For Quick Alerts
ALLOW NOTIFICATIONS  
For Daily Alerts
 

Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್‌ ಪರಾಗ್‌

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ರಾಜಸ್ಥಾನ ರಾಯಲ್ಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ರಿಯಾನ್‌ ಪರಾಗ್‌ ಅವರಿಗೆ ಪಂದ್ಯ ಶ್ರೇಷ್ಠ ಗರಿ ಸಂದಿದೆ. ಈ ವೇಳೆ ಅವರು ಕಳೆದ ಮೂರು ನಾಲ್ಕು ದಿನಗಳಿಂದ ಅನುಭವಿಸಿದ ಯಾತೆಯನ್ನು ಹಂಚಿಕೊಂಡಿದ್ದಾರೆ.

17ನೇ ಐಪಿಎಲ್‌ನ ಒಂಬತ್ತನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡಕ್ಕೆ ಆಸರೆಯಾದ ರಿಯಾನ್‌ ಪರಾಗ್‌ 45 ಎಸೆತಗಳಲ್ಲಿ 84 ರನ್‌ ಗಳಿಸಿದರು. ಇವರ ಭರ್ಜರಿ ಆಟದ ನೆರವಿನಿಂದ ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185 ರನ್‌ ಸೇರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಡೇವಿಡ್‌ ವಾರ್ನರ್‌ 49 ಹಾಗೂ ಟ್ರಿಸ್ಟಾನ್ ಸ್ಟಬ್ಸ್ 44 ರನ್ ಬಾರಿಸಿ ಆಧಾರವಾದರು. ಈ ಇಬ್ಬರು ಸ್ಟಾರ್ ಆಟಗಾರರ ಆಟದ ಬಲದಿಂದ ಡೆಲ್ಲಿ ಸೋಲಿನ ಅಂತರ ಕಡಿಮೆ ಆಯಿತು. 20 ಓವರ್‌ಗಳಲ್ಲಿ ಡೆಲ್ಲಿ 5 ವಿಕೆಟ್‌ಗೆ 173 ರನ್‌ ಸೇರಿಸಿ 12 ರನ್‌ ಸೋಲು ಕಂಡಿತು.

Riyan Parag Was in bed for 3 days took painkillers

ಪಂದ್ಯ ಶ್ರೇಷ್ಠ ಇನ್ನಿಂಗ್ಸ್ ಆಡಿದ ರಿಯಾನ್ ಪರಾಗ್‌ಗೆ ಗೌರವೂ ಸಂದಿತು. ಈ ವೇಳೆ ಮಾತನಾಡಿದ ಅವರು, ದೇಶೀಯ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ನನಗೆ ನೆರವಾಯಿತು. ಐಪಿಎಲ್‌ನಿಂದ ನಾನು ಲಾಭ ಪಡೆಯುತ್ತಿದ್ದೇನೆ. ತಂಡದ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು 20 ಓವರ್‌ಗಳವರೆಗೆ ಆಡಬೇಕಾಗುತ್ತದೆ ಎಂದು ನನಗೆ ತಿಳಿದಿದೆ.

ನಾಯಕ ಸಂಜು ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಕಳೆದ 3 ದಿನಗಳಿಂದ ನಾನು ನಿರಂತರವಾಗಿ ಪೇನ್‌ ಕ್ಯೂಲರ್‌ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನಾನು ನನ್ನ ತಂಡಕ್ಕೆ ಕೊಡುಗೆ ನೀಡಿದ್ದು, ಖುಷಿ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

Riyan Parag Was in bed for 3 days took painkillers

ರಾಜಸ್ಥಾನ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರಿಯಾನ್‌ ಕ್ಲಾಸಿಕ್ ಆಟವನ್ನು ಆಡಿದರು. ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ವೇಗಿ ಎನ್ರಿಕ್ ನಾರ್ಸಿಯಾ ಅವರು ಗಾಯದ ಕಾರಣ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅವರು ಎರಡನೇ ಪಂದ್ಯದಲ್ಲಿ ಬೌಲಿಂಗ್ ಮಾಡಿದರು. ಕೊನೆಯ ಓವರ್‌ ಬೌಲಿಂಗ್‌ ಮಾಡಿದ ಇವರಿಗೆ ರಿಯಾನ್ ಮನ ಬಂದಂತೆ ದಂಡಿಸಿದರು. ಈ ಓವರ್‌ನಲ್ಲಿ 25 ರನ್‌ ಹರಿದು ಬಂದವು.

ದೇಶೀಯ ಟೂರ್ನಿಯಲ್ಲಿ ಅಬ್ಬರ

ಸೈಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ರಿಯಾನ್‌ ಪರಾಗ್‌ ಸೊಗಸಾದ ಇನ್ನಿಂಗ್ಸ್‌ ಆಡಿದ್ದಾರೆ. ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ ಇವರು 85ರ ಸರಾಸರಿಯಲ್ಲಿ 510 ರನ್‌ ಸಿಡಿಸಿದ್ದಾರೆ.

Story first published: Friday, March 29, 2024, 10:13 [IST]
Other articles published on Mar 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+