Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೌತ್ ಆಫ್ರಿಕಾ ಲೆಜೆಂಡ್ಸ್‌ ಸೋಲಿಸಿದ ಶ್ರೀಲಂಕಾ ಲೆಜೆಂಡ್ಸ್‌ ಫೈನಲ್‌ಗೆ

Road Safety World Series: Sri Lanka Legends beat South Africa Legends by 8 Wickets

ರಾಯ್‌ಪುರ್: ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಸೆಮಿಫೈನಲ್‌ 2 ಪಂದ್ಯದಲ್ಲಿ ಸೌತ್ ಆಫ್ರಿಕಾ ಲೆಜೆಂಡ್ಸ್‌ ತಂಡವನ್ನು 8 ವಿಕೆಟ್‌ನಿಂದ ಸೋಲಿಸಿರುವ ಶ್ರೀಲಂಕಾ ಲೆಜೆಂಡ್ಸ್‌ ಫೈನಲ್‌ಗೆ ಪ್ರವೇಶಿಸಿದೆ. ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ ಮತ್ತು ಶ್ರೀಲಂಕಾ ಲೆಜೆಂಡ್ಸ್‌ ಸ್ಪರ್ಧಿಸಲಿವೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌, ಮೊರ್ನೆ ವ್ಯಾನ್ ವೈಕ್ 53, ಅಲ್ವಿರೋ ಪೀಟರ್ಸನ್ 27, ಜಸ್ಟಿನ್ ಕೆಂಪ್ 15, ಝ್ಯಾಂಡರ್ ಡೆ ಬ್ರ್ಯುನ್ 7 ರನ್ ಸೇರ್ಪಡೆಯೊಂದಿಗೆ 20 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 125 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್‌, ನಾಯಕ ತಿಲಕರತ್ನೆ ದಿಲ್ಶನ್ 18, ಸನತ್ ಜಯಸೂರ್ಯ 18, ಉಪುಲ್ ತರಂಗ ಅಜೇಯ 39, ಚಿಂತಕ ಜಯಸಿಂಗ ಅಜೇಯ 47 ರನ್‌ ಸೇರ್ಪಡೆಯೊಂದಿಗೆ 17.2 ಓವರ್‌ನಲ್ಲಿ 2 ವಿಕೆಟ್ ಕಳೆದು 129 ರನ್ ಗಳಿಸಿತು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ನುವಾನ್ ಕುಲಸೇಕರ 25 ರನ್‌ಗೆ 5 ವಿಕೆಟ್ ಉರುಳಿಸಿ ಗಮನ ಸೆಳೆದರು. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಫೈನಲ್ ಪಂದ್ಯ ಮಾರ್ಚ್ 21ರ ಭಾನುವಾರ ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲಜೆಂಡ್ಸ್ ಮಧ್ಯೆ ನಡೆಯಲಿದೆ. 7 pmಗೆ ಪಂದ್ಯ ಆರಂಭವಾಗಲಿದೆ.

Story first published: Saturday, March 20, 2021, 8:39 [IST]
Other articles published on Mar 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+