ವೈಭವ್ ಸೂರ್ಯವಂಶಿಗೆ ರಿಯಾನ್ ಪರಾಗ್ ನಿಂದನೆ: ಡ್ರೆಸ್ಸಿಂಗ್ ರೂಂನಲ್ಲಿ ಏನಾಯಿತು?
ಚಂಡೀಗಢ: 2026ರ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 96 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಿದ್ದಾರೆ. ಇವರು ಔಟ್ ಆಗಿ ಬರುತ್ತಿದ್ದಂತೆ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ವೈಭವ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ವೈಭವ್ ಸೂರ್ಯವಂಶಿ ಸತತ ಎರಡನೇ ನಾಕೌಟ್ ಪಂದ್ಯದಲ್ಲೂ ಶತಕ ವಂಚಿತರಾದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹಿಂದಿನ ಪಂದ್ಯದಲ್ಲಿ 97 ರನ್‌ಗಳಿಗೆ ಔಟ್ ಆಗಿದ್ದ ವೈಭವ್, ಗುಜರಾತ್ ಟೈಟನ್ಸ್ ವಿರುದ್ಧ 96 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ರಬಾಡಾ ಬೌಲ್ ಮಾಡಿದ ಶಾರ್ಟ್ ಪಿಚ್ ಎಸೆತವನ್ನು ಅಪ್ಪರ್ ಕಟ್ ಬಾರಿಸಲು ಯತ್ನಿಸಿ ಅವರು ಔಟಾದರು. ಹಿಂದಿನ ಪಂದ್ಯದಲ್ಲೂ ಇದೇ ರೀತಿಯ ಎಸೆತಕ್ಕೆ ಅವರು ತಮ್ಮ ವಿಕೆಟ್ ಕೈ ಚೆಲ್ಲಿದ್ದರು.

ಪಂದ್ಯದ ನಂತರ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಘಟನೆ ಈಗ ಅಭಿಮಾನಿಗಳನ್ನು ಕೆರಳಿಸಿದೆ. ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್ ಅವರು ಅತ್ಯಂತ ಕೋಪದಿಂದ ವೈಭವ್ ಅವರೊಂದಿಗೆ ಮಾತನಾಡಿದರು. ದೃಶ್ಯದಲ್ಲಿ ಕಂಡು ಬಂದಂತೆ ವೈಭವ್ ನೀರು ಕುಡಿಯುತ್ತಿದ್ದಾಗ, ಪರಾಗ್ ಬೆರಳು ತೋರಿಸಿ ಏನನ್ನೋ ಗದರಿಸಿದರು. ಯುವ ಆಟಗಾರ ಯಾವುದೇ ಉತ್ತರ ನೀಡದೆ, ಮೌನವಾಗಿ ಕುಳಿತುಕೊಂಡರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಭಿಮಾನಿಗಳ ಬೇಸರ
ಇದಲ್ಲದೆ, ಗುಜರಾತ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ 18ನೇ ಓವರ್‌ನಲ್ಲಿ ಇನ್ನೊಂದು ಘಟನೆ ನಡೆಯಿತು. ಗುಜರಾತ್ ಗೆಲುವಿಗೆ 12 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿದ್ದಾಗ, ವೈಭವ್ ನಿರ್ಲಕ್ಷ್ಯ ತೋರಿಸಿದರು ಎಂದು ಆರೋಪಿಸಿ ರಿಯಾನ್ ಪರಾಗ್ ಅವರನ್ನು ಮೈದಾನದಲ್ಲೇ ಕೂಗಿದ್ದರು. ರಾಜಸ್ಥಾನ ಸೋಲುವ ಅಂಚಿನಲ್ಲಿದ್ದಾಗ ತಂಡದ ಸ್ಟಾರ್ ಆಟಗಾರನ ಮೇಲೆ ಪರಾಗ್ ತೋರಿಸಿದ ಈ ವರ್ತನೆಯು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ರಿಯಾನ್ ಪರಾಗ್ ಅವರ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ. "ಐಪಿಎಲ್‌ನಲ್ಲಿ 6 ವರ್ಷಗಳಿಂದ ಆಡುತ್ತಿರುವ ರಿಯಾನ್ ಪರಾಗ್ 97 ಪಂದ್ಯಗಳಲ್ಲಿ ಕೇವಲ 1800 ರನ್‌ಗಳನ್ನು ಗಳಿಸಿದ್ದಾರೆ. ಆದರೆ, ವೈಭವ್ 23 ಪಂದ್ಯಗಳಲ್ಲಿ 1000 ರನ್‌ಗಳನ್ನು ದಾಟಿದ್ದಾರೆ. 10,000 ರನ್ ಗಳಿಸಿದ ಲೆಜೆಂಡ್‌ನಂತೆ ಪರಾಗ್ ವರ್ತಿಸುತ್ತಾರೆ" ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒತ್ತಡದ ಪಂದ್ಯದಲ್ಲೂ ಪರಾಗ್ ಜವಾಬ್ದಾರಿ ಮರೆತು ಕೇವಲ 11 ರನ್ ಬಾರಿಸಿದರು.
ರಾಯಲ್ಸ್ ಸೋತರೂ, ವೈಭವ್ ಸೂರ್ಯವಂಶಿ ಅನೇಕ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. 15 ಪಂದ್ಯಗಳಲ್ಲಿ 776 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ 1000 ರನ್ ಗಳಿಸಿದ ಆಟಗಾರ ಹಾಗೂ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications