BCCI: ಕಾರ್ಯದರ್ಶಿ ಹುದ್ದೆಗೆ ಮತ್ತೊಬ್ಬ ಬಿಜೆಪಿ ಹಿರಿಯ ನಾಯಕನ ಪುತ್ರ ಎಂಟ್ರಿ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಐಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ನಾಮನಿರ್ದೇಶನ ಮಾಡದಿರಲು ನಿರ್ಧರಿಸಿದ್ದಾರೆ. ಇದರಿಂದಾಗಿ ಈ ಹುದ್ದೆ ಜಯ್ ಶಾ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನವಾಗಿದೆ. ಜಯ್ ಶಾ ಅವರು ಆಗಸ್ಟ್ 26 ರಂದು ಸಂಜೆಯವರೆಗೆ ಅರ್ಜಿ ಸಲ್ಲಿಸಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಜಯ್ ಶಾ ಐಸಿಸಿ ಅಧ್ಯಕ್ಷರಾದರೆ ಬಿಸಿಸಿಐ ಮೇಲೂ ಗಾಢ ಪರಿಣಾಮ ಬೀರಲಿದೆ.

ಶಾ ಬದಲಿಗೆ ಯಾರು?
ಜಯ್ ಶಾ ಅವರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಇನ್ನೂ ಒಂದು ವರ್ಷ ಅಧಿಕಾರವಧಿ ಬಾಕಿ ಉಳಿದಿದೆ. ಇವರು ಐಸಿಸಿ ಅಧ್ಯಕ್ಷರಾದ ನಂತರ ಅವರಿಗೆ ನಾಲ್ಕು ವರ್ಷಗಳ ಕಾಲ ಬಿಸಿಸಿಐನಲ್ಲಿ ಯಾವುದೇ ಹುದ್ದೆಯಲ್ಲಿರಲು ನಿರ್ಬಂಧ ಸಾಧ್ಯವಿಲ್ಲ. 35ನೇ ವಯಸ್ಸಿನಲ್ಲಿ ಅವರು ಐಸಿಸಿ ಇತಿಹಾಸದಲ್ಲಿ ಅತ್ಯಂತ ಕಿರಿಯ ಬಾಸ್ ಆಗುವ ಆವಕಾಶವನ್ನು ಹೊಂದಿದ್ದಾರೆ. ಈಗ ದೊಡ್ಡ ಪ್ರಶ್ನೆ ಏನೆಂದರೆ ಅವರು ಐಸಿಸಿಯ ಮುಖ್ಯಸ್ಥರಾದರೆ ಬಿಸಿಸಿಐನಲ್ಲಿ ಜಯ್ ಶಾ ಬದಲಿಗೆ ಯಾರು?
ಬಿಜೆಪಿ ಹಿರಿಯ ನಾಯಕನ ಪುತ್ರ?
ದೈನಿಕ್ ಭಾಸ್ಕರ್ ವರದಿ ಪ್ರಕಾರ, ಜಯ್ ಶಾ ಬದಲಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ಅವರ ಹೆಸರು ಮುನ್ನೆಲೆಗೆ ಬರುತ್ತಿದೆ. ಅವರು ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ರೋಹನ್ ಪ್ರಸ್ತುತ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಯ್ ಶಾ ಅವರ ನಿರ್ಗಮನದ ನಂತರವೂ, ಹಾಲಿ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಇತರ ಉನ್ನತ ಬಿಸಿಸಿಐ ಅಧಿಕಾರಿಗಳು ತಮ್ಮ ಪಾತ್ರಗಳಲ್ಲಿ ಮುಂದುವರಿಯುತ್ತಾರೆ. ಏಕೆಂದರೆ ಅವರು ಅಧಿಕಾರವಧಿ ಇನ್ನೂ ಒಂದು ವರ್ಷ ಉಳಿದಿದೆ.
ರೋಹನ್ ಜೇಟ್ಲಿ ಆಯ್ಕೆ ಏಕೆ?
ರೋಹನ್ ಜೇಟ್ಲಿ ಅವರು ಬಿಜೆಪಿಯ ಮಾಜಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಪುತ್ರ. ಬಿಸಿಸಿಐಗೆ ಅರುಣ್ ಜೇಟ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದರಿಂದಾಗಿ ಬಿಸಿಸಿಐನಲ್ಲಿ ರೋಹನ್ ಜೇಟ್ಲಿ ಕೂಡ ಗಟ್ಟಿಯಾದ ಹಿಡಿತ ಹೊಂದಿದ್ದಾರೆ.
ಡಿಡಿಸಿಎ ಅಧ್ಯಕ್ಷರಾಗಿ ರೋಹನ್ ಜೇಟ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಕ್ರೀಡಾ ನಿರ್ವಾಹಕರಾಗಿ ಬಹಳ ಅನುಭವಿದೆ. ಜೊತೆಗೆ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications