ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಸಂಘಟಿತ ಆಟ ಗೆಲುವಿನಲ್ಲಿ ಮಿಂಚಿತು. ಈ ವೇಳೆ ರಿಯಾನ್ ಪರಾಗ್ ಅವರ ಒಂದು ಫೋಟೋ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇದುತ್ತಿರುವುದು ಕ್ಯಾಮೇರಾದಲ್ಲಿ ಸೆರೆಯಾಗಿದೆ.
19ನೇ ಆವೃತ್ತಿ ಐಪಿಎಲ್‌ನ 40 ನೇ ಪಂದ್ಯದಲ್ಲಿ ಈ ಆಘಾತಕಾರಿ ದೃಶ್ಯ ಸೆರೆಯಾಗಿದೆ. ರಾಜಸ್ಥಾನದ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ ಪರಾಗ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇದುತ್ತಿರುವುದು ಕಂಡು ಬಂದಿದೆ. ಡ್ರೆಸ್ಸಿಂಗ್ ರೂಮ್ ಒಳಗೆ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತೆಯೇ ಪರಾಗ್ ಅವರು ಇ-ಸಿಗರೇಟ್ ಸೇದಿದ್ದು ಸಂಚಲನ ಮೂಡಿಸಿದೆ.

ಪರಾಗ್ ಅವರ ಈ ಒಂದು ದೃಶ್ಯ ಅವರ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿವೆ. ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಸೇದಿರುವ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ಭಾರತದಲ್ಲಿ ಇ-ಸಿಗರೇಟ್, ಮಾರಾಟ, ಖರೀದಿ, ಆಮದು, ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. 2019ರ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯ ಅನುಸಾರ ಈ ತಪ್ಪಿಗೆ ಜೈಲು ಶಿಕ್ಷೆ, ಭಾರೀ ದಂಡವನ್ನು ವಿಧಿಸುವ ಸಾಧ್ಯತೆ ಇದೆ.
ಇ-ಸಿಗರೇಟ್‌ಗಳು ದೇಶದಲ್ಲಿ ಕಾನೂನುಬದ್ಧವಾಗಿಲ್ಲ ಆದರೂ ಪರಾಗ್ ಮಾಡಿದ ತಪ್ಪಿಗೆ ತನಿಖೆ ಆಗಬೇಕು ಎಂಬ ಕೂಗು ಕೇಳಿ ಬಂದಿದೆ. ಇದು ನಿಜಕ್ಕೂ ಆರ್‌ಆರ್ ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ಪರಾಗ್ ಈ ಮೂಲಕ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಬಿಸಿಸಿಐ ಇವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳು ಸಾಧ್ಯತೆ ಇದೆ. ಬಿಸಿಸಿಐ ಅಧಿಕೃತವಾಗಿ ಈ ವಿಷಯವನ್ನು ತನಿಖೆ ಮಾಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ರಿಯಾನ್ ಪರಾಗ್ ಇ-ಸಿಗರೇಟ್ ಹಿಡಿದುಕೊಂಡು ಸೇದುತ್ತಿರುವು ಕಂಡು ಬರುತ್ತಿದೆ. ಇವರು ಸೇದುವ ವೇಳೆ ಯಶಸ್ವಿ ಜೈಸ್ವಾಲ್ ಅಡ್ಡಲಾಗಿ ಬಂದಂತೆ ಕಾಣುತ್ತಿದೆ. ಜೈಸ್ವಾಲ್ ಸರಿದ ಬಳಿಕ ಪರಾಗ್ ಇ-ಸಿಗರೇಟ್ ಸೇದಿದ ಹೊಗೆಯನ್ನು ಬಿಟ್ಟಿದ್ದಾರೆ. ಈ ದೃಶ್ಯದಲ್ಲಿ ರಿಯಾನ್ ಪರಾಗ್ ಅವರನ್ನು ಸಹ ಕಾಣಬಹುದಾಗಿದೆ.
ಸಂಜು ಸ್ಯಾಮ್ಸನ್ ಅವರ ಬದಲಿಗೆ ನಾಯಕರಾದ ರಿಯಾನ್ ಪರಾಗ್ ಈ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ಸಹ ವಿಫಲರಾಗಿದ್ದಾರೆ. ಇವರ ಮೇಲೆ ಬ್ಯಾಟಿಂಗ್ ಒತ್ತಡ ಈಗಾಗಲೇ ಇದೆ. ಈ ನಡುವೆ, ಈ ದೃಶ್ಯ ಅವರಿಗೆ ಘಾಸಿ ಉಂಟು ಮಾಡಿರುತ್ತದೆ. ಇದು ಮೊದಲ ಬಾರಿ ಮಾಡಿದ್ದರಿಂದ ಅವರ ವಿರುದ್ಧ ಬಿಸಿಸಿಐ ಅವರಿಗೆ ಎಚ್ಚರಿಕೆಯನ್ನು ನೀಡಬಹುದು. ಇಲ್ಲವೇ ದೊಡ್ಡ ಪ್ರಮಾಣದ ದಂಡವನ್ನು ಸಹ ವಿಧಿಸಬಹುದಾಗಿದೆ.