ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಇಳಿದ ರೋಜರ್ ಬಿನ್ನಿ: ಏಕೆ?
ಮಹತ್ವದ ಬೆಳವಣಿಗೆ ಒಂದರಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ರಾಜೀನಾಮೆ ನೀಡಿದ್ದಾರೆ. ಇವರ ಸ್ಥಾನದಲ್ಲಿ ರಾಜೀವ್ ಶುಕ್ಲಾ ಅವರನ್ನು ನೇಮಿಸಲಾಗಿದೆ. ಮುಂದಿನ ಚುನಾವಣೆಯ ವರೆಗೂ ಬಿಸಿಸಿಐ ಅಧ್ಯಕ್ಷ ಹುದ್ದೆ ರಾಜೀವ್ ಶುಕ್ಲಾ ಅವರ ಬಳಿ ಇರುತ್ತದೆ ಎಂದು ತಿಳಿದು ಬಂದಿದೆ. ಬುಧವಾರ ಅಪೆಕ್ಸ್ ಕೌನಿಲ್ ಸಭೆ ನಡೆದಿದೆ ಎಂದು ತಿಳಿದು ಬಂದಿದೆ.
ಬಿಸಿಸಿಐ ನಿಯಮಗಳ ಪ್ರಕಾರ 70 ವಯಸ್ಸಿಗೆ ಹುದ್ದೆಯನ್ನು ತೊರೆಯಬೇಕಾಗುತ್ತದೆ. ಬಿನ್ನಿ ಬೆಂಗಳೂರಿನಲ್ಲಿ ಜುಲೈ 19, 1955ರಲ್ಲಿ ಜನಿಸಿದ್ದರು. ಹೀಗಾಗಿ ಇವರು ನಿಯಮಗಳ ಪ್ರಕರಾ ಅರ್ಹರಲ್ಲ. ಹೀಗಾಗಿ ಇವರ ಬಲದಿಗೆ ರಾಜೀವ್ ಶುಕ್ಲಾ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಇವರು ಸುಮಾರು ಆರು ತಿಂಗಳ ಕಾಲ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಲಿದ್ದಾರೆ. ವಹಿಸಿಕೊಳ್ಳಲಿದ್ದಾರೆ. 2020 ರಿಂದ ಶುಕ್ಲಾ ಬಿಸಿಸಿಐನ ಉಪಾಧ್ಯಕ್ಷರಾಗಿದ್ದಾರೆ. ಇವರಿಗೆ 65 ವಯಸ್ಸು.

ಏನು ಹೇಳುತ್ತೇ ನಿಯಮ
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಂದ ತೆರವಾದ ಸ್ಥಾನಕ್ಕೆ ರೋಜರ್ ಬಿನ್ನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅಲ್ಲದೆ ಇವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವರ ವಯಸ್ಸು 80 ದಾಟಿದ್ದರಿಂದ ಇವರು ಈ ಸ್ಥಾನವನ್ನು ತ್ಯಜಿಸಬೇಕಾಯಿತು. ಸುಪ್ರೀಂ ಕೋರ್ಟ್‌ನ ಲೋಧಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಬಿಸಿಸಿಐ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬಿಸಿಸಿಐನ ಪ್ರಸ್ತುತ ಸಂವಿಧಾನದ ಪ್ರಕಾರ, ಅದರ ಅಧಿಕಾರಿಗಳ ಗರಿಷ್ಠ ವಯಸ್ಸಿನ ಮಿತಿ 70 ವರ್ಷಗಳು. ಇದನ್ನು ಮೀರಿದ ವ್ಯಕ್ತಿಗಳನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗುವುದಿಲ್ಲ.
ಮುಂದಿನ ತಿಂಗಳು ಬಿಸಿಸಿಐ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿಯ ವರೆಗೆ ಬಿಸಿಸಿಐ ವ್ಯವಹಾರಗಳನ್ನು ಹಂಗಾಮಿ ಅಧ್ಯಕ್ಷರಾಗಿರುವ ಶುಕ್ಲಾ ಅವರು ನೋಡಿಕೊಳ್ಳಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಾರ್ಷಿಕ ಸಭೆಯಲ್ಲಿ ರಾಜ್ಯ ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವನ್ನು ಆಧರಿಸಿ ಪೂರ್ಣಕಾಲಿಕ ಅಧ್ಯಕ್ಷರ ನೇಮಕದ ಬಗ್ಗೆ ನಿರ್ಣುಯವನ್ನು ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ. ಇನ್ನು ಇತ್ತೀಚಿಗೆ ಸಂಸತ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಮಸೂದೆಯಲ್ಲಿ ಪದಾಧಿಕಾರಿಗಳ ವಯೋಮಿತಿಯನ್ನು 75 ವರ್ಷಗಳಿಗೆ ಏರಿಸಲಾಗಿದೆ. ಹೀಗಾಗಿ ಬಿನ್ನಿ ಮುಂದಿನ ಸಭೆಯ ವರೆಗೂ ಸಾಧ್ಯತೆ ಇದೆ ಎಂದು ವರದಿಗಳು ಸಹ ಬರುತ್ತಿವೆ.
ಬುಧವಾರ ಬಿಸಿಸಿಐ ಸಭೆ ನಡೆದಿದೆ ಎಂದು ತಿಳಿದು ಬಂದಿದ್ದು, ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವರದಿಗಳಾಗಿವೆ. ಅಲ್ಲದೆ ಏಷ್ಯಾ ಕಪ್ ಟಿ20ಗೂ ಮುನ್ನ ಪ್ರಾಯೋಜಕರನ್ನು ಹುಡುಕುವುದು ಪ್ರಮುಖ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ನಿಷೇಧಿಸಿದ್ದರಿಂದ ಡ್ರೀಮ್ 11 ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಸೆ.9 ರಂದು ಏಷ್ಯಾ ಕಪ್ ಆರಂಭವಾಗಲಿದ್ದು, ಇದಕ್ಕೂ ಮುನ್ನ ಪ್ರಾಯೋಜಕರನ್ನು ಹುಡುಕುವುದು ದೊಡ್ಡ ಸವಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications