Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Riyan Parag: 'ಸಾರಾ ಅಲಿ ಖಾನ್‌, ಅನನ್ಯಾ ಪಾಂಡೆ ಹಾಟ್‌'; ರಿಯಾನ್‌ ಪರಾಗ್‌ ಸರ್ಚ್‌ ಹಿಸ್ಟರಿ ಲೀಕ್‌!

ಮೇ 28 ಮಂಗಳವಾರ, ಐಪಿಎಲ್‌ 2024ರಲ್ಲಿ ಹಲವು ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಜೊತೆಗೆ ಕೆಲವು ಆಟಗಾರರಿಗೆ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.

ಇನ್ನುಳಿದ ಆಟಗಾರರು ಆಯ್ಕೆ ಆಗುವ ಸಾಧ್ಯತೆ ಇದ್ದರೂ, ನಿರಾಸೆ ಅನುಭವಿಸಿದ್ದಾರೆ. ಅದರಲ್ಲೂ ರಾಜಸ್ಥಾನ ರಾಯಲ್ಸ್ ಪರ 22 ವರ್ಷದ ಸ್ಪೋಟಕ ಬ್ಯಾಟರ್‌ ರಿಯಾನ್‌ ಪರಾಗ್‌ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಹೀಗಾಗಿ 2024ರ ಟಿ20 ವಿಶ್ವಕಪ್‌ ತಂಡದಲ್ಲಿ ಆಡುವ ಅವಕಾಶ ಸಿಗಬಹುದು ಎಂದು ರಿಯಾನ್‌ ಪರಾಗ್‌ ನಂಬಿದ್ದರು.

Riyan Parag YouTube Search History Leak

ಆದರೇ ರಿಯಾನ್‌ ಪರಾಗ್‌ ಅವರಿಗೆ ಈ ಬಾರಿ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಬಳಿಕ ಈ ವಿಚಾರವಾಗಿ ರಿಯಾನ್‌ ಪರಾಗ್‌ ಸುದ್ದಿಯಾಗಿದ್ದರು. ಇದೀಗಾ ಮತ್ತೊಮ್ಮೆ ರಿಯಾನ್‌ ಪರಾಗ್‌ ಸಖತ್ ಸದ್ದು ಮಾಡುತ್ತಿದ್ದಾರೆ.

ತನ್ನ ಯೂಟ್ಯೂಬ್‌ ಖಾತೆಯಲ್ಲಿ ರಿಯಾನ್‌ ಪರಾಗ್‌ ಬಾಲಿವುಟ್‌ ಸ್ಟಾರ್‌ ನಟಿಯರ ಹಾಟ್‌ ವಿಡಿಯೋ ಹುಡುಕಾಡಿರುವುದು ವೈರಲ್‌ ಆಗಿದೆ. ನಟಿರಾದ ಅನನ್ಯಾ ಪಾಂಡೆ ಹಾಗು ಸಾರಾ ಅಲಿ ಖಾನ್‌ ಅವರ ಹಾಟ್‌ ವಿಡಿಯೋಗಳನ್ನು ಪರಾಗ್‌ ಸರ್ಚ್‌ ಮಾಡಿರುವುದು ಬಹಿರಂಗವಾಗಿದೆ.

Riyan Parag YouTube Search History Leak

ಇತ್ತೀಚೆಗೆ ರಿಯಾನ್‌ ಪರಾಗ್‌ ಯೂಟ್ಯೂಬ್‌ ಲೈಬ್‌ ಸ್ಟ್ರೀಮಿಂಗ್‌ ಮಾಡಿದ್ದರು. ಇದಕ್ಕೂ ಮುನ್ನ ಅವರು ನಟಿ ಅನನ್ಯಾ ಪಾಂಡೆ ಹಾಗು ಸಾರಾ ಅಲಿ ಖಾನ್‌ ಅವರ ಹಾಟ್‌ ವಿಡಿಯೋಗಳನ್ನು ಸರ್ಚ್‌ ಮಾಡಿದ್ದರು.

ಆದರೆ ಈ ಸರ್ಚ್‌ ಹಿಸ್ಟರ್‌ಯನ್ನು ಡಿಲೀಟ್‌ ಮಾಡದೇ ಪರಾಗ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿಯರ ಹೆಸರುಗಳೊಂದಿಗೆ ಹಾಟ್‌ ವಿಡಿಯೋ ಸರ್ಚ್‌ ಮಾಡಿರುವುದು ಕಂಡು ಬಂದಿತ್ತು.

ಇದೀಗಾ ಪರಾಗ್‌ ಅವರ ಸರ್ಚ್‌ ಹಿಸ್ಟರಿ ಸ್ಕ್ರೀನ್‌ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳು ಬರಲಾರಂಭಿಸಿದ್ದು, ಪರಾಗ್‌ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ.

ಈ ಋತುವಿನ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಮಧ್ಯಮ ಕ್ರಮಾಂಕದಲ್ಲಿ ರಿಯಾನ್‌ ಪರಾಗ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ಮಾಡುವ ಮೂಲಕ ತಂಡಕ್ಕೆ ನೆರವಾಗಿದ್ದರು. ಟೂರ್ನಿಯಲ್ಲಿ 15 ಪಂದ್ಯಗಳನ್ನು ಆಡಿದ ಪರಾಗ್‌ 4 ಅರ್ಧಶತಕ ಸಿಡಿಸಿ ಮಿಂಚಿದ್ದರು. ಒಟ್ಟು 573 ರನ್‌ ಹೊಡೆದು ಟಾಪ್‌ ಮೂವರು ಬ್ಯಾಟರ್‌ಗಳಲ್ಲಿ ಪರಾಗ್ ಸಹಾ‌ ಒಬ್ಬರಾಗಿದ್ದಾರೆ.

ಪರಾಗ್‌ ಅವರ ಅಮೋಘ ಪ್ರದರ್ಶನದಿಂದಾಗಿ ಈ ಬಾರಿ ರಾಜಸ್ಥಾನ ರಾಯಲ್ಸ್‌ ಪ್ಲೇ ಆಫ್‌ಗೂ ಎಂಟ್ರಿ ಕೊಟ್ಟಿತ್ತು. ಜೊತೆಗೆ ಪರಾಗ್‌ ಅವರ ಮಿಂಚಿನ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ಕೂಡ ಬಂದಿದ್ದವು. ಆರ್‌ಸಿಬಿ ವಿರುದ್ಧ ಕೂಡ ಎಲಿಮಿನೇಟರ್‌ ಪಂದ್ಯದಲ್ಲಿ ತಂಡದ ಗೆಲುವಿಗೆ ನೆರವಾಗಿದ್ದರು.

Story first published: Tuesday, May 28, 2024, 15:53 [IST]
Other articles published on May 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+