Riyan Parag: ಮೈದಾನಕ್ಕೆ ಇಳಿಯುವ ಮುನ್ನ ವಿಶೇಷ ಕ್ಲಬ್ ಸೇರಿದ ರಿಯಾನ್ ಪರಾಗ
18ನೇ ಆವೃತ್ತಿಯ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಮಾಜಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಅಭ್ಯಾಸ ಆರಂಭಿಸಿದೆ. ಇದೇ ವೇಳೆ ತಂಡಕ್ಕೆ ಗಾಯಕ್ಕೆ ಬಹುವಾಗಿ ಕಾಡುತ್ತಿದೆ. ತಂಡದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಆರಂಭಿಕ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೊಡ್ಡ ಅಪ್‌ಡೇಟ್ ನೀಡಿದ್ದಾರೆ.
ಮಾರ್ಚ್ 22 ರಂದು ಐಪಿಎಲ್ ಉದ್ಘಾಟನಾ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸಲಿವೆ. ರಾಜಸ್ಥಾನ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಹೈದರಾಬಾದ್‌ನಲ್ಲಿ ಮಾರ್ಚ್ 23 ರಂದು ಮಧ್ಯಾಹ್ನ 3.30ಕ್ಕೆ ಎಸ್‌ಆರ್‌ಎಚ್ ಆಡಲಿದೆ. ಈ ಪಂದ್ಯದಲ್ಲಿ ತಂಡದ ನಾಯಕ ಸಂಜು ಸ್ಯಾಮ್ಸನ್ ಅಲಭ್ಯರಾಗಿದ್ದಾರೆ. ಈ ವೇಳೆ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಮೊದಲ ಪಂದ್ಯದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಬಗ್ಗೆ ಸಂಜು ಸ್ಯಾಮ್ಸನ್ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತನ್ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಂಜು ನಮ್ಮ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರು ಇದ್ದಾರೆ. ಈ ತಂಡವನ್ನು ಮುನ್ನಡೆಸುವ ಕ್ಷಮತೆಯನ್ನು ಹೊಂದಿರುವ ಆಟಗಾರರಿಗೆ ಏನೂ ಕಮ್ಮಿ ಇಲ್ಲ. ಆದ್ರೆ ನಾವೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೀವೆ. ಮೊದಲ ಮೂರು ಪಂದ್ಯಗಳಿಗೆ ಇವರೇ ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ಸಂಜು ಆರಂಭೀಕ ಮೂರು ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ತಂಡವನ್ನು ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಪರಾಗ್‌ಗೆ ಇನ್ನು ಫಿನಿಷರ್ ಜವಾಬ್ದಾರಿಯ ಜೊತೆಗೆ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ನಿಭಾಹಿಸಲಿದ್ದಾರೆ. ಈ ಮೂಲಕ ಪರಾಗ್ ಸ್ಟಾರ್ ಆಟಗಾರರ ಸಾಲಿಗೆ ಸೇರಿದ್ದಾರೆ. ಈಗ ಇವರಿಗೆ 23 ವಯಸ್ಸು.

ರಿಯಾನ್ ಪರಾಗ್ ಸಾಧನೆ
23 ವರ್ಷದ ರಿಯಾನ್ ಪರಾಗ್ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಈಗಾಗಲೇ 70 ಐಪಿಎಲ್ ಪಂದ್ಯಗಳನ್ನು ಆಡಿರುವ ರಿಯಾನ್ 25ರ ಸರಾಸರಿಯಲ್ಲಿ 1173 ರನ್ ಸಿಡಿಸಿದ್ದಾರೆ. ಈ ವೇಳೆ 6 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಲ್ಲದೆ 4 ವಿಕೆಟ್ ಕಬಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಐಪಿಎಲ್ ತಂಡವನ್ನು ಮುನ್ನಡೆಸಿದ ಕೀರ್ತಿ ಸೂಪರ್ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಇವರು ತಮ್ಮ 22ನೇ ವಯಸ್ಸು, 187ನೇ ದಿನದಲ್ಲಿ ಈ ಸಾಧನೆ ಮಾಡಿದ್ದರು.
ಕಿರಿಯ ವಯಸ್ಸಿನಲ್ಲಿ ಐಪಿಎಲ್ ತಂಡವನ್ನು ಮುನ್ನಡೆಸಿದ ನಾಯಕರು
- ವಿರಾಟ್ ಕೊಹ್ಲಿ, 22 ವರ್ಷ 187 ದಿನ
- ಸ್ಟೀವನ್ ಸ್ಮಿತ್, 22 ವರ್ಷ, 344 ದಿನ
- ಸುರೇಶ್ ರೈನಾ, 23 ವರ್ಷ, 112 ದಿನ
- ಶ್ರೇಯಸ್ ಅಯ್ಯರ್, 23 ವರ್ಷ, 142 ದಿನ
- ರಿಷಭ್ ಪಂತ್, 23 ವರ್ಷ, 289 ದಿನ
- ಶುಭಮನ್ ಗಿಲ್, 24 ವರ್ಷ, 198 ದಿನ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications