
ನವದೆಹಲಿ, ಏ. 30: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮ ಮಿಂಚುತ್ತಿದ್ದಾರೆ. ಕಾರಣ ಏ. 30 ಶರ್ಮ ಅವರ ಜನ್ಮ ದಿನಾಂಕ.
ಇಂದಿಗೆ 32ನೇ ವರ್ಷಕ್ಕೆ ಕಾಲಿಡುತ್ತಿರುವ ರೋಹಿತ್ ಗೆ ಸೆಲೆಬ್ರಿಟಿಗಳಿಂದ, ಕ್ರೀಡಾಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಎಲ್ಲಕ್ಕಿಂತ ಮಿಗಿಲಾಗಿ ಶರ್ಮ ಸಂಗಾತಿ ರಿತಿಕಾ ಅವರು ಕ್ರೀಡಾಭಿಮಾನಿಗಳು ಕಣ್ಣರಳಿಸುವಂತಹ ಸಂದೇಶ, ಫೋಟೋಗಳನ್ನು ಹುಟ್ಟು ಹಬ್ಬದ ಶುಭಾಶಯದೊಂದಿಗೆ ರೋಹಿತ್ ಬಳಿ ಹರಿಯ ಬಿಡುತ್ತಿರುವುದು ನೆಟ್ಟಿಗರನ್ನು ಸೆಳೆಯುತ್ತಿದೆ.