ರಿತುರಾಜ್, ಗಿಲ್, ಸೈನಿ ಶೈನ್: ವೆಸ್ಟ್ ಇಂಡೀಸ್ 'ಎ' ಮಣಿಸಿದ ಭಾರತ 'ಎ'

ಆ್ಯಂಟಿಗುವಾ, ಜುಲೈ 15: ಯುವ ಬ್ಯಾಟ್ಸ್ಮನ್‌ಗಳಾದ ರಿತುರಾಜ್ ಗಾಯಕ್‌ವಾಡ್, ಶುಭ್‌ಮಾನ್ ಗಿಲ್ ಮತ್ತು ಬೌಲರ್ ನವದೀಪ್ ಸೈನಿಯ ಆಟದ ನೆರವಿನಿಂದ ಆ್ಯಂಟಿಗುವಾದ ನಾರ್ತ್‌ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 14) ನಡೆದ ಭಾರತ 'ಎ' ಮತ್ತು ವೆಸ್ಟ್ ಇಂಡೀಸ್ 'ಎ' ನಡುವಿನ 2ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ 65 ರನ್ ಜಯ ಗಳಿಸಿದೆ.
ಭಾರತ 'ಎ'ಯ ಆರಂಭಿಕ ಬ್ಯಾಟ್ಸ್ಮನ್‌ಗಳಾದ ರಿತುರಾಜ್ ಮತ್ತು ಶುಭ್‌ಮಾನ್ ಅರ್ಧಶತಕದ ಬೆಂಬಲ ನೀಡಿದರೆ, ಮಧ್ಯಮ ವೇಗಿ ನವದೀಪ್ ಸೈನಿ ಮಾರಕ ಬೌಲಿಂಗ್ ದಾಳಿ ತಂಡದ ಗೆಲುವಿಗೆ ನೆರವು ನೀಡಿತು. ಈ ಗೆಲುವಿನೊಂದಿಗೆ ಭಾರತ, ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 'ಎ'ಗೆ ರಿತುರಾಜ್ 85 (102 ಎಸೆತ), ಗಿಲ್ 62 (83 ಎಸೆತ), ಮನೀಷ್ ಪಾಂಡೆ 27, ಹನುಮ ವಿಹಾರಿ 23, ಇಶನ್ ಕಿಶನ್ 24, ಅಕ್ಸರ್ ಪಟೇಲ್ 13 ರನ್ ಸೇರಿಸಿದರು. ಭಾರತ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 255 ರನ್ ಪೇರಿಸಿತು.
ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್‌ಗೆ ರೇಮನ್ ರೀಫರ್ 71, ಸುನಿಲ್ ಆ್ಯಂಬ್ರಿಸ್ 24, ರಹಕೀಮ್ ಕಾರ್ನ್‌ವಾಲ್ 13, ರೊಮಾರಿಯೋ ಶೆಫರ್ಡ್ 34 ರನ್ ಸೇರ್ಪಡೆ ಪ್ರಮುಖವೆನಿಸಿತು. ವಿಂಡೀಸ್ 'ಎ' 50 ಓವರ್ ಮುಕ್ತಾಯಕ್ಕೆ ಸರ್ವ ಪತನ ಕಂಡು 190 ರನ್ ಗಳಿಸಲಷ್ಟೇ ಶಕ್ತವಾಯ್ತು.
ಭಾರತದ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ ರೊಮಾರಿಯೋ ಶೆಫರ್ಡ್ 36 ರನ್‌ಗೆ 4 ವಿಕೆಟ್ ಪಡೆದು ಗಮನ ಸೆಳೆದರೆ, ವಿಂಡೀಸ್ ಇನ್ನಿಂಗ್ಸ್ ವೇಳೆ ಭಾರತದ ನವದೀಪ್ ಸೈನಿ 46 ರನ್‌ಗೆ 5 ವಿಕೆಟ್, ರಾಹುಲ್ ಚಾಹರ್ 47 ರನ್‌ಗೆ 2 ವಿಕೆಟ್ ಪಡೆದು ಮಿಂಚಿದರು. 3ನೇ ಪಂದ್ಯ ಜುಲೈ 16ರ ಮಂಗಳವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications