ದಿಲ್ಶನ್ ಅಬ್ಬರದಾಟ, ಸೌತ್ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್‌ಗೆ ಭರ್ಜರಿ ಜಯ

ರಾಯ್‌ಪುರ್: ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 8ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ತಿಲಕರತ್ನೆ ದಿಲ್ಶನ್ ಅವರ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಲಂಕಾ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೌತ್ ಆಫ್ರಿಕಾ ಲೆಜೆಂಡ್ಸ್‌ನಿಂದ ಆಂಡ್ರ್ಯೂ ಪುಟಿಕ್ 39, ಝ್ಯಾಂಡರ್ ಡೆ ಬ್ರ್ಯುಯಾನ್ 15, ಜಸ್ಟಿನ್ ಕೆಂಪ್ 7, ಮಕಾಯ ಎನ್‌ಟಿನಿ 8 ರನ್ ಸೇರಿಸಿದರು. ದಕ್ಷಿಣ ಆಫ್ರಿಕಾ ತಂಡ 18.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 89 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್, ನಾಯಕ ತಿಲಕರತ್ನೆ ದಿಲ್ಶನ್ ಅಜೇಯ 50 (40 ಎಸೆತ), ಸನತ್ ಜಯಸೂರ್ಯ 8, ಉಪುಲ್ ತರಂಗ ಅಜೇಯ 27 ರನ್ ಸೇರ್ಡೆಯೊಂದಿಗೆ 13.2 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 92 ರನ್ ಬಾರಿಸಿ ಜಯದ ಕೇಕೆ ಹಾಕಿತು.
ಸೌತ್ ಆಫ್ರಿಕಾ ಲೆಜೆಂಡ್ಸ್ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ 1, ನುವಾನ್ ಕುಲಶೇಖರ 2, ಧಮಿಕ ಪ್ರಸಾದ್ 1, ರಂಗನಾ ಹೇರತ್ 2 (11 ರನ್), ಸನತ್ ಜಯಸೂರ್ಯ 2, ಅಜಂತ ಮೆಂಡಿಸ್ 1 ವಿಕೆಟ್‌ನಿಂದ ಗಮನ ಸೆಳೆದರು. ರಂಗನಾ ಹೇರತ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications