For Quick Alerts
ALLOW NOTIFICATIONS  
For Daily Alerts
 

Robin Uthappa: ವಿವಾದದ ಕಿಚ್ಚು ಹಚ್ಚಿಸಿದ ಕನ್ನಡಿಗನ ಹೇಳಿಕೆ: ಕೊಹ್ಲಿಗೆ ಬಗ್ಗೆ ಹೆಳಿದ್ದೇನು?

ಟೀಮ್ ಇಂಡಿಯಾದ ಪರ ಅದೆಷ್ಟೋ ಕನ್ನಡಿಗರು ಆಡಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಆಡುತ್ತಲೇ ಇದ್ದಾರೆ. ಇದರಲ್ಲಿ ಕೆಲವು ಆಟಗಾರರಿಗೆ ಮಾತ್ರ ವಿಶ್ವಕಪ್‌ ವಿಜೇತ ತಂಡದಲ್ಲಿ ಸ್ಥಾನ ಲಭಿಸಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ರಾಬಿನ್ ಉತ್ತಪ್ಪ. ಇವರು ತಮ್ಮ ಭರ್ಜರಿ ಆಟದ ಪ್ರದರ್ಶನದ ಬಲದಿಂದ ಸದ್ದು ಮಾಡಿದ್ದ ಪ್ಲೇಯರ್‌. ಈಗ ಇವರು ವೀಕ್ಷಕ ವಿವರಣೆ ಹಾಗೂ ಕ್ರಿಕೆಟ್‌ ಸಂಬಂಧಿತ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ. ಈಗ ಇವರು ನೀಡಿರುವ ಒಂದು ಹೇಳಿಕೆ ವಿವಾದ ಕಿಚ್ಚು ಹಚ್ಚಿದೆ.

ರಾಬಿನ್‌ ಉತ್ತಪ್ಪ ಇತ್ತೀಚಿಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ವಿಶ್ವ ವಿಜೇತ ತಂಡದ ಆಟಗಾರ ಯುವರಾಜ್‌ ಸಿಂಗ್‌ ಅವರನ್ನು ಭಾರತ ತಂಡದಿಂದ ಹೊರಗಿಡಲು ಇವರೇ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ. ಹಾಗಿದ್ದರೆ ಈ ಆರೋಪವನ್ನು ರಾಬಿನ್‌ ಯಾರ ಮೇಲೆ ಮಾಡುತ್ತಾ ಇದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.

Robin Uthappa Sparks Controversy Blames Virat Kohli for Yuvraj Singh s Early Exit from Team India

ಯಾರ ಬಗ್ಗೆ ರಾಬಿನ್ ಹೇಳಿಕೆ?

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರಾಬಿನ್‌ ಉತ್ತಪ್ಪ ಅವರ ನೇರ ಟಾರ್ಗೆಟ್‌. ಕೊಹ್ಲಿ ಎಂದಿಗೂ ಯುವರಾಜ್‌ ಸಿಂಗ್‌ಗೆ ಸಹಾಯ ಮಾಡಲೇ ಇಲ್ಲ. ಇವರ ಸಾಧನೆಯನ್ನು ಗುರುತಿಸುವಲ್ಲಿ ಎಡವಿದ್ದ ಕೊಹ್ಲಿ, ಅವರನ್ನು ತಂಡದಿಂದ ಹೊರಗಿಡಲು ಕಾರಣಿಕರ್ತರಾದರು. ಹೀಗಾಗಿ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಬೇಗನೆ ಮುಕ್ತಾಯ ಗೊಂಡಿತು.

ವಿಶ್ವಕಪ್‌ ತೊಡಿಸಿದ ಪ್ಲೇಯರ್‌

ಯುವರಾಜ್‌ ಸಿಂಗ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಹಾಗೂ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಚಾಂಪಿಯನ್ ಮುಕುಟ ತೊಡಿಸಿದ್ದರು. ಏಕದಿನ ವಿಶ್ವಕಪ್‌ ವೇಳೆಯೇ ಅವರಿಗೆ ರಕ್ತದ ವಾಂತಿ ಆದರೂ ಸಹ ತಲೆ ಕೆಡಿಸಿಕೊಳ್ಳದೇ ದೇಶಕ್ಕಾಗಿ ಆಡುವ ಮನೋಭಾವ ಹೊಂದಿದ್ದ ಪ್ಲೇಯರ್‌. ಇವರಿಗೆ ಕ್ಯಾನ್ಸರ್‌ ಎಂಬ ಮಹಾಮಾರಿ ಕಾಣಿಸಿಕೊಂಡು, ವಿದೇಶದಲ್ಲಿ ಚಿಕಿತ್ಸೆ ಪಡೆದು ಬಳಿಕ ಮತ್ತೆ ಮೈದಾನದಲ್ಲಿ ಅಬ್ಬರಿಸಿದ ಆಟಗಾರ ಎಂದು ರಾಬಿನ್ ನೆನಪಿಸಿಕೊಂಡಿದ್ದಾರೆ.

ಸಡಿಲಿಕೆ ಬೇಕಿತ್ತು

ಯುವರಾಜ್‌ ಅವರ ಮೇಲೆ ಕೊಹ್ಲಿ ಫಿಟ್ನೆಸ್ ಮಾನದಂಡಗಳನ್ನು ಹೇರುತ್ತಲೇ ಸಾಗಿದರು. ಇದರಿಂದ ಸ್ಟಾರ್ ಆಟಗಾರರನ್ನು ತಂಡದಿಂದ ಕೈ ಬಿಡಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ನಾಯಕರಾಗಿ ನೀವು ಅವರನ್ನು ಬ್ಯಾಕ್ ಮಾಡಬಹುದಿತ್ತು ಎಂದು ರಾಬಿನ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ, ಯುವರಾಜ್‌ ಅವರಿಗೆ ಕೊಂಚ ರಿಯಾಯಿತಿ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

Robin Uthappa Sparks Controversy Blames Virat Kohli for Yuvraj Singh s Early Exit from Team India

ಕೆಲವೊಮ್ಮೆ ಮಾನದಂಡಗಳನ್ನು ನಾವು ಕೊಂಚ ಸಡಿಲ ಮಾಡಬಹುದು. ಈ ಅವಕಾಶ ನಾಯಕನಿಗೆ ಇರುತ್ತದೆ. ಅವರ ಕ್ರೀಡಾ ಸ್ಪೂರ್ತಿ ಹಾಗೂ ಅವರ ಹೋರಾಟದ ಮನೋ ಧರ್ಮಕ್ಕೂ ಯಾವುದೇ ಬೆಲೆ ನೀಡಲಿಲ್ಲ ಎಂದು ರಾಬಿನ್‌ ಕೊಹ್ಲಿ ಅವರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ.

ಫಿಟ್ನೆಸ್‌ ಪರೀಕ್ಷೆಯ ಸಮಯದಲ್ಲಿ ಯುವಿ 2 ಅಂಕ ಸಡಿಲಿಕೆ ಕೇಳಿದ್ದರು. ಆದರೆ ತಂಡದ ನಾಯಕ ಅದನ್ನು ನಿರಾಕರಿಸಿದರು. ಇದರ ಹೊರತಾಗಿಯೂ ಹೋರಾಡಿ ಪಿಟ್ನೆಸ್ ಪರೀಕ್ಷೆಯಲ್ಲಿ ಪಾಸ್‌ ಆಗಿ ತಂಡಕ್ಕೆ ಬಂದು ಅಮೋಘ ಆಟವನ್ನು ಆಡಿದ್ದಾರೆ ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.

Story first published: Friday, January 10, 2025, 12:48 [IST]
Other articles published on Jan 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+