ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಅವರಲ್ಲಿ ಇನ್ನು ಟೆಸ್ಟ್ ಕ್ರಿಕೆಟ್ ಆಡುವ ಕ್ಷಮತೆ ಇರುವುದಾಗಿ ಉತ್ತಪ್ಪ ತಿಳಿಸಿದ್ದಾರೆ. ಅಲ್ಲದೆ ಅವರು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ಒಳ್ಳೆಯದು ಎಂದು ಸಹ ಹೇಳಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಯಾವುದೇ ಪ್ರಶ್ನೆಗಳು ಇಲ್ಲ. ಇವರ ತಮ್ಮ ಆಲ್‌ರೌಂಡರ್ ಆಟದಿಂದ ತಂಡಕ್ಕೆ ನೆರವಾಗಬೇಕಿದೆ. "ಭಾರತ ಟೆಸ್ಟ್ ತಂಡದ ಸಂಯೋಜನೆ ಸ್ಥಿರವಾಗಿಲ್ಲ. ಈ ಸಂಯೋಜನೆಯಲ್ಲಿ ಯಾವುದೇ ಫಿಕ್ಸ್ ರೋಲ್ ಇಲ್ಲ. ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡ ಅವಶ್ಯಕತೆ ಅನುಸಾರವಾಗಿ ಮಣೆ ಹಾಕುತ್ತದೆ. ಹಾರ್ದಿಕ್ ಅವರ ವರ್ಕ್‌ಲೋಡ್ ಮ್ಯಾನೇಜ್ ಮಾಡಿದರೆ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಬಹುದು.

ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಬೆಸ್ಟ್. ಅವರು ಆಡುವ ಧಾಟಿಗೆ ಈ ಕ್ರಮಾಂಕ ಸೂಕ್ತ. ಒಂದು ವೇಳೆ ಹಾರ್ದಿಕ್ ಟೆಸ್ಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದರೆ, ಇವರ ಆಸೆಗೆ ಯಾರು ಬೇಡ ಎನ್ನಲು ಸಾಧ್ಯವಿಲ್ಲ. ಆದರೆ ಇವರು ಬೇರೆ ಬೌಲರ್‌ಗಳಂತೆ ಟೆಸ್ಟ್‌ನಲ್ಲಿ ದೊಡ್ಡ ಸ್ಪೆಲ್‌ಗಳನ್ನು ಬೌಲ್ ಮಾಡಲಾರರು ಎಂದು ಸಹ ಉತ್ತಪ್ಪ ತಿಳಿಸಿದ್ದಾರೆ.
ಸದ್ಯ ಟೀಮ್ ಇಂಡಿಯಾದಲ್ಲಿರುವ ನಿತೀಶ್ ಕುಮಾರ್ ರೆಡ್ಡಿ ಸಹ ಇನಿಂಗ್ಸ್‌ನಲ್ಲಿ 20 ಓವರ್ ಬೌಲಿಂಗ್ ಮಾಡುವುದಿಲ್ಲ. ಇವರು ಸಹ ಸಾಮಾನ್ಯವಾಗಿ 12 ಓವರ್ ಬೌಲ್ ಮಾಡುತ್ತಾರೆ. ಹಾರ್ದಿಕ್ ಸಹ 12 ರಿಂದ 15 ಓವರ್‌ಗಳನ್ನು ಬೌಲಿಂಗ್ ಮಾಡಬಲ್ಲರು. ಅವರು ಫಿಟ್ ಆಗಿದಲ್ಲಿ ತಂಡಕ್ಕೆ ಬೌಲಿಂಗ್‌ನಲ್ಲೂ ಕಾಣಿಕೆ ನೀಡಬಹುದು ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ 2018ರಲ್ಲಿ ಕೊನೆಯ ಬಾರಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಿದ್ದರು. ಇವರು ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಕ್ರಿಕೆಟ್‌ನಿಂದ ಹೊರ ನಡೆದಿದ್ದರು. ಅಲ್ಲಿಂದ ಇವರು ಸೀಮಿತ ಓವರ್‌ಗಳ ಪಂದ್ಯಗಳ ಮೇಲೆ ಮಾತ್ರ ಚಿತ್ತ ನೆಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಆಡಿದ 11 ಟೆಸ್ಟ್ ಪಂದ್ಯಗಳಲ್ಲಿ 31.29ರ ಸರಾಸರಿಯಲ್ಲಿ 17 ವಿಕೆಟ್ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಈಗಾಗಲೇ ಐಸಿಸಿ ವೈಟ್ ಬಾಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಇವರ ಸಾಧನೆಯ ಪಟ್ಟಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿ ಮಾತ್ರ ಬಾಕಿ ಇದೆ.
ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು ಗೆದ್ದಿದ್ದಾರೆ, ಆದರೆ ಅವರ ಸಾಧನೆಯ ಪಟ್ಟಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಮಾತ್ರ ಬಾಕಿ ಉಳಿದಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇನ್ನೇನು ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಹಾರ್ದಿಕ್ ಅವರು ಏಕದಿನ ಸರಣಿಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಇವರ ವರ್ಕ್ ಲೋಡ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಬಹುದು. ಹಾರ್ದಿಕ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡಲಿದ್ದು, ತಂಡದ ಟ್ರಂಪ್ ಕಾರ್ಡ್ ಆಗಿರಲಿದ್ದಾರೆ.