Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಲೆಜೆಂಡ್ಸ್ ಸೋಲಿಸಿದ ವೆಸ್ಟ್‌ ಇಂಡೀಸ್ ಲೆಜೆಂಡ್ಸ್‌ ಸೆ.ಫೈ.ಗೆ ಪ್ರವೇಶ

Road Safety World Series: West Indies Legends to clash with India Legends in semi final

ರಾಯ್‌ಪುರ್: ರಾಯ್‌ಪುರ್‌ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್‌ 16) ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 16ನೇ ಪಂದ್ಯದಲ್ಲಿ ಇಂಗ್ಲೆಂಡ್ ಲೆಜೆಂಡ್ಸ್‌ ತಂಡವನ್ನು 5 ವಿಕೆಟ್‌ನಿಂದ ಸೋಲಿಸಿರುವ ವೆಸ್ಟ್‌ ಇಂಡೀಸ್ ಲೆಜೆಂಡ್ಸ್‌ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಮಾರ್ಚ್ 17ರಂದು ನಡೆಯುವ ಸೆಮಿಫೈನಲ್‌ 1 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಲೆಜೆಂಡ್ಸ್‌ ಮತ್ತು ಇಂಡಿಯಾ ಲೆಜೆಂಡ್ಸ್‌ ತಂಡಗಳು ಕಾದಾಡಲಿವೆ. ಡ್ವೇನ್ ಸ್ಮಿತ್ ಮತ್ತು ನರಸಿಂಗ್ ಡಿಯೋನರೈನ್ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಕೆರಿಬಿಯನ್ಸ್ ದಂತಕತೆಗಳ ತಂಡ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಲೆಜೆಂಡ್ಸ್‌, ಫಿಲ್ ಮಸ್ಟಾರ್ಡ್ 57, ನಾಯಕ ಕೆವಿನ್ ಪೀಟರ್ಸನ್ 38, ಜಿಮ್ ಟ್ರಾಟನ್ 22, ಓವೈಸಿ ಶಾ ಅಜೇಯ 53, ಕ್ರಿಸ್ ಟ್ರೆಮ್ಲೆಟ್ 9 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 186 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಲೆಜೆಂಡ್ಸ್‌, ಡ್ವೇನ್ ಸ್ಮಿತ್ 58 (31), ರಿಡ್ಲಿ ಜೇಕಬ್ 13, ನರಸಿಂಗ್ ಡಿಯೋನರೈನ್ 53, ಎರಿಕ್ ಎಡ್ವರ್ಡ್ಸ್ 34 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 187 ರನ್ ಗಳಿಸಿತು. ಡ್ವೇನ್ ಸ್ಮಿತ್ ಪಂದ್ಯಶ್ರೇಷ್ಠರೆನಿಸಿದರು.

Story first published: Tuesday, March 16, 2021, 23:52 [IST]
Other articles published on Mar 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+