6, 6, 6, 6-ಗತಕಾಲ ನೆನಪಿಸಿದ ಸಿಕ್ಸರ್ ಕಿಂಗ್ ಯುವರಾಜ್: ವಿಡಿಯೋ

ರಾಯ್‌ಪುರ್: 2007ರ ಟಿ20ಐ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಬ್ಯಾಟಿಂಗ್ ರಸದೌತಣ ನೋಡುವ ಅವಕಾಶ ಮತ್ತೆ ಒದಗಿ ಬಂದಿತ್ತು. ಛತ್ತೀಗಢದ ರಾಯ್‌ಪುರ್‌ನಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20ಐ ಟೂರ್ನಿಯಲ್ಲಿ ಸಿಕ್ಸರ್ ಕಿಂಗ್ ಯುವ ಮತ್ತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ರಾಯ್‌ಪುರ್‌ನ ಶಾಹಿದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 13ನೇ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್ ತಂಡಗಳು ಮೈದಾನಕ್ಕಿಳಿದಿದ್ದವು. ಈ ವೇಳೆ ಇಂಡಿಯಾ ಪರ ಆಡಿದ್ದ ಯುವಿ ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ.
ಬ್ರೂಯಿನ್ ಬೆವರಿಳಿಸಿದ ಯುವಿ
ಯುವರಾಜ್ ಸ್ಫೋಟಕ ಬ್ಯಾಟಿಂಗ್ ಕಾಣಸಿಕ್ಕಿದ್ದು ಭಾರತದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ. ಓವರ್ ಎಸೆಯೋಕೆ ಆಫ್ರಿಕಾದ ಜಾಂಡರ್ ಡಿ ಬ್ರೂಯಿನ್ ಬಂದಿದ್ದರು. ಆರಂಭಿಕ ಎಸೆತವನ್ನು ಡಾಟ್ ಮಾಡಿದ ಯುವಿ ಅನಂತರ 4 ಎಸೆತಗಳಿಗೆ ಸತತ 4 ಸಿಕ್ಸರ್‌ಗಳನ್ನು ಬಾರಿಸಿ ಬ್ರೂಯಿನ್ ಮುಖದಲ್ಲಿ ಬೆವರಿಳಿಯುವಂತೆ ಮಾಡಿದ್ದರು. ಆದರೆ ಕೊನೇ ಎಸೆತ ಕೂಡ ಡಾಟ್ ಎನಿಸಿತು.
ಸಿಕ್ಸ್ ಸಿಕ್ಸರ್ ನೆನಪು
ರೋಡ್ ಸೇಫ್ಟಿ ಸೀರೀಸ್‌ನಲ್ಲಿ ಯುವಿ ಬ್ಯಾಟಿಂಗ್ ನೋಡುತ್ತಲೇ ಅನೇಕ ಅಭಿಮಾನಿಗಳಿಗೆ 2007ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಯುವಿ ಪ್ರತೀ ಎಸೆತಕ್ಕೂ ಸಿಕ್ಸ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಕ್ಷಣಗಳು ಕಣ್ಣ ಮುಂದೆ ಬಂದವು. ಅಂದ್ಹಾಗೆ ಈ ಪಂದ್ಯದಲ್ಲಿ ಯುವಿ 22 ಎಸೆತಗಳಿಗೆ ಅಜೇಯ 52 ರನ್ ಬಾರಿಸಿದ್ದರು.
ಭಾರತಕ್ಕೆ ಭರ್ಜರಿ ಜಯ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಟ್ಟಿದ್ದ ಇಂಡಿಯಾ ಲೆಜೆಂಡ್ಸ್, ನಾಯಕ ಸಚಿನ್ ತೆಂಡೂಲ್ಕರ್ 60 (37 ಎಸೆತ), ಎಸ್ ಬದ್ರಿನಾಥ್ 42, ಯೂಸುಫ್ ಪಠಾಣ್ 23, ಯುವಿ 52 ರನ್‌ನೊಂದಿಗೆ 204 ರನ್ ಬಾರಿಸಿತ್ತು. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ 148 ರನ್ ಬಾರಿಸಿದ್ದರಿಂದ ಇಂಡಿಯಾ ಲೆಜೆಂಡ್ಸ್ 56 ರನ್ ಜಯ ಗಳಿಸಿತು. 2019ರಲ್ಲಿ ಯುವರಾಜ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನ ಕೊನೇ ಪಂದ್ಯ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications