನಿಗಳಲ್ಲೂ ಮುಖಾಮುಖಿ ಆಗದೇ ಇದ್ದಲ್ಲಿ 130 ಕೋಟಿ ರೂ ನಷ್ಟವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications